ADVERTISEMENT

ದಿನ ಭವಿಷ್ಯ: ಈ ರಾಶಿಯವರ ಗೃಹ ವಿವಾದಗಳು ಉಪಶಮನವಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಅಕ್ಟೋಬರ್ 2025, 0:59 IST
Last Updated 14 ಅಕ್ಟೋಬರ್ 2025, 0:59 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವ್ಯವಹಾರಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಹೊಸ ಸ್ಥಾನ ಅಥವಾ ಹೊಸ ಮನೆಗೆ ಹೋಗುವ ಯೋಚನೆ ಬರಲಿದೆ. ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ. ಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ.
  • ವೃಷಭ
  • ಸಸ್ಯಗಳ ಉತ್ಪತ್ತಿ ವಸ್ತುಗಳ ಮಾರಾಟಗಾರರಿಗೆ ಹಾಗೂ ನರ್ಸರಿ ಹೊಂದಿರುವವರಿಗೆ ಲಾಭದ ದಿನ. ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆ ನಿಮ್ಮದಾಗುವುದು. ಹಣಕಾಸಿನ ಕೊರತೆ ಇರುವುದಿಲ್ಲ.
  • ಮಿಥುನ
  • ಅನೇಕ ವಿಚಾರಗಳನ್ನು ಸಮರ್ಥವಾಗಿ ನಿರ್ವಹಿಸುವ ಕಾರ್ಯ ನಿರ್ವಹಣಾವೈಖರಿಗೆ ಉತ್ತಮ ಮಾತುಗಳನ್ನು ಕೇಳುವಿರಿ. ಸಹೋದರ ಬಳಗದ ವ್ಯಕ್ತಿಗಳಿಂದ ಆರ್ಥಿಕ ಸಹಾಯದ ಯಾಚನೆ ಬರಲಿದೆ.
  • ಕರ್ಕಾಟಕ
  • ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರುವುದರಿಂದ ಚಿಂತೆ ಇರದು. ಕೆಲಸಗಳು ನಿಧಾನವಾಗಿ ಸಾಗಲಿವೆ. ಬಾಕಿ ಸಂದಾಯವಾಗುವುದು. ಶತ್ರುಗಳ ಬಲೆಗೆ ಬೀಳದಂತೆ ಎಚ್ಚರವಹಿಸಬೇಕು.
  • ಸಿಂಹ
  • ರಾಜಕಾರಣದಲ್ಲಿ ಸಮಯ ಕಳೆಯುವಿರಿ. ತಂದೆಯ ಆರೋಗ್ಯ ಪರಿಸ್ಥಿತಿಗಳು ಸದ್ಯದಲ್ಲೇ ಸುಧಾರಿಸಲಿವೆ. ಕೆಲಸಕ್ಕೆ ಸೂಕ್ತ ಗೌರವಾದರಗಳು ದೊರೆಯಲಿದ್ದು ಆಶ್ಚಯ ಎನಿಸಬಹುದು.
  • ಕನ್ಯಾ
  • ಮಹತ್ವಕಾಂಕ್ಷೆ ಈಡೇರಿಕೆಯತ್ತ ಸಕಾರಾತ್ಮಕ ದೃಷ್ಟಿಕೋನವಿರಲಿ. ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ವೃತ್ತಿರಂಗದಲ್ಲಿ ಸಮಾಧಾನದ ವಾತಾವರಣದಿಂದ ಕೆಲಸ ಕಾರ್ಯಗಳು ಸಾಗಲಿವೆ.
  • ತುಲಾ
  • ವ್ಯವಹಾರಿಕವಾಗಿ ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ. ಹಿಂಜರಿಕೆಯ ಸ್ವಭಾವ ಬಿಟ್ಟು ಕಾರ್ಯ ಕೈಗೊಳ್ಳಲು ಮುಂದಾಗಿ. ಗುತ್ತಿಗೆದಾರರಿಗೆ ಶುಭ ಸುದ್ದಿ ಕೇಳಿಬರಲಿದೆ. ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗುವುದು.
  • ವೃಶ್ಚಿಕ
  • ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ. ಷೇರು ವ್ಯಾಪಾರವು ಅದೃಷ್ಟದಾಯಕ . ಆರೋಗ್ಯ ಉತ್ತಮವಾಗಿರುವುದು. ಬಿಳಿ ಬಣ್ಣ ಅದೃಷ್ಟ ತರುವುದು.
  • ಧನು
  • ಮೋಸದ ವ್ಯವಹಾರ ಹಾಗೂ ಕಾನೂನುಬಾಹಿರ ಸಂಗತಿಗಳಲ್ಲಿ ಕೈಹಾಕು ವುದನ್ನು ಬಿಟ್ಟುಬಿಡಿ. ಮಕ್ಕಳ ದುಡಿಮೆಯಿಂದ ಬರುತ್ತಿರುವ ಹಣದ ಮೂಲದ ಬಗ್ಗೆ ಗಮನಹರಿಸಿ. ಹಳೆ ವಿಷಯ ನೆನಪಿಸಿಕೊಳ್ಳಬೇಡಿ
  • ಮಕರ
  • ಅಚ್ಚರಿಯನ್ನು ಉಂಟು ಮಾಡಬಹುದು. ಅಪರೂಪದ ಸಮಾರಂಭಕ್ಕೆ ಆಹ್ವಾನ ಬರುವುದು. ಹಾಲು ಮಾರಾಟಗಾರರಿಗೆ ಲಾಭವಿದೆ. ಪರರಿಗೆ ಸಹಾಯ ಮಾಡುವ ಮನೋಭಾವದಿಂದ ಮುನ್ನಡೆ ಇರುವುದು.
  • ಕುಂಭ
  • ವ್ಯವಹಾರಗಳಲ್ಲಿ ಹಿಡಿತವನ್ನು ಸಾಧಿಸಿದ್ದೀರಿ. ಉತ್ಸಾಹದಿಂದ ಹೆಜ್ಜೆಗಳನ್ನಿರಿಸುವಿರಿ. ಬಟ್ಟೆ ವ್ಯಾಪಾರಿಗಳಿಗೆ ಇಂದು ಉತ್ತಮ ಮಾರಾಟ, ಲಾಭವಾಗುವುದು. ಗೃಹ ವಿವಾದಗಳು ಉಪಶಮನವಾಗುವುದು.
  • ಮೀನ
  • ರಾಜಕಾರಣಿಗಳಿಗೆ ನಾಯಕತ್ವದಲ್ಲಿ ಬದಲಾವಣೆಯಾಗುವ ಸಂಭವ ಇದೆ. ಹಣದ ಕಡೆ ಪ್ರಾಮುಖ್ಯ ಕೊಡುವುದಕ್ಕಿಂತ ಹೆಸರು ಸಂಪಾದಿಸಲು ಗಮನಹರಿಸಿ. ಜಗಳದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಆಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.