ADVERTISEMENT

ದಿನ ಭವಿಷ್ಯ: ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ

ದಿನ ಭವಿಷ್ಯ: ಶನಿವಾರ, 03 ಜನವರಿ, 2026

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಜನವರಿ 2026, 0:12 IST
Last Updated 3 ಜನವರಿ 2026, 0:12 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉದ್ದೇಶ ನೆರವೇರಿಸಿಕೊಳ್ಳುವುದಕ್ಕೆ ನಡೆಸಿರುವ ಪ್ರಯತ್ನಗಳು ನಿಧಾನವಾಗಿಯಾದರೂ ಸಿದ್ಧಿಸಲಿವೆ. ಉತ್ತಮ ಕಾರ್ಯದಿಂದ ಗೌರವಾನ್ವಿತ ವ್ಯಕ್ತಿಯಾಗುವಿರಿ. ಆಭರಣಗಳ ಖರೀದಿಯಿಂದ ಸಂತೋಷವಾಗುವುದು.
  • ವೃಷಭ
  • ಮನೆಯಲ್ಲಿರುವ ಆಂತರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಕೆಲಸಗಳಲ್ಲಿನ ಜವಾಬ್ದಾರಿಗಳು ಹೆಚ್ಚಿ ಆರ್ಥಿಕ ಸ್ಥಿತಿಯು ಸುಧಾರಣೆ ಕಾಣಲಿದೆ. ಹೋರಾಟದಿಂದ ಯಶಸ್ಸು ಲಭಿಸಲಿದೆ.
  • ಮಿಥುನ
  • ಮನಸ್ಸಿನಲ್ಲಿ ಹಲವು ದಿನಗಳಿಂದ ಇದ್ದ ಹಂಬಲವು ಮಿತ್ರರ ಸಹಾಯದಿಂದ ನೆರವೇರುವುದು. ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ. ಕಪ್ಪು ಬಣ್ಣ ಅದೃಷ್ಟವನ್ನು ಬದಲಾಯಿಸಲಿದೆ.
  • ಕರ್ಕಾಟಕ
  • ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಲಿದೆ. ಅವರಿಂದ ಸಿಗುವ ಸಹಕಾರ ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಇರುವುದು. ಸಿಬ್ಬಂದಿ ವರ್ಗದವರು ಸಹಕರಿಸಲಿದ್ದಾರೆ.
  • ಸಿಂಹ
  • ಆರ್ಥಿಕತೆಯಲ್ಲಿ ಅಗೌರವವಾಗುವಂಥ ಸನ್ನಿವೇಶ ಎದುರಾಗಿ ಕೊನೆಯ ಕ್ಷಣದಲ್ಲಿ ಹಣಕಾಸಿನ ಹೊಂದಿಕೆಯಾಗುವುದು. ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಬಗ್ಗೆ ಯೋಚಿಸುವವರಿಗೆ ಸುದಿನ.
  • ಕನ್ಯಾ
  • ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ, ನಿಮ್ಮ ಮೇಲಿನ ನಂಬಿಕೆಯಿಂದಾಗಿ ಮೇಲಧಿಕಾರಿಗಳು ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಳ್ಳಲಿದ್ದಾರೆ. ಒಂದು ಘಟನೆ ನಿಮ್ಮನ್ನು ಭಾವುಕರನ್ನಾಗಿ ಮಾಡಲಿದೆ.
  • ತುಲಾ
  • ನಿಮಗೆಎದುರಾಗುವ ಎಲ್ಲಾ ಸವಾಲುಗಳನ್ನು ಬುದ್ಧಿವಂತಿಕೆಯಿಂದ ಎದುರಿಸಿ, ಇನ್ನಷ್ಟು ಮನೋಬಲವನ್ನು ಹೆಚ್ಚಿಸಿಕೊಳ್ಳಿರಿ. ಮಹಾಗಣಪತಿಯನ್ನು ಪೂಜಿಸಿ ಪುಣ್ಯ ಸಂಪಾದನೆ ಮಾಡಿ. ಶುಭ ಸುದ್ದಿ ಕೇಳಿ ಸಂತೋಷವಾಗುವುದು.
  • ವೃಶ್ಚಿಕ
  • ಅಧಿಕಾರಿಯ ಸಹಾಯದಿಂದ ಮುಂಬಡ್ತಿ ಅಥವಾ ವರ್ಗಾವಣೆಯಂಥ ಅವಕಾಶವನ್ನು ಪಡೆದುಕೊಳ್ಳುವಿರಿ. ಕೃಷಿಯನ್ನು ಮಾಡುವವರು ಸಂಬಂಧ ಪಟ್ಟಂಥ ಇಲಾಖೆಯವರಿಂದ ಸಹಾಯವನ್ನು ಪಡೆದುಕೊಳ್ಳಿರಿ.
  • ಧನು
  • ಮಕ್ಕಳಿಂದ ಅಹಿತಕರ ಘಟನೆಗಳು ನಡೆದು ಪಾಲಕರಿಗೆ ಭವಿಷ್ಯದ ಬಗ್ಗೆ ಯೋಚನೆಗಳು ಬರಲಿವೆ. ನವವಿವಾಹಿತರಿಗೆ ಸಂತತಿಯ ವಿಚಾರದಲ್ಲಿ ಶುಭ ಸೂಚನೆ ಕಾಣಲಿದೆ. ಆಂತರಿಕ ಸಮಸ್ಯೆ ಸಾಮರಸ್ಯದಿಂದ ಬಗೆಹರಿಯಲಿದೆ.
  • ಮಕರ
  • ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ಸಹೋದ ರರಿಂದ ಅಥವಾ ಕುಟುಂಬ ವರ್ಗದವರಿಂದ ಸ್ಪಂದನೆ ಸಿಗುವ ಅವಕಾಶಗಳಿವೆ. ನಿರುದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದ ಕೆಲಸ ಸಿಗುವ ಸಾಧ್ಯತೆ ಇದೆ.
  • ಕುಂಭ
  • ಆಫೀಸಿನಲ್ಲಿ ವಿನಯದಿಂದ ವರ್ತಿಸಿ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ ಹಾಗೆಯೇ ಮನೆಯವರ ಮಾತುಗಳಿಗೆ ಸಮಾಧಾನದಿಂದ ಉತ್ತರಿಸಿ. ಎಂಥ ಜವಾಬ್ದಾರಿಗಳನ್ನೂ ನಿಭಾಯಿಸಲು ಸರ್ವಸಿದ್ಧರಾಗಿ.
  • ಮೀನ
  • ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಯಲ್ಲಿ ಆ ಸಮಾರಂಭದ ಜವಾಬ್ದಾರಿ ಹೊರಬೇಕಾಗುವುದು. ಭೂ ವ್ಯವಹಾರದ ಬಂಡವಾಳದಲ್ಲಿ ಮೋಸಹೋಗುವ ಸ್ಥಿತಿ ಬರಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.