ದಿನ ಭವಿಷ್ಯ: ಮನೆಯ ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಾಣುವಂತಾಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜೂನ್ 2025, 0:30 IST
Last Updated 23 ಜೂನ್ 2025, 0:30 IST
ದಿನ ಭವಿಷ್ಯ
ಮೇಷ
ಯಾವುದೇ ಪ್ರಯತ್ನವನ್ನು ನಿಲ್ಲಿಸದೆ ಜಾಗರೂಕತೆಯಿಂದ ಕೆಲಸವನ್ನು ಮುನ್ನಡೆಸಿರಿ. ಆರ್ಥಿಕ ಸುಧಾರಣೆಯಿಂದ ಕುಟುಂಬದ ಎಲ್ಲ ತೊಂದರೆಗಳು ನಿವಾರಣೆಯಾಗಲಿವೆ. ಮನರಂಜನೆಗಾಗಿ ಖರ್ಚು ಮಾಡುವಿರಿ.
ವೃಷಭ
ಹಂತ ಹಂತದಲ್ಲೂ ಜುಗ್ಗನೆಂದು ಹೀಯಾಳಿಸಿಕೊಂಡು ಕೂಡಿಟ್ಟ ಹಣ ದೊಡ್ಡ ಮೊತ್ತವಾಗಿ ಉಪಯೋಗಕ್ಕೆ ಬರಲಿದೆ. ಕುಟುಂಬದ ಆಂತರಿಕ ವಿಷಯದಲ್ಲಿ ಉಂಟಾದ ತಪ್ಪುಗ್ರಹಿಕೆಯಿಂದ ಮನಸ್ತಾಪಗಳು ಬರಬಹುದು.
ಮಿಥುನ
ಮಾಡುವ ಕೆಲಸಗಳಲ್ಲಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವಿರಿ. ಪುಸ್ತಕದ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ ಸಿಗಲಿದೆ. ಇಂದಿನ ವಿಚಾರಕ್ಕೆ ತೀರ್ಮಾನಿಸದೇ, ಭವಿಷ್ಯದ ಬಗ್ಗೆ ಯೋಚಿಸಿ ತೀರ್ಮಾನಿಸಿ.
ಕರ್ಕಾಟಕ
ಮಾನಸಿಕ ಸ್ಥೈರ್ಯ ಸದೃಢವಾಗುವುದು. ಹಲವಾರು ಕಾರಣಗಳಿಗೆ ಸ್ನೇಹಿತರ ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸಬಹುದು. ಮೇಲಧಿಕಾರಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ.
ಸಿಂಹ
ಗಳಿಕೆಯ ಬಗ್ಗೆ ಚಿಂತಿಸಬೇಡಿ, ಕೆಲಸದಲ್ಲಿ ಅಸ್ತಿತ್ವವನ್ನು ಕಾಪಾಡಿಕೊಳ್ಳಿ. ಉತ್ಸಾಹವನ್ನು ಹೆಚ್ಚಿಸಿಕೊಳ್ಳುವ ಸಮಯವಾಗಿದೆ. ಮತ್ತೊಬ್ಬರನ್ನು ಗೌರವಿಸುವುದರಿಂದ ನಿಮ್ಮ ಗೌರವವು ಹೆಚ್ಚುವುದು.
ಕನ್ಯಾ
ದಾಯಾದಿಗಳು ಅಥವಾ ಅಕ್ಕ-ಪಕ್ಕದವರು ಭೂ ಸಂಬಂಧದ ಕಲಹಗಳನ್ನು ಬಿಟ್ಟು ರಾಜಿ ಮಾಡಿಕೊಳ್ಳುವ ಮನೋಭಾವಕ್ಕೆ ಬರುವರು. ಅದರಂತೆ ನಡೆಯುವುದೇ ಉತ್ತಮ.ಅನವಶ್ಯಕ ಚಿಂತೆ ಕಂಡುಬರಲಿದೆ.
ತುಲಾ
ಈ ದಿನ ಸರ್ಕಾರಿ ಮೂರನೇ ದರ್ಜೆಯ ನೌಕರರಿಗೆ ಆರ್ಥಿಕವಾಗಿ ಅನುಕೂಲವಾಗುವುದು. ಬಂಡವಾಳ ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸಬಹುದು. ಮನೆಯ ಹಿರಿಯರ ಆರೋಗ್ಯದಲ್ಲಿ ಏರಿಳಿತ ಕಾಣುವಂತಾಗಲಿದೆ.
ವೃಶ್ಚಿಕ
ಅಧಿಕ ಜವಾಬ್ದಾರಿ ಅಥವಾ ಒತ್ತಡ ತರುವಂಥ ಕೆಲಸಗಳಿಂದ ದೂರವಿರಿ. ಕ್ರೀಡಾಪಟುಗಳಿಗೆ ಮತ್ತು ಕಲಾವಿದರಿಗೆ ಸಾಧನೆಗೆ ತಕ್ಕಂತೆ ಸರ್ಕಾರದಿಂದ ಸನ್ಮಾನಗಳು ಲಭಿಸಬಹುದು.
ಧನು
ಮಾತುಗಾರಿಕೆಯ ಸಾಮರ್ಥ್ಯದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಅದನ್ನು ಬಳಸಿಕೊಳ್ಳಿ. ಬಂಧುಗಳು ಹಾಗೂ ಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲಿದ್ದೀರಿ.
ಮಕರ
ರಾಜಕಾರಣಿಗಳಿಗೆ ಬಹು ದಿನಗಳ ನಿರೀಕ್ಷೆಯಂತೆ ಉತ್ತಮ ಸ್ಥಾನಮಾನ ಲಭ್ಯವಾಗಲಿದೆ. ಮನೋಭಾವಕ್ಕೆ ಕುಟುಂಬ ವರ್ಗದವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಕೆಲವು ವಿಷಯದಲ್ಲಿ ಕಠಿಣ ನಿಲುವಿನ ಅಗತ್ಯವಿದೆ.
ರಬ್ಬರ್, ಪ್ಲಾಸ್ಟಿಕ್ ವ್ಯವಹಾರದವರು ವ್ಯಾಪಾರದಲ್ಲಿ ಅಧಿಕ ಲಾಭ ಹೊಂದುವರು. ತೆಗೆದುಕೊಂಡಿರುವ ನಿರ್ಧಾರಗಳು ಭವಿಷ್ಯದ ಮೇಲೆ ಉತ್ತಮ ಪರಿಣಾಮ ಬೀರಲಿವೆ. ನಿರ್ಧಾರದಲ್ಲಿ ಸ್ಪಷ್ಟತೆ ಇರಲಿ.