ADVERTISEMENT

ದಿನ ಭವಿಷ್ಯ: ಡಿ.10 – ಈ ರಾಶಿಯವರು ಧರ್ಮಸಂಕಟದಲ್ಲಿ ಸಿಲುಕಲಿದ್ದಾರೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಡಿಸೆಂಬರ್ 2023, 22:58 IST
Last Updated 9 ಡಿಸೆಂಬರ್ 2023, 22:58 IST
   
ಮೇಷ
  • ನಾನಾ ಬಗೆಯ ಚಿಂತನೆಗಳು ಕಾರ್ಯರೂಪಕ್ಕೆ ಬರುವಂತೆ ನಿಮ್ಮನ್ನು ಹುರಿದುಂಬಿಸಲಿದೆ. ಆದರೆ ಆಕಸ್ಮಿಕವಾಗಿ ಮಾಡುವ ಕೆಲಸದಿಂದ ಧರ್ಮಸಂಕಟದಲ್ಲಿ ಸಿಲುಕುವಂತಾಗಲಿದೆ. ಸಂಜೆ ಸಮಯದಲ್ಲಿ ಸಣ್ಣ ವಿಹಾರಕ್ಕೆ ತೆರಳುವಿರಿ.
  • ವೃಷಭ
  • ನಿಮ್ಮ ಮುಂದಿನ ಜೀವನದ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯ ಪ್ರಸಂಗ ಎದುರಾಗುವುದು. ಆತ್ಮ ಗೌರವ, ರಕ್ಷಣೆ ದೃಷ್ಟಿಯಿಂದ ತಪ್ಪುಗಳನ್ನು ಮಾಡಬೇಕಾದ ಪರಿಸ್ಥಿತಿ ಬರುವುದು.
  • ಮಿಥುನ
  • ನೃತ್ಯ ಕಲಿಕೆಯಂತಹ ಇತರೆ ಚಟುವಟಿಕೆಯಲ್ಲಿನ ಆಸಕ್ತಿಯಿಂದಾಗಿ ಶೈಕ್ಷಣಿಕವಾಗಿ ಹಿಂದುಳಿಯುವ ಪರಿಸ್ಥಿತಿ ಬರಲಿದೆ. ಹಲವು ಅಪರೂಪದ ಅವಕಾಶಗಳಿಂದ ವರ್ಚಸ್ಸನ್ನು ಬೆಳೆಸಿಕೊಳ್ಳುವಿರಿ. ನೇಕಾರರಿಗೆ ಉತ್ತಮ ದಿನ.
  • ಕರ್ಕಾಟಕ
  • ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷಿಸುವವರಿಗೆ ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ನೂತನ ಕೆಲಸ ಸಂಪಾದನೆಯಲ್ಲಿ ಅನುಕೂಲವಾಗಲಿದೆ. ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಗಳೆಲ್ಲವೂ ಸಿದ್ಧಿಸಲಿದೆ.
  • ಸಿಂಹ
  • ಸ್ವಯಂಕೃತ ಅಪರಾಧದಿಂದ ಇಂದಿನ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಸಂಚಾರದ ವೃತ್ತಿಯಲ್ಲಿ ಅಧಿಕ ಶ್ರಮ ಮತ್ತು ಜವಾಬ್ದಾರಿಗಳಿದ್ದರೂ ಅದಕ್ಕೆ ತಕ್ಕಂತಹ ಪ್ರತಿಫಲವನ್ನು ಹೊಂದುವಿರಿ.
  • ಕನ್ಯಾ
  • ನಿಮ್ಮ ಮನೋಭಿಲಾಷೆಯಂತೆ ಸಂಘ ಸಂಸ್ಥೆಗಳ ಅಧಿಕಾರ ಪ್ರಾಪ್ತಿಯಾಗಲಿದೆ. ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರಗಳಿಂದ ಅಧಿಕ ಲಾಭ ಗಳಿಸುವಿರಿ. ಕುಟುಂಬದಲ್ಲಿ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವಿರಿ.
  • ತುಲಾ
  • ಅತ್ಯಂತ ಬುದ್ಧಿವಂತರಾದ, ತಿಳುವಳಿಕೆ ಹೊಂದಿವರಾದ ನೀವು ಇಂದು ಗ್ರಹಚಾರದ ಫಲವಾಗಿ ಮನೋಬಲದಿಂದ ಕಾರ್ಯ ಸಾಧಿಸುವಲ್ಲಿ ವಿಫಲರಾಗುವಿರಿ. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಉಂಟಾಗಲಿದೆ.
  • ವೃಶ್ಚಿಕ
  • ಆತ್ಮವಿಶ್ವಾಸದಿಂದ ಹೊಸ ಯೋಜನೆ ಆರಂಭಿಸುವಿರಿ. ಜವಾಬ್ದಾರಿಗಳನ್ನು ಇತರರಿಗೆ ವಹಿಸಿ ಆರಾಮವಾಗಿರಲು ತೀರ್ಮಾನಿಸುವುದು ಉತ್ತಮ. ನಗದು ವ್ಯವಹಾರವನ್ನು ಮಾಡುವಲ್ಲಿ ಮೋಸ ಹೋಗುವ ಸಾಧ್ಯತೆಗಳಿದೆ.
  • ಧನು
  • ರಾಜಕೀಯ ಕ್ಷೇತ್ರದಲ್ಲಿ ಇರುವವರು ಈ ದಿನ ಪಕ್ಷ ಬಲಪಡಿಸಲು, ಅನುಯಾಯಿಗಳನ್ನು ಸಂಪಾದಿಸಿಕೊಳ್ಳಲು ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ. ತಂದೆಯವರು ನಿಮ್ಮ ನೆರವಿಗೆ ನಿಲ್ಲಲಿದ್ದಾರೆ.
  • ಮಕರ
  • ನಿಶ್ಚಿತ ರೂಪದಲ್ಲಿ ಮತ್ತು ನಿಶ್ಚಿತ ಸಮಯಕ್ಕೆ ಸರಿಯಾಗಿ ಕೆಲಸಗಳು ಜರುಗಲಿವೆ. ಕೃಷಿ ವರ್ಗದವರಿಗೆ ಹೆಚ್ಚಿನ ಕೆಲಸಗಳು ಪ್ರಾರಂಭವಾಗುವುದು. ಸಿವಿಲ್ ಇಂಜಿನೀಯರ್‌ಗಳು ಬಳಸುವ ತಂತ್ರಜ್ಞಾನದಲ್ಲಿ ಹೆಚ್ಚಿನ ಗಮನವಿರಲಿ.
  • ಕುಂಭ
  • ಖರ್ಚಿಗೆ ಅನೇಕ ಹೊಸ ದಾರಿಗಳು ಹುಟ್ಟುಕೊಳ್ಳುವುದರಿಂದ ಅನಗತ್ಯ ವಸ್ತು ಖರೀದಿಸುವುದನ್ನು ಕಡಿಮೆ ಮಾಡುವುದು ಉತ್ತಮ. ಗೃಹ ನಿರ್ಮಾಣದ ಕೆಲಸವನ್ನು ಆರಂಭಿಸಲು ಸೂಕ್ತ ಸಮಯವನ್ನು ತಿಳಿದುಕೊಳ್ಳುವಿರಿ.
  • ಮೀನ
  • ಅಸಾಧ್ಯ ಕಾರ್ಯಗಳನ್ನೂ ಸಹ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಆದರೆ ಆ ಛಲವನ್ನು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಿರಿ. ಲೆಕ್ಕ ಪರಿಶೋಧಕರಿಗೆ ಆದಾಯದಿಂದ ತೃಪ್ತಿ ಉಂಟಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.