ADVERTISEMENT

ದಿನ ಭವಿಷ್ಯ: ಈ ರಾಶಿಯ ಐ.ಟಿ ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಡಿಸೆಂಬರ್ 2023, 23:12 IST
Last Updated 3 ಡಿಸೆಂಬರ್ 2023, 23:12 IST
   
ಮೇಷ
  • ನಿಮ್ಮ ಸಣ್ಣ ಬುದ್ಧಿಯಿಂದಾಗಿ ಸಮಾಜದಲ್ಲಿ ಜನರ ಅಪಹಾಸ್ಯಕ್ಕೆ ಕಾರಣವಾಗುವ ಸಾಧ್ಯತೆಗಳಿದೆ. ಕೆಲಸದ ಗುಣಮಟ್ಟ, ಕರ್ತವ್ಯ ನಿಷ್ಠೆಯು ಮೇಲಧಿಕಾರಿಗಳ ಗಮನಕ್ಕೆ ಬಂದು ಬಡ್ತಿಗೆ ಮೂಲ ಕಾರಣವಾಗುತ್ತದೆ.
  • ವೃಷಭ
  • ನವೋದ್ಯಮಿಗಳಿಗೆ ಅನ್ಯರ ಸಹಾಯ ಸಹಕಾರ ಪ್ರಾಪ್ತಿಯಾಗಿ ವೃತ್ತಿಪರವಾದ ಹುಮ್ಮಸ್ಸು ಇಮ್ಮಡಿಗೊಳ್ಳುವುದು. ಲೇವಾದೇವಿ ವ್ಯವಹಾರಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿ. ಮನಶ್ಶಾಂತಿ ಇರುವುದು.
  • ಮಿಥುನ
  • ನೂತನವಾಗಿ ಆರಂಭಿಸಿದ ವ್ಯವಹಾರದಲ್ಲಿ ಅನುಭವದ ಕೊರತೆಯಿಂದಾಗಿ ನಷ್ಟ ಸಂಭವಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೆಚ್ಚಿನ ಅಧ್ಯಯನ ಅಗತ್ಯ. ಸಾಹಿತ್ಯದಲ್ಲಿ ಅಭಿರುಚಿ ಹೆಚ್ಚುತ್ತದೆ.
  • ಕರ್ಕಾಟಕ
  • ತಂದೆ ಅಭಿಪ್ರಾಯಕ್ಕೆ ಬೆಲೆ ಕೊಡಿ, ನಿಮ್ಮ ಯಶಸ್ಸಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಹೃದಯ ಶ್ರೀಮಂತಿಕೆಯಿಂದ ಕೈಗೊಂಡ ಕಾರ್ಯಗಳನ್ನು ನಿರಾತಂಕವಾಗಿ ನೆರವೇರಿಸುವಿರಿ. ದೂರ ಪ್ರಯಾಣದ ಸಾಧ್ಯತೆಗಳು ಹೆಚ್ಚಿವೆ.
  • ಸಿಂಹ
  • ಇತರರಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಇಂದು ಸೂಕ್ತವಾದ ಸಮಯ. ಪೋಲೀಸ್ ಅಧಿಕಾರಿಗಳಿಗೆ ಶಿಕ್ಷೆಯ ವರ್ಗಾವಣೆಯಾಗುವ ಸಂಭವವಿದೆ. ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ.
  • ಕನ್ಯಾ
  • ನಿಮ್ಮಲ್ಲಿರುವ ಮಾತಿನ ಚತುರತೆಯಿಂದ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರುವುದು. ಮಾನಸಿಕ ಸ್ಥಿತಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಲಿದೆ. ಬಂಧುಗಳೊಡನೆ ವಿವಾದವನ್ನು ಮಾಡಬೇಡಿ.
  • ತುಲಾ
  • ನಿಮಗೆ ಎದುರಾಗಿರುವ ಕೌಟುಂಬಿಕ ಸಂದಿಗ್ಧತೆಯನ್ನು ಮಾರ್ಗದರ್ಶಕರ ಸಲಹೆ ಪಡೆದು, ನಿಭಾಯಿಸುವುದು ಒಳ್ಳೆಯದು. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯ ಹೊಂದುವಿರಿ.
  • ವೃಶ್ಚಿಕ
  • ಇಂದು ನಿಮ್ಮ ಸಹೋದ್ಯೋಗಿಗಳ ಯಾವುದೇ ತರಹದ ಒತ್ತಡಕ್ಕೆ ಮಣಿಯದೆ ಕೆಲಸದಲ್ಲಿ ಮುನ್ನುಗ್ಗಿ. ತಾಯಿಯ ಸಲಹೆಯಿಂದಾಗಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲಗಳು ನಿವಾರಣೆಯಾಗುತ್ತದೆ.
  • ಧನು
  • ಅಧ್ಯಯನದಲ್ಲಿ ಆಸಕ್ತಿ ಹೆಚ್ಚುವುದು ಹಾಗೂ ಅಧ್ಯಯನಶೀಲರಿಗೆ ಜ್ಞಾನಾರ್ಜನೆ ಆಗುವುದು. ಕೆಲಸದಲ್ಲಿ ಬಹಳ ದಿನಗಳಿಂದ ಇದ್ದಂತಹ ಸಮಸ್ಯೆ ಬಗೆ ಹರಿಯುವುದು. ಔಷಧಿ ಮಾರಾಟಗಾರರು ವೃತ್ತಿಯಲ್ಲಿ ಜಾಗ್ರತೆವಹಿಸಿ.
  • ಮಕರ
  • ಹಣಕಾಸಿನ ವ್ಯಾಮೋಹ, ಬಯಕೆ ಹೆಚ್ಚಾಗುವ ಪರಿಣಾಮ ಪಶ್ಚಾತಾಪಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ಸಂಜೆಯ ಸಮಯದಲ್ಲಿ ಪ್ರೀತಿ ಪಾತ್ರರೊಡನೆ ಕಾಲ ಕಳೆಯುವಿರಿ. ಶ್ರೀ ದುರ್ಗಾದೇವಿಯನ್ನು ಭಜಿಸಿ.
  • ಕುಂಭ
  • ಮಾಧ್ಯಮ ಮಿತ್ರರಿಂದ ತಪ್ಪು ಮಾಹಿತಿ ರವಾನೆಯಾಗಬಹುದು, ವೃತ್ತಿಯಲ್ಲಿ ಜಾಗ್ರತೆವಹಿಸಿ. ಮಗಳ ಮದುವೆಯ ನಿಶ್ಚಯ ಸಂತೋಷವನ್ನು ಉಂಟುಮಾಡುತ್ತದೆ. ಕೃಷಿ ಉತ್ಪನ್ನಗಳಿಂದ ಉತ್ತಮ ಆದಾಯವಿದೆ.
  • ಮೀನ
  • ಐ.ಟಿ ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ, ಅದರ ಪರಿಣಾಮವಾಗಿ ವರಮಾನ ಹೆಚ್ಚಳದ ಸಂಭವ ಇರುವುದು. ವೃತ್ತಿ ನೈಪುಣ್ಯತೆಯಿಂದ ಉನ್ನತಾಧಿಕಾರಿಯ ಹುದ್ದೆಗೆ ನೇಮಕಗೊಳ್ಳುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.