ADVERTISEMENT

ದಿನ ಭವಿಷ್ಯ: ಅನ್ಯರ ಬಗ್ಗೆ ಮೊದಲ ಭೇಟಿಯಲ್ಲಿ ತೀರ್ಮಾನವನ್ನು ಮಾಡಬೇಡಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಸೆಪ್ಟೆಂಬರ್ 2025, 23:55 IST
Last Updated 10 ಸೆಪ್ಟೆಂಬರ್ 2025, 23:55 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅನ್ಯರ ಬಗ್ಗೆ ಮೊದಲ ಭೇಟಿಯಲ್ಲಿ ತೀರ್ಮಾನವನ್ನು ಮಾಡಬೇಡಿ. ಬರಬೇಕಿದ್ದ ಹಣ ಹಿಂತುರುಗಿಬಂದು ಕೈ ಸೇರಲಿದೆ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದು ದೈನಂದಿನ ಚುಟುವಟಿಕೆಗಳಲ್ಲಿ ಪಾಲುಗೊಳ್ಳುವಿರಿ.
  • ವೃಷಭ
  • ವಾಕ್ ಚಾತುರ್ಯದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ತೀಕ್ಷ್ಣವಾದ ಮಾತುಗಳು ಬೇರೆಯವರ ದುಃಖಕ್ಕೆ ಕಾರಣವಾಗದಂತೆ ಗಮನಿಸಿ. ಸಿಟ್ಟಿನಿಂದ ಹೊರಬರಲು ಶನೈಶ್ಚರನ ಪ್ರಾರ್ಥನೆ ಮಾಡಿ.
  • ಮಿಥುನ
  • ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ಪರೋಪಕಾರದ ಫಲ ಮತ್ತು ಆತ್ಮವಿಶ್ವಾಸ ರಕ್ಷಿಸಲಿದೆ.
  • ಕರ್ಕಾಟಕ
  • ಕಾಡುವ ಸಮಸ್ಯೆಯಿಂದಾಗಿ ಯಾರಲ್ಲೂ ನಂಬಿಕೆ ಇಡದಂಥ ಪರಿಸ್ಥಿತಿ ತೋರಿಬರುವುದು. ಮನಸ್ಸಿಗೆ ಅಸಮಾಧಾನ ಆಗುವಂತಹ ಹಲವು ಘಟನೆಯು ಬಾಳಲ್ಲಿ ನಡೆಯಲಿದೆ. ಲಕ್ಷ್ಮಿನರಸಿಂಹನನ್ನು ಆರಾಧಿಸಿ.
  • ಸಿಂಹ
  • ದೈನಂದಿನ ಬದುಕಿನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಅನಿವಾರ್ಯತೆ ಕಂಡುಬರಲಿದೆ. ಕೃಷಿ ಕೆಲಸಗಾರರಿಗೆ, ಮರಗೆಲಸ ಮಾಡುವವರಿಗೆ ಅವಕಾಶಗಳು ಬಂದರೂ ಸೋಮಾರಿತನ ಅಡ್ಡಬರುವುದು.
  • ಕನ್ಯಾ
  • ಕುಟುಂಬದ ಸದಸ್ಯರಲ್ಲಿ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಳ್ಳುವಂತೆ ಆಗುವುದು. ವಿದ್ಯಾರ್ಥಿಗಳಿಗೆ ಮಿತ್ರವರ್ಗದವರ ಸಹವಾಸ ಅನುಕೂಲವಾಗಿ ಕಂಡುಬರುವುದು. ರಾಜಕೀಯ ವ್ಯಕ್ತಿಗಳಿಗೆ ಸಮಯದ ಕೊರತೆ ಕಾಣಲಿದೆ.
  • ತುಲಾ
  • ಭಾವುಕರಾಗಿ ವರ್ತಿಸುವ ಸಂದರ್ಭ ಒದಗಿ ಬಂದೀತು. ಮೇಲಧಿ ಕಾರಿಗಳ ಒತ್ತಾಯಕ್ಕೆ ಮಣಿದು ಸ್ವಯಂ ನಿವೃತ್ತಿ ಯೋಚನೆ ಬಿಡಬೇಕಾಗುವುದು. ಚಿತ್ರಕಲೆಯಲ್ಲಿರುವ ಉತ್ಸಾಹ ಮಗ್ನರಾಗುವಂತೆ ಪ್ರೇರೇಪಿಸುವುದು.
  • ವೃಶ್ಚಿಕ
  • ಆರ್ಥಿಕ ಸ್ಥಿತಿಯು ಸ್ವಲ್ಪಮಟ್ಟಿಗೆ ಏರುತ್ತದೆ. ಶ್ರಮದಿಂದ ದುಡಿಯುವ ತಾಳ್ಮೆ ಮೆಚ್ಚತಕ್ಕದ್ದೇ ಆಗಿರುತ್ತದೆ. ಸಂತಾನ ಭಾಗ್ಯದ ಸುದ್ದಿ ಕೇಳುವಿರಿ. ಶಿಕ್ಷೆಗೆ ಒಳಗಾಗುವ ಲಕ್ಷಣವಿರುವುದರಿಂದ ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸಿ.
  • ಧನು
  • ಉದ್ಯೋಗ ಅಥವಾ ವಿದ್ಯಾಭ್ಯಾಸ ಈ ತರಹದ ವಿಷಯದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಕಾಲ ಒದಗಿ ಬರುವುದು. ಸುಂದರ ವಸ್ತು, ಚಿತ್ರ ಅಥವಾ ಸಮಾಜದ ಗಣ್ಯವ್ಯಕ್ತಿಗಳನ್ನು ನೋಡುವ ಭಾಗ್ಯ ಸಿಗುವುದು.
  • ಮಕರ
  • ವಿದ್ಯಾಭ್ಯಾಸದ ಕಡೆಗೆ ಕಠಿಣ ಶ್ರಮವಹಿಸಿ ಗಮನಹರಿಸಿ, ಏಕಾಗ್ರತೆ ಕಾಯ್ದುಕೊಳ್ಳಿ. ಧ್ಯಾನ ಹಾಗೂ ಯೋಗದ ಕಡೆ ಗಮನ ಹರಿಸಿ. ಆರೋಗ್ಯಕ್ಕೆ ಮತ್ತು ಲವಲವಿಕೆಯ ಜೀವನಕ್ಕೆ ಬಹಳ ಸಹಾಯವಾಗಲಿದೆ.
  • ಕುಂಭ
  • ವೈದ್ಯರಿಗೆ ತುರ್ತು ಕೆಲಸಗಳಿಂದ ಬಿಡುವಿಲ್ಲದಂತಾಗುವುದು. ಆಶ್ರಮ ವಾಸಿಗಳಿಗೆ ಸಹಾಯ ಸಿಗಲಿದೆ. ಮಕ್ಕಳ ಹೊಸ ವ್ಯವಹಾರದಲ್ಲಿ ತಂದೆ–ತಾಯಿಯ ಆಶೀರ್ವಾದ ದೊರೆಯಲಿದೆ.
  • ಮೀನ
  • ವಾಸಸ್ಥಾನ ಅಥವಾ ಉದ್ಯೋಗ ಬದಲಾಗುವ ಸಂಭವವಿದೆ. ಆಸಕ್ತಿಕರ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಯೋಜನೆಗಳಿಗೆ ಸಹಕಾರಿಯಾಗಲಿದೆ. ಸ್ಥಿರತೆ ಹಾಗೂ ಅಭಿವೃದ್ಧಿ ಸಾಧಿಸುವ ದಿನವೆನಿಸಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.