ದಿನ ಭವಿಷ್ಯ: ಈ ರಾಶಿಯ ಸಿನಿಮಾ ಕಲಾವಿದರಿಗೆ ಅವಕಾಶ ಒದಗಿ ಬರಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಆಗಸ್ಟ್ 2024, 22:57 IST
Last Updated 11 ಆಗಸ್ಟ್ 2024, 22:57 IST
ಮೇಷ
ನಾನಾ ರೀತಿಯಲ್ಲಿ ಉನ್ನತಿ ಗೋಚರಕ್ಕೆ ಬಂದರೂ ಹಣದ ಖರ್ಚು ವೆಚ್ಚಗಳ ಲೆಕ್ಕಾಚಾರದ ಬಗ್ಗೆ ಗಮನವಿರಲಿ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ದಿನಸಿ ವ್ಯಾಪಾರಿಗಳಿಗೆ ಅಲ್ಪ ಲಾಭ.
ವೃಷಭ
ವ್ಯಾಪಾರ ವಿಷಯಗಳ ಸಂಬಂಧದಲ್ಲಿ ಕ್ಲಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಂತರಂಗದ ಭಾವನೆಗಳಿಗೆ ಆದ್ಯತೆ ನೀಡಿ. ಚಾಲಕ ವೃತ್ತಿಯವರು ಸ್ವಂತ ವಾಹನ ಖರೀದಿಯ ದಾರಿಯನ್ನು ನೋಡಬಹುದು.
ಮಿಥುನ
ಈ ದಿನ ಸುತ್ತಮುತ್ತಲಿನ ಘಟನೆಗಳಿಂದ ನಿಮ್ಮ ಮನಸ್ಸು ಪರಿವರ್ತನೆಯಾಗಲಿದೆ. ಲೇವಾದೇವಿ ವ್ಯವಹಾರ ಮುಂದುವರಿಯುವುದು. ಯಂತ್ರಗಳ ರಿಪೇರಿ ಕೆಲಸಗಾರರಿಗೆ ಅಧಿಕ ವರಮಾನ ಇರಲಿದೆ.
ಕರ್ಕಾಟಕ
ಸಿನಿಮಾ ಕಲಾವಿದರಿಗೆ ಅವಕಾಶ ಒದಗಿ ಬರಲಿದೆ, ಅಭಿಮಾನಿಗಳನ್ನು ಸಂಪಾದಿಸಿಕೊಳ್ಳುವಿರಿ. ಗೃಹ ನಿರ್ಮಾಣ ಕಾರ್ಯಕ್ಕೆ ಆರ್ಥಿಕತೆಯ ಅಭಾವ ಎದುರಾಗಬಹುದು. ಮನಸ್ಸಿನಲ್ಲಿ ಹೆದರಿಕೆ ಮೂಡಲಿದೆ.
ಸಿಂಹ
ಅಣ್ಣ-ತಮ್ಮಂದಿರು ಒಂದೇ ವ್ಯವಹಾರದಲ್ಲಿ ಸಂಯಮದಿಂದ ನಡೆದುಕೊಂಡರೆ ವ್ಯವಹಾರಿಕವಾಗಿ ಲಾಭ ಹೊಂದಬಹುದು. ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವಿರಿ.
ಕನ್ಯಾ
ಬಹಳ ದಿನಗಳಿಂದ ಕಾಡುತ್ತಿದ್ದ ಭೂಮಿಗೆ ಸಂಬಂಧಿಸಿದ ಸಮಸ್ಯೆಯೊಂದು ನಿರಾತಂಕವಾಗಿ ಸ್ನೇಹಿತನಿಂದ ಬಗೆಹರಿಯುವುದು. ಆಯ್ಕೆ ಸರಿಯಾಗಿದ್ದು ಕೆಲಸಗಳನ್ನು ನಿರ್ಭಯವಾಗಿ ಮಾಡಿ ಮುಗಿಸುವಿರಿ.
ತುಲಾ
ಕೋರ್ಟು ಕಚೇರಿ ದೂರುಗಳಂತಹ ಗೊಡವೆಗಳಿಗೆ ಪ್ರಾಮುಖ್ಯತೆ ಕೊಡುವುದು ಸರಿಯಲ್ಲ. ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳ ಲಕ್ಷಣಗಳು ನಿಮ್ಮ ಗಮನಕ್ಕೆ ಬಂದಲ್ಲಿ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ವೃಶ್ಚಿಕ
ಉತ್ಪಾದಿಸಿದ ವಸ್ತುಗಳಿಗೆ ನಿಮ್ಮ ಪ್ರಾಂತ್ಯದಲ್ಲಿ ಹೆಚ್ಚಿನ ಬೇಡಿಕೆ ದೊರೆತು ಸಂತೋಷಕರ ವಾತಾವರಣ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು.
ಧನು
ಎಂಜಿನಿಯರ್ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಲು ತಯಾರಿ ನಡೆಸುವಿರಿ. ಮನೆಯಲ್ಲಿನ ವ್ಯವಹಾರಗಳಲ್ಲಿ ಕುಟುಂಬದವರಿಂದ ಈ ದಿನ ಸಕಾರಾತ್ಮಕವಾದ ಪ್ರತಿಕ್ರಿಯೆಗಳನ್ನು ಕಾಣುವಿರಿ.
ಮಕರ
ಹಲವು ಕಾರ್ಯದಲ್ಲಿ ದೇಹಾಯಾಸ ಮಾತ್ರ ನಿಮಗೆ ಸಿಗುವುದು. ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಉಂಟಾಗಲಿದೆ.
ಕುಂಭ
ಹಾದಿಯಲ್ಲಿ ಹೋಗುವ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವಂಥ ಘಟನೆ ನಡೆಯುವುದು. ಹಿರಿಯರಿಂದ ಹಿತವಾಕ್ಯಗಳು, ಮಾರ್ಗದರ್ಶನ ಸಿಗುವುದು. ಪುಸ್ತಕ ಓದುವ ಹವ್ಯಾಸ ಹುಟ್ಟಲಿದೆ.
ಮೀನ
ಪದವೀಧರರಿಗೆ ತಮ್ಮ ಉದ್ಯೋಗದ ಅನ್ವೇಷಣೆಯಲ್ಲಿ ಹೊಸ ರೀತಿಯ ಬೆಳವಣಿಗೆ ಕಂಡುಬರಲಿದೆ. ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಲಕ್ಷಣಗಳಿವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನಹರಿಸಬೇಕು.