ADVERTISEMENT

ದಿನ ಭವಿಷ್ಯ: ಸಂಘ ಸಂಸ್ಥೆಯ ಜವಾಬ್ದಾರಿಯಿಂದ ಸದ್ಯಕ್ಕೆ ವಿಮುಖರಾಗಬೇಡಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಜೂನ್ 2025, 0:06 IST
Last Updated 28 ಜೂನ್ 2025, 0:06 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ರೈತಾಪಿ ವರ್ಗದವರಿಗೆ ನಿರಂತರ ಕೆಲಸ ಕಾರ್ಯಗಳಿಂದಾಗಿ ದಣಿದ ನಿಮಗೆ ಸ್ವಲ್ಪಮಟ್ಟಿನ ಬಿಡುವು ಆರಾಮವೆನಿಸುವುದು. ಜಗದ್ಗುರುವಿನ ದರ್ಶನದಿಂದ ಮನಸ್ಸಿನಲ್ಲಿರುವ ಪ್ರಶ್ನೆಗೆ ಸರಿಯಾದ ಉತ್ತರ ದೊರೆಯುತ್ತದೆ.‌
  • ವೃಷಭ
  • ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ವಿಶ್ವಾಸಿಗಳಿಂದ ವೈದ್ಯರ ಸಂಪರ್ಕ ಸಹಾಯ ಹಸ್ತ ಸಿಗುವುದು. ಉನ್ನತ ಶಿಕ್ಷಣವನ್ನು ಪಡೆದವರು ಓದಿಗೆ ತಕ್ಕ ಕೆಲಸವನ್ನು ನಿರೀಕ್ಷಿಸುತ್ತಿದ್ದರೆ ಸದ್ಯದಲ್ಲಿ ಸಿಗುವುದು ಕಷ್ಟಕರ.
  • ಮಿಥುನ
  • ಈಗ ನಿರ್ಮಾಣವಾಗಿರುವ ಸಂಚಾರ ಪ್ರವೃತ್ತಿಯನ್ನು ನಿಗದಿತ ವೇಳಾಪಟ್ಟಿಯನ್ನು ಮಾಡಿಕೊಳ್ಳುವುದರ ಮೂಲಕ ಸರಿಪಡಿಸಿಕೊಳ್ಳಬಹುದು. ನಿರ್ಜಲೀಕರಣದಂಥ ಸಮಸ್ಯೆಗಳು ಕಾಡಬಹುದು.
  • ಕರ್ಕಾಟಕ
  • ದುರ್ಜನರ ಮೂಲಕ ಉಂಟಾಗಬಹುದಾದ ಅಪಾಯದ ಸೂಚನೆ ಇದ್ದರೆ ಈ ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ. ಸಂಘ ಸಂಸ್ಥೆಯ ಜವಾಬ್ದಾರಿಯಿಂದ ಸದ್ಯಕ್ಕೆ ವಿಮುಖರಾಗಬೇಡಿ.
  • ಸಿಂಹ
  • ಉದ್ಯೋಗ ಅಥವಾ ಉದ್ಯಮ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ ರೀತಿಯಲ್ಲಿ ನಿಸ್ಸಂಶಯವಾಗಿ ಸಿಗಲಿದೆ. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಹಣ ಸಹಾಯ ಮಾಡುವ ಮುನ್ನ ಯೋಚಿಸಿ.
  • ಕನ್ಯಾ
  • ಸಾಮಾಜಿಕ ಕಾರ್ಯಗಳಿಗೆ ಸಾರ್ವಜನಿಕ ವಲಯದಿಂದ ಮನ್ನಣೆ ಸಿಗುವುದು. ಹಿರಿಯ ಅಧಿಕಾರಿಗಳ ನಿಯಮಕ್ಕೆ ಸರಿಯಾಗಿ ನಡೆದುಕೊಂಡರೆ ಬುದ್ಧಿವಂತರಾಗುತ್ತೀರಿ. ಆರ್ಥಿಕ ವಿಚಾರದಲ್ಲಿ ಸಮತೋಲನ ಅಗತ್ಯವಿದೆ.
  • ತುಲಾ
  • ಹೆಚ್ಚಿನ ನಿಗಾವಹಿಸಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಪ್ರಶಂಸೆಯ ಬದಲಾಗಿ ಅವಹೇಳನೆ ಮಾತುಗಳನ್ನು ಕೇಳಬೇಕಾಗಬಹುದು. ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ.
  • ವೃಶ್ಚಿಕ
  • ಅಧಿಕಾರಿಗಳು, ಆಡಳಿತ ಮಂಡಳಿಯವರು ಮೇಲಿಟ್ಟಿದ್ದ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ತರಹದ ಅಳುಕುವ ಪ್ರಮೇಯವಿರುವುದಿಲ್ಲ.
  • ಧನು
  • ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವ ಗೆಳೆಯರ ಪರಿಚಯ, ಸ್ನೇಹಿತ ರೊಂದಿಗಿನ ಮಾತುಕತೆ ಉಪಯುಕ್ತವೆನಿಸಲಿದೆ. ಆಯ್ಕೆ ಸರಿಯಾಗಿದೆ. ಸ್ವಂತ ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ.
  • ಮಕರ
  • ನಿಮ್ಮ ವಿರುದ್ಧವಾಗಿ ನಡೆಯುವವರಿಗೆ, ಮಾತನಾಡುವವರಿಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ. ಕಾಲವೇ ಉತ್ತರ ಕೊಡುತ್ತದೆ. ಮಾತುಗಳು ಕೆಲವರಿಗೆ ಪ್ರೇರಣೆಯಾಗುವುದರಿಂದ ಮಾತಿನ ಮೇಲೆ ನಿಗಾವಿರಲಿ.
  • ಕುಂಭ
  • ಆರೋಗ್ಯದಲ್ಲಿ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಏರುಪೇರಾಗುವ ಲಕ್ಷಣ ಇರಲಿದೆ. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ. ಅಸಹಾಯಕರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಪಾದಿಸಬಹುದು.
  • ಮೀನ
  • ಅಂತರರಾಜ್ಯದ ಅತಿ ಮುಖ್ಯ ವ್ಯಕ್ತಿಯೊಬ್ಬರ ಪರಿಚಯ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವಂಥವರ ಸಮಸ್ಯೆಗಳಿಗೆ ಸಮಾಧಾನ ದೊರೆಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.