ದಿನಭವಿಷ್ಯ: ಶುಕ್ರವಾರ 29 ಆಗಸ್ಟ್-25; ಮನೆಯಲ್ಲಿ ಆಶಾಂತ ವಾತಾವರಣ ಬರದಂತೆ ಕಾಪಾಡಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಆಗಸ್ಟ್ 2025, 23:50 IST
Last Updated 28 ಆಗಸ್ಟ್ 2025, 23:50 IST
ದಿನ ಭವಿಷ್ಯ
ಮೇಷ
ಸ್ವಂತ ಪ್ರಯತ್ನದಿಂದ ಹಣ ಸಂಪಾದನೆಯಾಗುವುದು. ಕಷ್ಟಗಳಿಗೆ ಮಿತ್ರರಿಂದ ಸಹಾಯ ದೊರೆಯುವುದು. ವಿದೇಶಿ ಬಂಡವಾಳ ಹೂಡಿಕೆಗಿಂತ ಸ್ವದೇಶಿ ಕಂಪನಿಗಳ ಹೂಡಿಕೆಯ ಯೋಜನೆಗಳು ಶುಭ.
ವೃಷಭ
ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯವಾಗುವುದು. ಹವಾಮಾನಕ್ಕೆ ಹೊಂದಿಕೊಳ್ಳಲಾಗದೆ ಅನಾರೋಗ್ಯದಿಂದ ಬಳಲುವಂತಾಗುವುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರಿದಷ್ಟೂ ಸುಖ-ಶಾಂತಿ ಹೆಚ್ಚುವುದು.
ಮಿಥುನ
ವಸ್ತುಗಳ ಮೇಲೆ ಚೋರ ಕೃತ್ಯಗಳು ನಡೆಯುವ ಸಂಭವವಿದೆ, ಜಾಗ್ರತೆ ಇರಲಿ. ವ್ಯಾಪಾರದಲ್ಲಿ ಉಂಟಾಗುವ ಪೈಪೋಟಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ, ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ತಂದುಕೊಳ್ಳಿರಿ.
ಕರ್ಕಾಟಕ
ಅತೀವ ಪ್ರಯತ್ನದ ಫಲವಾಗಿ ಹೊರದೇಶದಲ್ಲಿ ಉದ್ಯೋಗ ದೊರಕಿಸಿಕೊಳ್ಳುವಿರಿ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚಿನ ಕೆಲಸವಿದ್ದು ಕೆಲಸಗಾರರಲ್ಲಿ ಹುರುಪು ಮೂಡಿಸುವಲ್ಲಿ ಯಶಸ್ವಿಯಾಗುವಿರಿ.
ಸಿಂಹ
ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಕಾರ್ಯಸಾಧನೆಯು ಅನುಕೂಲ ರೀತಿಯಲ್ಲಿ ಆಗಲಿದ್ದು, ವರಮಾನ ಹೆಚ್ಚಲಿದೆ. ಬಹಳ ದಿನಗಳ ನಂತರ ಅದ್ಭುತ ನಿರ್ಣಯವನ್ನು ಕೈಗೊಳ್ಳಲಿದ್ದೀರಿ.
ಕನ್ಯಾ
ಆದರ್ಶ ವ್ಯಕ್ತಿಗಳ ತತ್ವವನ್ನು ಅನುಸರಿಸುವ ಜತೆಗೆ ಹಿರಿಯರ ಉತ್ತಮ ಅನುಭವ, ಸಲಹೆಯನ್ನು ಅಳವಡಿಸಿಕೊಂಡಲ್ಲಿ ಯೋಚಿಸಿದ ಕಾರ್ಯಗಳು ನೆರವೇರುವುದು. ಷೇರು ವ್ಯವಹಾರದಲ್ಲಿ ಹೆಚ್ಚಿನ ಗಳಿಕೆ ಕಷ್ಟವಾಗುವುದು.
ತುಲಾ
ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ವ್ಯವಹಾರವು ಉತ್ತಮಗೊಳ್ಳುವುದು. ಕೃಷಿಕರಿಗೆ ಧಾನ್ಯ ಮಾರಾಟಕ್ಕೆ ಒಳ್ಳೆಯ ದಿನ. ಪ್ರಭಾವಿ ವ್ಯಕ್ತಿಗಳನ್ನು ಸಂದರ್ಶಿಸಲು ಅವಕಾಶ ಸಿಗುವುದು.
ವೃಶ್ಚಿಕ
ತಂದೆ ತಾಯಿ ಪ್ರೇಮ ಪೂರಿತ ಆರೈಕೆಯ ನಂತರವೂ ಮಗುವಿನ ಅಸಮಾಧಾನವನ್ನು ಕಂಡು ದುಃಖಿಸುವಂತಾಗುವುದು. ನಟರಿಗೆ ಹಲವು ಪಾಠಗಳನ್ನು ಕಲಿಯಲು ಅವಕಾಶವಿದೆ.
ಧನು
ವಿದೇಶಿ ಸಂಸ್ಥೆಯೊಂದಿಗೆ ವ್ಯಾವಹಾರಿಕ ಒಪ್ಪಂದ ಮಾಡಿಕೊಳ್ಳಲು ಸೂಕ್ತವಾಗಿರುವುದು. ಕೆಲವು ವಿಷಯಗಳು ಸರಿಯಾದ ಸಮಯಕ್ಕೆ ಮರೆತು ಹೋದಂತಾಗಿ ತೊಳಲಾಟಕ್ಕೆ ಒಳಗಾಗಬೇಕಾದೀತು.
ಮಕರ
ಉತ್ತಮ ಕಾರ್ಯಕ್ರಮ ನಿರ್ವಹಣೆಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತವೆ. ಕಾಲ ಕಳೆದಂತೆ ಪ್ರಕೃತಿ ಬದಲಾಗುವ ಹಾಗೆ ನಿಮ್ಮ ಮನಸ್ಸು ಸಹ ತಿಳಿಗೊಂಡು ಸಾಮಾನ್ಯ ಸ್ಥಿತಿಗೆ ಬರುವಿರಿ.
ಕುಂಭ
ಮನೆಯಲ್ಲಿ ಆಶಾಂತ ವಾತಾವರಣ ಬರದಂತೆ ಕಾಪಾಡಿಕೊಳ್ಳಿ. ಆರ್ಥಿಕ ಸ್ಥಿತಿಗತಿಯು ವ್ಯಸನಗಳಿಂದ ಕೆಳಗಿಳಿಯುವಂತಾಗಬಹುದು. ಹಾಲು ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭ ಆಗಲಿದೆ.
ಮೀನ
ರಾಜಕೀಯ ವಿದ್ಯಮಾನಗಳಿಂದಾಗಿ ಓಡಾಟ ಆಧಿಕಗೊಳ್ಳುವುದು. ಮನೆಯಲ್ಲಿನ ಪದ್ಧತಿಗಳನ್ನು ನಡೆಸಿಕೊಂಡು ಹೋಗಲು ಹಿರಿಯರಾಗಿದ್ದಲ್ಲಿ ಸಂಪೂರ್ಣ ಗಮನ ವಹಿಸಬೇಕು.