ADVERTISEMENT

ದಿನ ಭವಿಷ್ಯ: ಈ ರಾಶಿಯ ಅವಿವಾಹಿತರು ಬಾಳ ಸಂಗಾತಿಯನ್ನು ಪಡೆಯುವ ಸೂಚನೆಗಳು ಕಾಣಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಜೂನ್ 2024, 23:29 IST
Last Updated 11 ಜೂನ್ 2024, 23:29 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅಶುಭದ ಸಂಕೇತವೆಂದು ಕಂಡ ವಿಷಯಗಳ ಬಗ್ಗೆ ಹೆಚ್ಚಿನ ಯೋಚನೆಯ ಅಗತ್ಯವಿಲ್ಲ. ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭವೊಂದು  ಬರಲಿದೆ.
  • ವೃಷಭ
  • ಮುಕ್ತ ಮಾತುಕತೆಯಿಂದ ಮನೋಭಿಲಾಷೆಯ ಸ್ಥಾನಮಾನ ದೊರೆಯುತ್ತದೆ. ತಿಳಿಯದೆ ಮಾಡಿದ ತಪ್ಪಿನಿಂದಾಗಿ ಅನುಭವಿಸುತ್ತಿರುವ ಕಷ್ಟಗಳಿಗೆ ಪರಿಹಾರವನ್ನು ಪ್ರಾಜ್ಞರಿಂದ ಪಡೆಯಿರಿ.
  • ಮಿಥುನ
  • ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಸ್ವೀಕರಿಸುವ ಉತ್ತಮ ಅವಕಾಶಗಳು ಎದುರಾಗಲಿವೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಸಾಂಸಾರಿಕ ಜವಾಬ್ದಾರಿಗಳು ಹೆಚ್ಚಲಿವೆ.
  • ಕರ್ಕಾಟಕ
  • ದಾನ-ಧರ್ಮ ಸ್ವಭಾವವನ್ನು ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ಮನೆಯ ಶುಭ ಸಮಾರಂಭಕ್ಕೆ ಹೋಗುವ ಸಲುವಾಗಿ ಕಿರು ಪ್ರಯಾಣ ಇರುವುದು. ದೇವರ ಅನುಗ್ರಹಕ್ಕೆ ಪ್ರಾರ್ಥನೆ ಇರಲಿ.
  • ಸಿಂಹ
  • ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ನಡೆದು ಹೋದ ದುರ್ಘಟನೆಗಳನ್ನು ಪದೇ ಪದೇ ನೆನಪಿಸಿಕೊಂಡು ದುಃಖ ಪಡುವುದು ಸರಿಯಲ್ಲ.
  • ಕನ್ಯಾ
  • ಹೊಸ ಒಪ್ಪಂದವನ್ನು ಒಪ್ಪಿಕೊಳ್ಳುವ ಮುನ್ನ ತುಸು ಯೋಚಿಸುವುದು ಉತ್ತಮ. ಅವಿವಾಹಿತರು ಬಾಳ ಸಂಗಾತಿಯನ್ನು ಪಡೆಯುವ ಸೂಚನೆಗಳು ಕಾಣಲಿವೆ.
  • ತುಲಾ
  • ಹಿರಿಯರ ಆಶೀರ್ವಾದ ಪಡೆದು ಕೆಲಸ ಕಾರ್ಯಗಳನ್ನು ಆರಂಭಿಸಿದಲ್ಲಿ ಜಯ ಸಿಗುತ್ತದೆ. ವಿದ್ಯಾರ್ಥಿ ಜೀವನವನ್ನು ಇಷ್ಟ ಪಡುವವರಿಗೆ ಹೆಚ್ಚಿನ ಅಧ್ಯಯನಕ್ಕೆ ಸಕಾಲವಾಗಿರುತ್ತದೆ.
  • ವೃಶ್ಚಿಕ
  • ಆರ್ಥಿಕ ಬಲ ಕಡಿಮೆ ಹೊಂದಿರುವ ನಿಮಗೆ ಮಹಾಗಣಪತಿಯ ಆರಾಧನೆ ಶುಭ ಉಂಟು ಮಾಡುತ್ತದೆ. ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚು ಜನರು ಬರಲಿದ್ದಾರೆ.
  • ಧನು
  • ವಿನಾಕಾರಣ ಬೇರೆಯವರ ಮನಸ್ಸನ್ನು ನೋಯಿಸುವುದು ಸರಿಯಲ್ಲವೆಂದೂ ಗೊತ್ತಿದ್ದರೂ ಆ ತಪ್ಪು ನಡೆಯುವ ಸಾಧ್ಯತೆ ಇರುತ್ತದೆ. ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆಯಿಂದ ಮಾನಸಿಕ ನೆಮ್ಮದಿ. 
  • ಮಕರ
  • ಹಲವು ಕಾರಣಗಳಿಗೆ ಸ್ನೇಹಿತರು ನಿಮ್ಮ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರ ಅಪೇಕ್ಷಿಸಬಹುದು. ವಿವಾಹ ವಿಚಾರವಾಗಿ ಮುಂದುವರಿದ ಸಂಬಂಧಗಳು ವಿನಾಕಾರಣ ಮುರಿದು ಬೀಳುವಂತಾಗಬಹುದು.
  • ಕುಂಭ
  • ಸಾಕುಪ್ರಾಣಿಯ ತೀವ್ರ ಅನಾರೋಗ್ಯ ದುಃಖಕರವನ್ನಾಗಿ ಮಾಡಬಹುದು. ಸ್ನೇಹಿತರೊಡನೆ ಸುಂದರ ಸಂಜೆಯನ್ನು ಕಳೆಯುವ ಅವಕಾಶಗಳನ್ನು ತಪ್ಪಿಸಿಕೊಳ್ಳದಿರಿ. 
  • ಮೀನ
  • ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಗಳೆಲ್ಲವೂ ಅರ್ಧದ ಹಾದಿಯನ್ನು ಮಾತ್ರ ನೋಡುವುದು. ಅನಿರೀಕ್ಷಿತ ಬಂಧುಗಳ ಆಗಮನವು ದಿನಚರಿಯನ್ನು ಅದಲು ಬದಲು ಮಾಡುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.