ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಅಪೂರ್ವ ಅವಕಾಶಗಳು ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಮಾರ್ಚ್ 2024, 23:20 IST
Last Updated 20 ಮಾರ್ಚ್ 2024, 23:20 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮೇಷ : ಮೋಸ ಮಾಡುವ ಬುದ್ಧಿ, ಅನ್ಯಾಯ ಮಾಡುವ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳಿ. ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ. ರಾಜಕೀಯ ವಿದ್ಯಮಾನಗಳಿಂದ ಓಡಾಟ ಆಧಿಕಗೊಳ್ಳುವುದು.
  • ವೃಷಭ
  • ವೃಷಭ: ಮುಂಜಾನೆ ಏಳುವಾಗಲೇ ನೀವು ಉತ್ಸಾಹಿಗಳಾಗಿರುತ್ತೀರಿ. ಸಂತಸ ಭರಿತ ಒಂದು ಸುದ್ದಿ ನಿಮ್ಮನ್ನು ತಲುಪುತ್ತದೆ. ಯಾವ ಕೆಲಸದಲ್ಲೂ ನಿರ್ಲಕ್ಷ್ಯ ತೋರದಿರಿ. ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ಪರಿಶೀಲನೆ ಅಗತ್ಯ.
  • ಮಿಥುನ
  • ಮಿಥುನ: ಮನೆಯ ವಿಸ್ತರಣೆ ವಿಷಯವಾಗಿ ಉತ್ತಮ ಆಲೋಚನೆಗಳು ಗರಿಗೆದರಲಿವೆ. ಸಹಾಯಕ ದರ್ಜೆಯವರಿಂದ ನಿರೀಕ್ಷೆಗೆ ಮೀರಿದ ಸಹಾಯ ದೊರೆಯುವುದು. ಮಲ್ಲಿಕಾರ್ಜುನನ ಆರಾಧನೆ ಮಾಡುವುದರಿಂದ ಶುಭ .
  • ಕರ್ಕಾಟಕ
  • ಕರ್ಕಾಟಕ: ಆಶಾವಾದ ಮತ್ತು ಧನಾತ್ಮಕ ವರ್ತನೆಯ ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತದೆ. ಎಲ್ಲಾ ಕಿರಿ ಕಿರಿಗಳನ್ನೂ ಶಾಂತ ರೀತಿಯಿಂದ ಎದುರಿಸಿ. ಮಾನಸಿಕಪೀಡೆಗಳಿಗೆ ಒಳಗಾಗದಂತೆ ಕಾಳಜಿವಹಿಸಿ.
  • ಸಿಂಹ
  • ಸಿಂಹ: ವೃತ್ತಿ ಬದುಕಿನಲ್ಲಿ ಅಪೂರ್ವ ಅವಕಾಶಗಳು ನಿಮ್ಮದಾಗಲಿವೆ. ವ್ಯಾಪಾರದಲ್ಲಿ ಸ್ಫರ್ಧಾತ್ಮಕ ರೀತಿಯ ವಾತಾವರಣ ಇರುತ್ತದೆ. ವಿದೇಶದಿಂದ ಮಗನ ಆಗಮನದ ಸುದ್ದಿ ಸಂತೋಷ ತರುವುದು.
  • ಕನ್ಯಾ
  • ಕನ್ಯಾ: ಗಂಭೀರ ಹಂತದಲ್ಲಿರುವ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧ ಗಳನ್ನು ಸರಿಗೊಳಿಸುವ ಪ್ರಯತ್ನವನ್ನು ನಡೆಸಬಹುದು. ಹಿಂದೆಂದೂ ಮಾಡದ ಅಪರೂಪದ ಕೆಲಸಗಳನ್ನು ಈಗ ಮಾಡಬೇಕಾಗುವುದು.
  • ತುಲಾ
  • ತುಲಾ : ಎಂಜಿನಿಯರಿಂಗ್ ಶಿಕ್ಷಣದಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ತೋರಿರುವುದರಿಂದ ವಿದೇಶಕ್ಕೆ ತೆರಳುವ ಸಂಭವ. ಮನೆಗೆ ಬಂಧುಗಳ ಆಗಮನವಿರುವುದು. ಶ್ರಮಕ್ಕೆ ತಕ್ಕ ಧನ ಸಂಪಾದನೆ ಹೆಚ್ಚುವುದು.
  • ವೃಶ್ಚಿಕ
  • ವೃಶ್ಚಿಕ: ಕ್ರೀಡಾಪಟುಗಳಿಗೆ, ಸಂಗೀತಗಾರರಿಗೆ ಸಾಧನೆಯ ಅವಕಾಶ ಸಿಕ್ಕಿ ದರೂ ಅನಾರೋಗ್ಯ ಎದುರಾಗಬಹುದು. ಶುಭ ಕಾರ್ಯಗಳು ಕೈಗೂಡಿದ್ದು ಜವಾಬ್ದಾರಿ ಹೆಚ್ಚಲಿದೆ. ಸರ್ವತೋಮುಖ ಪ್ರಗತಿಯಿಂದ ಹರ್ಷವಿರುವುದು.
  • ಧನು
  • ವೃಶ್ಚಿಕ: ಕ್ರೀಡಾಪಟುಗಳಿಗೆ, ಸಂಗೀತಗಾರರಿಗೆ ಸಾಧನೆಯ ಅವಕಾಶ ಸಿಕ್ಕಿ ದರೂ ಅನಾರೋಗ್ಯ ಎದುರಾಗಬಹುದು. ಶುಭ ಕಾರ್ಯಗಳು ಕೈಗೂಡಿದ್ದು ಜವಾಬ್ದಾರಿ ಹೆಚ್ಚಲಿದೆ. ಸರ್ವತೋಮುಖ ಪ್ರಗತಿಯಿಂದ ಹರ್ಷವಿರುವುದು.
  • ಮಕರ
  • ಮಕರ: ವಕೀಲೀ ವೃತ್ತಿ ನಡೆಸುವವರಿಗೆ, ನ್ಯಾಯಾಂಗ ಇಲಾಖೆಯವರಿಗೆ ಉತ್ತಮ ದಿನ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯವಾಗಲಿದೆ.
  • ಕುಂಭ
  • ಕುಂಭ: ಕೆಲವು ಬಾರಿ ಆತಂಕ ಎದುರಾಗುವ ಸಾಧ್ಯತೆ ಇರುತ್ತದೆ. ಆದರೂ ಜೀವನದಲ್ಲಿ ಸೋಮಾರಿತನವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈಹಾಕಿದರೂ ಸಮಸ್ಯೆ ಆಗದು. ಗಮನವಿರಲಿ.
  • ಮೀನ
  • ಮೀನ: ಸ್ಪಷ್ಟ ನಿರ್ಧಾರವನ್ನು ಮಾಡಿದ ವಿಚಾರವನ್ನು ಮತ್ತೊಮ್ಮೆ ಯೋಚಿಸಲು ಅವಕಾಶಗಳು ಒದಗಿಬರುತ್ತದೆ. ಕುಟುಂಬ ವರ್ಗದಲ್ಲಿ ಆರೋಗ್ಯ ಉತ್ತಮವಾಗಿ ಇರುವುದು. ಈ ದಿನ ಅಪವಾದಗಳು ದೂರವಾಗಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.