ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಹಿತಶತ್ರುಗಳಿಂದ ಪೀಡೆಯು ಹೆಚ್ಚಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಏಪ್ರಿಲ್ 2024, 23:50 IST
Last Updated 5 ಏಪ್ರಿಲ್ 2024, 23:50 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಸ್ವಂತ ಪ್ರಯತ್ನದಿಂದ ನಿಮಗೆ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುವ ಸದವಕಾಶ ಈ ದಿನ ಪ್ರಾಪ್ತಿ . ಸಕಾರಾತ್ಮಕ ನಡವಳಿಕೆಗಳಿಂದಾಗಿ ಲಾಭ ಕಂಡುಕೊಳ್ಳಲಿದ್ದೀರಿ.
  • ವೃಷಭ
  • ಕಬ್ಬಿಣದ ಕೆಲಸ ಮಾಡುವವರಿಗೆ ಅಧಿಕ ದೇಹಾಯಾಸವಾಗುವ ಸಂಭವವಿದೆ. ಸರ್ಕಾರಿ ನೌಕರರಿಗೆ ಇತರೆ ಕಾರ್ಯಗಳಿಂದ ಅಧಿಕವಾದ ಒತ್ತಡ ಉಂಟಾಗಬಹುದು. ಗಮನವಿಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸುವಿರಿ.
  • ಮಿಥುನ
  • ಗುರು ಹಿರಿಯರ ಸಲಹೆ-ಸೂಚನೆಗಳಿಗೆ ಬೆಲೆ ಕೊಟ್ಟು ಕೆಲಸದಲ್ಲಿ ಮುಂದುವರಿಯುವುದು ಉತ್ತಮ. ಕುಟುಂಬದ ವಿಷಯಗಳನ್ನು ಮನೆಯ ವರೊಂದಿಗೆ ಚರ್ಚಿಸಿ. ವಿವಾದಾಸ್ಪದ ವಿಷಯಗಳ ಕಡೆ ಗಮನ ಕೊಡಬೇಡಿ.
  • ಕರ್ಕಾಟಕ
  • ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ಮಾರ್ಗದರ್ಶಿಗಳ ಮಾತಿನಂತೆ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ತಾಮ್ರದ ವಸ್ತುವಿನಿಂದ ಅಥವಾ ಅದರ ಮಾರಾಟದಿಂದ ಲಾಭವಿದೆ.
  • ಸಿಂಹ
  • ತೋಟದ ಬೆಳೆಗಳಿಂದ ಉತ್ತಮ ಆದಾಯದೊಂದಿಗೆ ಮುಂದಿನ ಬೆಳೆಯ ವಿಸ್ತರಣೆಯ ಬಗ್ಗೆ ಯೋಚನೆ ನಡೆಸುವಿರಿ. ಮಕ್ಕಳ ಬೆಳವಣಿಗೆಗೆ ಚಿಕಿತ್ಸೆ ಬೇಕಾಗಬಹುದು. ಜೀರ್ಣಾಂಗ ಸಮಸ್ಯೆ ಕಾಡಬಹುದು.
  • ಕನ್ಯಾ
  • ಮೇಲಧಿಕಾರಿಯ ಮೃದು ವರ್ತನೆಯಿಂದ ಸರ್ಕಾರದ ಕೆಲಸ ಕಾರ್ಯಗಳಲ್ಲಿ ತೃಪ್ತಿಯುಂಟಾಗಿ, ಯಶಸ್ವಿಯಾಗಿ ಸಂಪೂರ್ಣಗೊಳ್ಳುವುದು. ಬಂಧು ಮಿತ್ರರ ನೆರವು ಸಿಗಲಿದೆ.
  • ತುಲಾ
  • ಅಭಿವೃದ್ಧಿಯನ್ನು ಸಹಿಸಲಾಗದ ಜನರ ಮಧ್ಯದಲ್ಲಿ ಜೀವನ ನಡೆಸಬೇಕಾಗುತ್ತದೆ. ಕೃಷಿಗೆ ಹೆಚ್ಚಿನ ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
  • ವೃಶ್ಚಿಕ
  • ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಜೀವನದಲ್ಲಿ ನಡೆಯಲಿದೆ. ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗಿಸುವ ಬಗ್ಗೆ ಯೋಚಿಸಿ. ಬುದ್ಧಿವಂತಿಕೆಯಿಂದ ಬದುಕಬೇಕಾದ ದಿನ.
  • ಧನು
  • ಸಹೋದರರೊಂದಿಗಿನ ಮನಸ್ತಾಪ ಮುಕ್ತವಾದ ಮಾತುಕತೆಯಿಂದಾಗಿ ದೂರಾಗುವುದು. ನಿಲುವು ಸ್ಪಷ್ಟಪಡಿಸಿಕೊಂಡಲ್ಲಿ ಗೆಲುವು ನಿಮ್ಮದಾಗುವುದು. ಮಾಡಿದ ಪಾಪ ತೊಳೆಯುವುದು.
  • ಮಕರ
  • ಹಿತಶತ್ರುಗಳಿಂದ ಪೀಡೆಯು ಹೆಚ್ಚಾಗಿ ಗುರಿಯ ಮಾರ್ಗಕ್ಕೆ ಅಡ್ಡಗಲ್ಲಾಗುವರು. ಸ್ನೇಹಿತರೊಬ್ಬರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುವ ಸಂಭವ ಬರಬಹುದು. ನಿಯಮ ಪಾಲನೆ ಮಾಡುವುದನ್ನು ಅಭ್ಯಾಸ ಮಾಡಿ.
  • ಕುಂಭ
  • ಕೈಗೊಳ್ಳುವ ವಿಶೇಷ ಹಾಗೂ ಮುಖ್ಯವಾದ ಕೆಲಸದ ಮುಕ್ತಾಯದ ಹಂತ ವಿಳಂಬವಾಗುತ್ತದೆ. ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಹೆಚ್ಚಿನ ಗಮನವಿರಲಿ. ಕಪ್ಪು ಬಣ್ಣ ಶುಭ ತರಲಿದೆ.
  • ಮೀನ
  • ಹೊಸ ಕಟ್ಟಡ ನಿರ್ಮಾಣ ಕಾರ್ಯಗಳ ಒಪ್ಪಂದದ ಏರ್ಪಟ್ಟು ಬಹಳ ಸಂತೋಷವಾಗುವುದು. ಈ ದಿನ ನಿಮಗೆ ಮಾರ್ಗದರ್ಶನಕ್ಕೆ ಕೊರತೆ ಇರುವುದಿಲ್ಲ. ಮನೆಯಲ್ಲಿ ಹಣಕಾಸಿನ ವಿಷಯದಲ್ಲಿ ಚರ್ಚೆ ನಡೆಸುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.