ADVERTISEMENT

ದಿನ ಭವಿಷ್ಯ: ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಜೂನ್ 2024, 0:04 IST
Last Updated 3 ಜೂನ್ 2024, 0:04 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮನೆಯಲ್ಲಿನ ವಿಷಯಗಳನ್ನು ಹೊರಗೆ ಸೋರಿಕೆ ಮಾಡುತ್ತಿರುವ ವ್ಯಕ್ತಿಗಳು ಖಂಡಿತವಾಗಿ ನಿಮ್ಮೊಂದಿಗೆ ಇರುತ್ತಾರೆ. ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು.
  • ವೃಷಭ
  • ಜತೆಗಾರರ ಅಭಿರುಚಿಗಳು ನಿಮ್ಮ ಅಭಿರುಚಿಗಿಂತ ಬಹಳ ಭಿನ್ನವಾಗಿರುವುದರಿಂದ ಇಂದಿನ ದಿನ ಖುಷಿ ಎನ್ನಿಸುವುದಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ದೇವತಾನುಗ್ರಹದಿಂದ ಸಿಗಲಿದೆ.
  • ಮಿಥುನ
  • ಪ್ರಯತ್ನ ಬೇಕಾದಷ್ಟೇ ಇದ್ದರೂ ಯಶಸ್ಸು ಒಲಿದು ಬರುವುದು ಕಷ್ಟಕರ ಸಂಗತಿ. ಯೋಗ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು.
  • ಕರ್ಕಾಟಕ
  • ಸಹೋದ್ಯೋಗಿಗಳೊಡನೆ ಪ್ರೀತಿಯಿಂದ ವರ್ತಿಸುವುದರಿಂದ ಕೆಲಸ ಸರಾಗವಾಗಿ ಸಾಗಲಿದೆ. ಹತ್ತಿಯ ಕೆಲಸವನ್ನು ಮಾಡುವಂಥವರಿಗೆ ಉಷ್ಣದ ಸಮಸ್ಯೆ ಕಾಡಬಹುದು. ಆಕಸ್ಮಿಕ ಪ್ರಯಾಣದ ಸಾಧ್ಯತೆಯಿದೆ.
  • ಸಿಂಹ
  • ವಿವಿಧ ಕಾರಣಗಳಿಂದಾಗಿ ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸಲಾಗದೆ ದಿನದ ಕಡೆಯಲ್ಲಿ ಬೇಸರ ಪಡುವಿರಿ. ಸಂಗೀತ-ನಾಟ್ಯ ಸಾಧಕರಿಗೆ ಉತ್ತಮವಾದ ವೇದಿಕೆ ದೊರೆತು ವಿದ್ವತ್ ಪ್ರದರ್ಶನವಾಗುವುದು.
  • ಕನ್ಯಾ
  • ಕೆಲ ನಿರ್ಧಾರಗಳು ನಿಮಗೆ ಸರಿಯಾಗಿ ಕಂಡು ಬಂದರೂ ಸಭೆಯಲ್ಲಿ ಇತರರ ದೃಷ್ಟಿಕೋನವನ್ನು ನೋಡಿ ಬದಲಿಸಿಕೊಳ್ಳಬೇಕಾಗಬಹುದು. ಬೇರೆ ಬೇರೆ ಕಾರಣಗಳಿಗಾಗಿ ಒಂದೇ ಸ್ಥಳಕ್ಕೆ ಪುನಃ ಭೇಟಿ ನೀಡುವಂತಾಗುತ್ತದೆ
  • ತುಲಾ
  • ತಾಯಿಯ ಮೂಲಕ ನಿಮಗೆ ಬರಬೇಕಾದ ಪಿತ್ರಾರ್ಜಿತ ಆಸ್ತಿಗೆ ಬಹಳ ಪ್ರಯತ್ನ ಬೇಕಾಗುತ್ತದೆ. ಸ್ಥಿರ ಆಸ್ತಿಯನ್ನು ಉಳಿಸಿಕೊಳ್ಳುವ ಕಾರಣದಿಂದ ಕೋರ್ಟು ಕಚೇರಿ ನಡುವೆ ಅಲೆಯುವಂತೆ ಆಗುತ್ತದೆ.
  • ವೃಶ್ಚಿಕ
  • ಮೇಲಧಿಕಾರಿಗಳಿಂದ ನೀವು ಅಪೇಕ್ಷಿಸುವ ಸಹಕಾರಗಳು ದೊರೆತಂತೆ ಕಂಡರೂ ಸಂತೃಪ್ತಕರ ರೀತಿಯಲ್ಲಿರುವುದಿಲ್ಲ. ಹೊಸ ನೀರು ಬಂದಾಗ ಹಳೆ ನೀರು ಹೋಗುವುದು ಸಹಜವಾದರೂ ಹಳೆಯ ಜನರನ್ನು ಮರೆಯದಿರಿ.
  • ಧನು
  • ಮಿತ್ರರಲ್ಲಿ ಸ್ನೇಹವೂ ಬಂಧುಗಳಲ್ಲಿ ಸಂಬಂಧವೂ ಉಳಿಸಿಕೊಂಡು ಹೋಗುವುದು ಇಹಕ್ಕೂ ಪರಕ್ಕೂ ಒಳಿತು ಉಂಟುಮಾಡುತ್ತದೆ. ಇಂದು ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ.
  • ಮಕರ
  • ಗುರಿಯನ್ನು ತಲುಪುವುದು ಕಷ್ಟವೇನಲ್ಲವಾದರೂ ಪ್ರಯತ್ನ ಮುಖ್ಯ. ಜೀವನದ ಕೆಲವು ಪ್ರಮುಖ ಸಮಾರಂಭಕ್ಕೆ ನೀವು ಕ್ಷಣಗಣನೆ ಮಾಡುವಂತಾಗುವಿರಿ.
  • ಕುಂಭ
  • ದ್ರವಾಹಾರದ ಸೇವನೆ ಕಡಿಮೆಯಾಗಿ ಚರ್ಮದಲ್ಲಿ ಶುಷ್ಕತೆ ಉಂಟಾಗುವ ಸಾಧ್ಯತೆ ಇದೆ. ಎಚ್ಚರವಹಿಸಿ. ಕೆಲಸ ಮತ್ತು ದುಡಿಮೆ ಸಮೃದ್ಧಿಯಾಗಿ ಇಲ್ಲವಾದರೂ ಕೌಟುಂಬಿಕ ನೆಮ್ಮದಿಗೆ ಕೊರತೆ ಕಾಣುವುದಿಲ್ಲ.
  • ಮೀನ
  • ಸಂಘ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿದವರು ಲೆಕ್ಕ ಪತ್ರಗಳ ಪರಿಶೋಧನೆ ಮಾಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಉಂಟಾಗುತ್ತದೆ. ಕಿರಿಯರ ಮಾತನ್ನು ಕಡೆಗಣಿಸದೆ ಪರಾಮರ್ಶಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.