ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಶತ್ರು ಬಾಧೆ ನಿವಾರಣೆ ಆಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಜನವರಿ 2026, 23:55 IST
Last Updated 27 ಜನವರಿ 2026, 23:55 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಿದ್ಯಾಭ್ಯಾಸವನ್ನು ಮುಂದುವರಿಸುವ ಪ್ರಯತ್ನ ಮಾಡಿದಲ್ಲಿ ಸಫಲವಾಗುವುದು. ಹತ್ತಾರು ಜನರಿಗೆ ಮಾರ್ಗದರ್ಶಕರಾಗಿ ನೇಮಕಗೊಳ್ಳುವ ಯೋಗವಿದೆ. ನಿಸ್ವಾರ್ಥ, ತ್ಯಾಗದ ಮನೋಭಾವ ಬೆಳೆಸಿಕೊಳ್ಳಿ.
  • ವೃಷಭ
  • ಸಿವಿಲ್ ಎಂಜಿನಿಯರುಗಳಿಗೆ ಹೆಚ್ಚು ಲಾಭದ ದಿನ. ಅದೃಷ್ಟ ದೇವತೆ ನಿಮ್ಮ ಕೈ ಹಿಡಿದಿದ್ದಾಳೆ. ನಿಮ್ಮ ವ್ಯಾಪಾರ ವ್ಯವಹಾರಗಳು ಅಧಿಕ ವರಮಾನಗಳನ್ನು ತರಲಿವೆ. ಅನಗತ್ಯ ಖರೀದಿಯಲ್ಲಿ ದುಂದುವೆಚ್ಚ ಮಾಡದಿರಿ.
  • ಮಿಥುನ
  • ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ, ಅಭಿವೃದ್ಧಿಯ ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತವೆ. ಶಸ್ತ್ರಚಿಕಿತ್ಸಾ ವೈದ್ಯರಿಗೆ ರೋಗಿಯ ಕುಟುಂಬಸ್ಥರಿಂದ ಪ್ರಶಂಸೆ ಕೇಳಿ ಬರುವುದು.
  • ಕರ್ಕಾಟಕ
  • ನೀವು ಮಾಡಿದ ಹಳೆ ತಪ್ಪುಗಳನ್ನೇ ಮತ್ತೆ ಮತ್ತೆ ಹೇಳುವ ಮೂಲಕ ನಿಮ್ಮನ್ನು ಗಾಸಿಗೊಳಿಸುವ ಜನರು ನಿಮಗೆ ಇಂದು ಎದುರಾಗಬಹುದು. ನೀವು ನಿಮ್ಮ ವೈಯಕ್ತಿಕ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ.
  • ಸಿಂಹ
  • ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯವಿದೆ. ಹೆಚ್ಚಿನ ಜ್ಞಾನಸಂಪಾದನೆ ಬಗ್ಗೆ ಚಿಂತನೆ ನಡೆಯುವುದು. ದುರ್ಗಾ ದೇವಿಯನ್ನು ಆರಾಧಿಸಿದಲ್ಲಿ ಶುಭವು ಪ್ರಾಪ್ತಿಯಾಗುವುದು.
  • ಕನ್ಯಾ
  • ನಿಮ್ಮ ಸಮಾಜ ಸೇವೆಯನ್ನು ಕುಟುಂಬದವರು ಹಾಗೂ ಸಮಾಜದವರು ಗುರುತಿಸಿ ಶ್ಲಾಘಿಸುವರು. ಅನೇಕ ಕಡೆಯಿಂದ ಸಹಾಯ ಹಸ್ತಗಳು ಸಿಗುವವು. ಇದೇ ಪ್ರೇರಣೆಯೊಂದಿಗೆ ಮುಂದುವರಿಯಿರಿ.
  • ತುಲಾ
  • ಪತ್ತೇದಾರಿ ಕೆಲಸ ಮಾಡುವವರು ಕಾನೂನುಬಾಹಿರವಾದ ಮಾರ್ಗಗಳನ್ನು ಅನುಸರಿಸದಂತೆ ಕೆಲಸವನ್ನು ಮಾಡಿ. ಶಿಶುವಿನ ಜನನ ಕುಟುಂಬದಲ್ಲಿ ಸಂತೋಷಕ್ಕೆ ಕಾರಣವಾಗುತ್ತದೆ.
  • ವೃಶ್ಚಿಕ
  • ಪ್ರಭಾವಿ ವ್ಯಕ್ತಿಗಳ ಒಡನಾಟ ನಿಮಗೆ ಹೆಚ್ಚಿನ ಸ್ಥಾನಮಾನದ ಜೊತೆಯಲ್ಲಿ ಆಯಾಸವನ್ನು ತಂದು ಕೊಡಲಿದೆ. ಮಹತ್ತರವಾದುದನ್ನು ಸಾಧಿಸಲು ಕುಟುಂಬ ಹಾಗೂ ಸ್ವಸ್ಥಾನದಿಂದ ದೂರವಾಗುವ ಸಾಧ್ಯತೆಗಳಿವೆ.
  • ಧನು
  • ನಿಮ್ಮ ವ್ಯವಹಾರದಲ್ಲಿ ಅಡ್ಡಿ ಆತಂಕ ಎದುರಾದರೂ ಇಷ್ಟದೇವತೆಯ ಆರಾಧನೆಯಿಂದಾಗಿ ಸಹಜವಾಗಿ ಮುಂದುವರಿಯುವುದು. ಶತ್ರು ಬಾಧೆ ಈ ದಿನದಿಂದ ಹಂತ ಹಂತವಾಗಿ ನಿವಾರಣೆ ಆಗಲಿದೆ.
  • ಮಕರ
  • ವಾತ ಅಥವಾ ಪಿತ್ತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಾಣಾಯಾಮ ಉತ್ತಮವಾದುದು. ಉದ್ಯೋಗಕ್ಕಾಗಿ ಹೆಚ್ಚಿನ ಪರಿಶ್ರಮ ಮತ್ತು ದೇವರ ಕೃಪಾ ಕಟಾಕ್ಷ ಪಡೆಯಬೇಕಾಗುವುದು.
  • ಕುಂಭ
  • ನಿಮ್ಮನ್ನು ಅವಲಂಬಿಸಿಕೊಂಡು ಕೆಲಸ ಮಾಡುತ್ತಿರುವವರನ್ನು ಕಡೆಗಣಿಸುವುದು ಸರಿಯಲ್ಲ. ಸಮಯವನ್ನು ಅರಿತು ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ.
  • ಮೀನ
  • ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವ ನಿಮ್ಮ ವ್ಯಕ್ತಿತ್ವ ಎಲ್ಲರ ವಿರೋಧಕ್ಕೆ ಕಾರಣವಾಗುವುದು. ನಿಮ್ಮ ಮೇಲೆ ನಂಬಿಕೆ ಇಟ್ಟು ಮಾಡಿದಂತಹ ಉಪಕಾರವನ್ನು ಮರೆಯಬೇಡಿ. ರಾಜಕೀಯದಲ್ಲಿ ಪ್ರಭಾವ ಗಳಿಸಿಕೊಳ್ಳುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.