ADVERTISEMENT

ದಿನ ಭವಿಷ್ಯ: ಈ ರಾಶಿಯವರು ಮೇಲಧಿಕಾರಿಗಳ ಜತೆ ಮಿತ್ರತ್ವವನ್ನು ಕಾಪಾಡಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಜೂನ್ 2024, 23:37 IST
Last Updated 9 ಜೂನ್ 2024, 23:37 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಸ್ವಂತ ಉದ್ಯೋಗ ನಡೆಸುವವರು ಒಳ್ಳೆಯ ಆಭಿವೃದ್ಧಿಯನ್ನು ಎದುರು ನೋಡಬಹುದು. ರಾಜಕೀಯ ವಲಯದ ಕಾರ್ಯಕರ್ತರಿಗೆ ಅರಿವಿಗೆ ಬರದಂತೆ ಮುನ್ನಡೆಯುವ ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ.
  • ವೃಷಭ
  • ಇಂದಿನ ಭಾಷಣದ ವೇಳೆ ಮಾತಿನ ಘನತೆ ಹೆಚ್ಚುತ್ತದೆ. ದೇಹದಲ್ಲಿ ವಾತ ಅಧಿಕವಾಗಿ ಕೈ-ಕಾಲು ನೋವು ಕಾಣಿಸಿಕೊಳ್ಳಬಹುದು. ಪಿತ್ರಾರ್ಜಿತ ಆಸ್ತಿ ಸಿಗುವುದು.
  • ಮಿಥುನ
  • ಒಡಹುಟ್ಟಿದವರ ಸಮಸ್ಯೆಗೆ ನಿಮ್ಮಿಂದಾಗುವ ಉಪಕಾರವನ್ನು ಮಾಡುವ ಪ್ರಯತ್ನಮಾಡಿ.ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯವೆನಿಸುವುದು. ಪೀಠೋಪಕರಣಗಳ ಖರೀದಿಗೆ ಶುಭ ದಿನ.
  • ಕರ್ಕಾಟಕ
  • ಮೇಲಧಿಕಾರಿಗಳ ಜತೆ ಮಿತ್ರತ್ವವನ್ನು ಕಾಪಾಡಿ. ಇಲ್ಲವಾದಲ್ಲಿ ಪಶ್ಚಾತ್ತಾಪ ಪಡಬೇಕಾಗುವುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳೆಲ್ಲವೂ ಬಗೆಹರಿಯುತ್ತವೆ.
  • ಸಿಂಹ
  • ಮಹಾಗಣಪತಿಯ ಆರಾಧನೆಯಿಂದ ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆಲ್ಲಾ ದೂರಾಗುವುವು. ವಿದ್ಯಾಭ್ಯಾಸದ ಸಮಯದಲ್ಲಿ ನೀವಂದುಕೊಂಡ ಹರಕೆಗಳನ್ನು ಪೂರೈಸುವ ಬಗ್ಗೆ ಯೋಚಿಸಿ.
  • ಕನ್ಯಾ
  • ಹೊರದೇಶದ ಉದ್ಯೋಗ ಅನ್ವೇಷಣೆಯಲ್ಲಿ ಇರುವವರಿಗೆ ಹಾಗೂ ಉನ್ನತ ವಿದ್ಯಾಭ್ಯಾಸ ಬಯಸುವವರಿಗೆ ಒಳ್ಳೆಯ ದಿನ. ಶಿಕ್ಷಣಕ್ಕೆ ಸಂಬಂಧಿಸಿದ ಸರ್ಕಾರಿ ಉನ್ನತ ಅಧಿಕಾರಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
  • ತುಲಾ
  • ಕುಟುಂಬ ನಿರ್ವಹಣೆಗಾಗಿ ಅಧಿಕ ಮಟ್ಟಿನ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾದರೂ ಆದಾಯಕ್ಕೇನೂ ಕೊರತೆ ಇರುವುದಿಲ್ಲ. ಸಂತಸದ ವಿಚಾರವನ್ನು ಸ್ವೀಕರಿಸಲು ಕಷ್ಟವಾಗುವುದು.
  • ವೃಶ್ಚಿಕ
  • ಪ್ರಾಪ್ತ ವಯಸ್ಸಿನ ಮಗಳಿಗೆ ಸಂಬಂಧಿಕರಲ್ಲಿ ಅಥವಾ ಅಕ್ಕ-ಪಕ್ಕದ ಮನೆಯಲ್ಲಿಯೇ ವರ ನಿಶ್ಚಯವಾಗಿ ಮದುವೆಯ ತಯಾರಿ ನಡೆಸುವಿರಿ. ಪ್ರಾಮಾಣಿಕತೆಗೆ ತಕ್ಕ ಫಲವನ್ನು ಪಡೆಯುತ್ತೀರಿ.
  • ಧನು
  • ಉಂಟಾಗುತ್ತಿರುವ ದೈಹಿಕ ಬದಲಾವಣೆಗಳು ಔಷಧದ ಅಡ್ಡಪರಿಣಾಮಗಳೇ ಎಂದು ಪರೀಕ್ಷಿಸಿಕೊಳ್ಳಿರಿ. ಕೆಲವು ಆಲೋಚನಾರಹಿತ ಮಾತುಗಳಿಂದಾಗಿ ಆಭಾಸಕ್ಕೆ ಒಳಗಾಗಬಹುದು.
  • ಮಕರ
  • ಸ್ವಲ್ಪ ದಿನದ ಹಿಂದೆ ಪರಿಹಾರ ಕಾಣದೆ ಕಾಡುತ್ತಿದ್ದ ಒಂದು ಸಮಸ್ಯೆ ಹಿಮದಂತೆ ಕರಗಿಹೋಗುತ್ತದೆ. ಸಹಾಯಕ ವರ್ಗದವರ ಕಷ್ಟಗಳಿಗೆ ನೆರವಾಗುವ ಗುಣಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ.
  • ಕುಂಭ
  • ಹೊಸ ಹೊಸ ವಿಷಯದ ಅಧ್ಯಯನದಲ್ಲಿ ತೋರಿಸುವ ಆಸಕ್ತಿಯನ್ನು ಹುರಿದುಂಬಿಸಲು ಅನುಕೂಲಕರವಾಗುವ ರೀತಿಯಲ್ಲಿ ಸುತ್ತಲಿನ ವಾತಾವರಣವನ್ನು ನಿರ್ಮಾಣ ಮಾಡಿಕೊಳ್ಳಿ. ಸಂಧಿವಾತ ಕಾಡಬಹುದು.
  • ಮೀನ
  • ವ್ಯವಸಾಯದಲ್ಲಿ ಎದುರಾಗುವ ವಿಪತ್ತನ್ನು ನಿಭಾಯಿಸಲು ಬೇಕಾದ ತಯಾರಿ ಮಾಡಿಟ್ಟುಕೊಳ್ಳಿರಿ. ಕಾರ್ಯವೈಖರಿಯನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಿಕೊಂಡಲ್ಲಿ ಕೆಲಸವು ಇನ್ನಷ್ಟು ಸುಲಭವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.