ADVERTISEMENT

ದಿನ ಭವಿಷ್ಯ: ಅಭದ್ರತೆಯ ಭಾವ ಬಿಟ್ಟು ಹೋಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ನವೆಂಬರ್ 2025, 0:28 IST
Last Updated 21 ನವೆಂಬರ್ 2025, 0:28 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ನೇಹಿತರ ಭರವಸೆಯ ಮಾತುಗಳು ಸೋಲುಗಳನ್ನು ಮೆಟ್ಟಿ ಆಶಾ ಭಾವನೆಯನ್ನು ತರುತ್ತದೆ. ಉದ್ಯಮದ ವಿಚಾರದಲ್ಲಿ ಹಿತಶತ್ರುಗಳ ಭಯ ಬಹಳವಾಗಿ ಕಾಡುತ್ತದೆ. ಕೃಷಿ ಕೆಲಸಗಳಿಗೆ ಸಮಯ ಸಿಗುವುದು.
  • ವೃಷಭ
  • ಸಂಪರ್ಕ ಸಂಬಂಧಿತ ಸಾಧನಗಳ ನಿರ್ವಹಣೆಯ ಕೊರತೆಯಿಂದ ಕೈಕೊಡುವ ಸಾಧ್ಯತೆ ಇದೆ. ಗುರುಗಳ ಮನಸ್ಸಿಗೆ ನೋವು ಉಂಟುಮಾಡುವಂಥ ಕೆಲಸ ಮಾಡದಿರಿ. ಸಂಗೀತ ಮತ್ತು ಕಲೆಯಲ್ಲಿ ಅಭಿರುಚಿ ಹೆಚ್ಚಲಿದೆ.
  • ಮಿಥುನ
  • ವೃತ್ತಿರಂಗದಲ್ಲಿ ಅನಿಶ್ಚಿತ ಸ್ಥಾನವು ನಿಷ್ಠೆಯ ನಡೆಯಿಂದಾಗಿ ನಿಶ್ಚಯವಾಗುತ್ತದೆ. ಪಾಲುದಾರಿಕೆಯನ್ನು ಮುಂದುವರಿಸುವ ಯೋಚನೆಯನ್ನು ಮಾಡಬಹುದು. ಅದರ ಬಗ್ಗೆ ಋಣಾತ್ಮಕವಾಗಿ ಚಿಂತಿಸದಿರಿ.
  • ಕರ್ಕಾಟಕ
  • ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಸಲಹೆ ಬರುವುದು. ದೈನಂದಿನ ಆಗುಹೋಗುಗಳ ಬಗ್ಗೆ ಗಮನಹರಿಸಿ. ಕ್ರೀಡೆಯಲ್ಲಿ ಜಯದ ಜತೆಗೆ ನೆಮ್ಮದಿ ನಿಮ್ಮದಾಗುತ್ತದೆ.
  • ಸಿಂಹ
  • ಮನುಷ್ಯ ಪ್ರಯತ್ನದ ಜತೆಯಲ್ಲಿ ದೇವರ ಕೃಪೆಗೆ ಪಾತ್ರರಾಗುವ ರೀತಿಯಲ್ಲಿ ನೆಡೆದುಕೊಂಡಾಗ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ಪರಿಚಯವೇ ಇಲ್ಲದ ವ್ಯಕ್ತಿಯು ಸಹಕಾರ ನೀಡುವರು.
  • ಕನ್ಯಾ
  • ಕಟ್ಟಡದ ಕಂಟ್ರಾಕ್ಟರ್‌ಗಳಿಗೆ ಕೆಲಸಗಾರರ ಕೊರತೆ ಕಾಣಲಿದೆ ಅಥವಾ ಪರಿಣತ ಕೆಲಸಗಾರರ ಗೈರುಹಾಜರಿಯಿಂದ ನಷ್ಟ ಸಂಭವಿಸುವುದು. ಪೊಲೀಸ್ ಸಿಬ್ಬಂದಿಗೆ ಕೆಲಸವಿರಲಿದೆ.
  • ತುಲಾ
  • ಕುಟುಂಬದವರೊಡನೆ ಸಂಜೆಯನ್ನು ಸಂತೋಷದಿಂದ ಕಳೆಯುವಂತಾಗಲಿದೆ. ತಾಳ್ಮೆಯಿಂದ ವರ್ತಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಕಣ್ಣು, ಕಿವಿಗೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಿರಿ.
  • ವೃಶ್ಚಿಕ
  • ಗುರಿ ಸಾಧಿಸಲು ಅನಿವಾರ್ಯವಾಗಿರುವ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ.
  • ಧನು
  • ಸಂಗಾತಿಯ ಅಗಲುವಿಕೆಯು ತಾತ್ಕಾಲಿಕವಾದುದು ಎಂಬುದನ್ನು ಅರಿತುಕೊಳ್ಳಿ. ಉತ್ಪ್ರೇಕ್ಷೆ ಎನ್ನಿಸುವ ಕೆಲವು ಹೊಗಳಿಕೆಯ ಮಾತುಗಳಿಗೆ ಮರುಳಾಗದಿರಿ. ಲೇವಾದೇವಿ ವ್ಯವಹಾರ ನಡೆಸುವವರು ವಿಶ್ರಾಂತಿ ಪಡೆಯಿರಿ.
  • ಮಕರ
  • ಮನೆ ನಿರ್ಮಾಣದ ಕೆಲಸ ಕಾರ್ಯಗಳಿಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಹುಡುಕುವಲ್ಲಿ ವಿಫಲರಾಗಲಿದ್ದೀರಿ. ಸ್ವಂತ ಊರಿನಲ್ಲಿ ಸ್ಥಾನಮಾನದಿಂದಾಗಿ ಹೆಚ್ಚಿನ ಗೌರವ ದೊರೆಯುವುದು.
  • ಕುಂಭ
  • ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಬೇಡವೆಂದು ನಿಶ್ಚಯಿಸುವುದು ಉತ್ತಮ. ಸಂಗೀತ ಕಚೇರಿ, ನೃತ್ಯ ಕಾರ್ಯಕ್ರಮ ನೀಡುವ ಕಲಾವಿದರಿಗೆ ಬೇಡಿಕೆ ಹೆಚ್ಚಲಿದೆ. ಅಭದ್ರತೆಯ ಭಾವ ಬಿಟ್ಟು ಹೋಗಲಿದೆ.
  • ಮೀನ
  • ಅನಿರೀಕ್ಷಿತ ಘಟನೆಗಳಿಂದ ಇತರರ ಎದುರು ತಲೆತಗ್ಗಿಸಬೇಕಾದ ಪರಿಸ್ಥಿತಿ ಬರುವುದು. ಎಣ್ಣೆಯಲ್ಲಿ ಕರಿದ ಖಾದ್ಯಗಳ ಸೇವನೆಯಿಂದ ಅನಾರೋಗ್ಯ ಎದುರಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.