ADVERTISEMENT

ದಿನ ಭವಿಷ್ಯ: ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಜೂನ್ 2025, 23:52 IST
Last Updated 28 ಜೂನ್ 2025, 23:52 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳುವುದು ಸೂಕ್ತ. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ನಿಮ್ಮಿಂದ ಸೃಷ್ಟಿಯಾಗಲಿದೆ.
  • ವೃಷಭ
  • ಸಂಸಾರದ ವಿಷಯಗಳತ್ತ ಗಮನ ಹರಿಸುವಿರಿ. ಯೋಜನೆಯೊಂದಕ್ಕೆ ನಿಮ್ಮ ಸೃಜನಾತ್ಮಕತೆಯನ್ನು ಉಪಯೋಗಿಸಿಕೊಳ್ಳುವರು, ಫಲವಾಗಿ ಸಮಾಜ ದಲ್ಲಿ ಗಮನಾರ್ಹ ವ್ಯಕ್ತಿಯಾಗುವಿರಿ. ಸಹವರ್ತಿಗಳು ಬೆಂಬಲ ನೀಡುವರು.
  • ಮಿಥುನ
  • ವೃತ್ತಿ ಅಥವಾ ಕೆಲಸಗಳಲ್ಲಿ ಬದಲಾವಣೆ ಸನ್ನಿಹಿತವಾಗಲಿದೆ. ಸಮಾನ ಮನಸ್ಕರ ಜೊತೆಗಿನ ವ್ಯವಹಾರದಲ್ಲಿ ಮಾನಸಿಕ ಭಿನ್ನಾಭಿಪ್ರಾಯಗಳು ಉದ್ಭವ ವಾಗಲಿದೆ. ಸ್ನೇಹಿತರೊಂದಿಗೆ ಕ್ಲಿಷ್ಟಕರ ಕ್ಷಣಗಳನ್ನು ಕಳೆಯುವಂತಾಗಲಿದೆ.
  • ಕರ್ಕಾಟಕ
  • ಹೆಚ್ಚಿನ ಕ್ರಿಯಾತ್ಮಕ ಶಕ್ತಿ ಇದೆ ಆದರೆ ಕೆಲಸಗಳು ಕಾರ್ಯಗತ ವಾಗಲು ಆತುರ ತೋರಬೇಡಿ. ಏಕಮುಖ ಪ್ರತಿಭೆಯನ್ನು ನಾಶಮಾಡಿ ಇತರ ವಿಷಯಗಳಿಗೂ ಪ್ರಾಮುಖ್ಯತೆ ನೀಡಿ. ದಲ್ಲಾಳಿಗಳಿಗೆ ತೃಪ್ತಿಕರ ದಿನವಾಗುವುದು.
  • ಸಿಂಹ
  • ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಅತಿಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ. ಆಕಸ್ಮಿಕ ಧನಲಾಭ ಉಂಟಾಗಲಿದೆ. ಹೊಸ ಜವಾಬ್ದಾರಿ ಯನ್ನು ವಹಿಸಿಕೊಳ್ಳಬೇಕಾಗುವುದು. ಪ್ರಾಮಾಣಿಕತೆಗೆ ಅಡ್ಡಿ ಉಂಟಾಗುವುದು.
  • ಕನ್ಯಾ
  • ಸಮಸ್ಯೆ ಪರಿಸಿಕೊಳ್ಳಲು ಸೂಕ್ತ ಸಲಹೆ ಪಡೆಯುವುದು ಉತ್ತಮ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿನ ಭಿನ್ನಾಭಿಪ್ರಾಯ ದೂರಾವಾಗುವುದು. ಕಬ್ಬಿಣ ವ್ಯಾಪಾರಸ್ಥರಿಗೆ ಆಶಾದಾಯಕ ದಿನ.
  • ತುಲಾ
  • ಯೋಜನೆಗಳು ಕಾರ್ಯಗತಗೊಳ್ಳುವುದರ ಬಗ್ಗೆ ಶನೈಶ್ಚರನ ಆರಾಧನೆ ಮಾಡುವುದು ಉತ್ತಮ. ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ಹೆಚ್ಚಿನ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.
  • ವೃಶ್ಚಿಕ
  • ವಾಣಿಜ್ಯ ವ್ಯವಹಾರಗಳ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿ ಮಾಡುವ ನಿಮ್ಮ ಕೆಲಸದಲ್ಲಿ ವಿಘ್ನ ಇರಲಿದೆ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರತಿಸ್ಪರ್ಧಿಗಳು ಹುಟ್ಟುವರು.
  • ಧನು
  • ನಿಮ್ಮ ಪ್ರಿಯಕರನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
  • ಮಕರ
  • ನೆಮ್ಮದಿಯ ವಿಷಯವೇನೆಂದರೆ ಧನಾಗಮದಲ್ಲಿ ಚಿಂತೆ ಇರದು. ದೀರ್ಘಕಾಲಿಕ ಕೆಲಸಗಳು ನಿಧಾನವಾಗಿ ಸಾಗಲಿವೆ. ಇಂದು ಹಳೇ ಬಾಕಿ ಸಂದಾಯವಾಗುವುದು. ಸಂಜೆಯ ಸಮಯದಲ್ಲಿ ಶಿರೋವೇದನೆ ಕಾಡಲಿದೆ.
  • ಕುಂಭ
  • ಹಣಕಾಸು ಪರಿಸ್ಥಿತಿಗಳು ಉತ್ತಮಗೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತಯಾರಿ ನಡೆಸಿಕೊಳ್ಳಿ. ಕೆಲಸದಲ್ಲಿ ಬದಲಾವಣೆ ಬಯಸಿದ್ದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ.
  • ಮೀನ
  • ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ಕಾರ್ಖಾನೆ ಕೆಲಸಗಾರರ ಬೇಡಿಕೆಗಳು ಇತ್ಯರ್ಥವಾಗಲಿದೆ. ವಾಹನ ಮಾರಾಟಗಾರರಿಗೆ ಉತ್ತಮ ಆದಾಯ ಲಭ್ಯ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.