ದಿನ ಭವಿಷ್ಯ: ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ನವೆಂಬರ್ 2025, 0:09 IST
Last Updated 22 ನವೆಂಬರ್ 2025, 0:09 IST
ದಿನ ಭವಿಷ್ಯ
ಮೇಷ
ಧೈರ್ಯವೇ ಕೆಲಸಕ್ಕೆ ಸಾಧನ ಆಗುವುದು. ಆತ್ಮವಿಶ್ವಾಸ ಹೆಚ್ಚಿಸುವ ಕೆಲಸಗಳಲ್ಲಿ ತೊಡಗುವಿರಿ. ಕಾರ್ಯನಿಮಿತ್ತ ದೂರದ ಸಂಚಾರ ಅಗತ್ಯ. ಹಣಕಾಸಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ.
ವೃಷಭ
ಆತ್ಮೀಯರಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತ ಸಮಯ ದೊರಕುವುದು. ಅತಿಯಾದ ಆಲಸ್ಯ, ಬೇಜವಾಬ್ದಾರಿತನ ಅಭಿವೃದ್ಧಿಯನ್ನು ಕುಂಠಿತವಾಗಿ ಮಾಡುತ್ತದೆ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಮಿಥುನ
ಸಂತಾನ ಪ್ರಾಪ್ತಿಯಾಗಲಿದ್ದು , ಸಂತೃಪ್ತ ಜೀವನ ನಡೆಸುವಂತಾ ಗುತ್ತದೆ. ಆತ್ಮ ವಿಶ್ವಾಸ ಹೆಚ್ಚಿಸಿಕೊಂಡು ಪರಿಶ್ರಮದಿಂದ ಪ್ರಗತಿಯಾಗುವುದು. ಹಾಳು ವ್ಯಸನಗಳಿಗೆ ಒಳಗಾಗುವ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಿರಿ.
ಕರ್ಕಾಟಕ
ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿಕೊಂಡು ಸಂಬಂಧಿಗಳಲ್ಲಿ ಇಲ್ಲಸಲ್ಲದ ವಿಚಾರಗಳಿಗೆ ಜಗಳನ್ನು ತೆಗೆಯದಿರಿ. ಹಳೆಯ ಸಮಸ್ಯೆಗಳೇ ಹೊಸ ರೂಪ ಪಡೆದು ನಿಮ್ಮೆದುರು ಬರಲಿವೆ. ಗಣಪತಿಯ ಆರಾಧನೆ ಶುಭ ತರುತ್ತದೆ.
ಸಿಂಹ
ನಿನ್ನೆ ಇದ್ದಂಥ ವಸ್ತುಗಳು ಕಾಣೆಯಾಗುವುದು ನಿರ್ದಿಷ್ಟವಾಗಿ ಒಬ್ಬ ವ್ಯಕ್ತಿಯ ಮೇಲೆ ಅನುಮಾನವನ್ನು ತರಿಸುತ್ತದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆ ಕಾಣುವ ಸಾಧ್ಯತೆ ಇದೆ. ಇತರರ ವಿಷಯದಲ್ಲಿ ತಲೆ ಹಾಕದಿರಿ.
ಕನ್ಯಾ
ಮಾಡುವ ಕೆಲಸಗಳನ್ನೇ ಅಧಿಕಾರಿಗಳ ಕಣ್ಣೆದುರಿಗೆ ಮಾಡಬೇಕಾದ ಸಂದರ್ಭ ಬಂದಾಗ ಗುಣಮಟ್ಟದ ಬದಲಾವಣೆಯಾಗುವುದು. ವಿಚಲಿತರಾಗಬೇಡಿ. ಅನುಭವದಿಂದಾಗಿ ಉತ್ತೀರ್ಣರಾಗುವುದರಲ್ಲಿ ಸಂಶಯಬೇಡ.
ತುಲಾ
ಗುರುವಿನ ಸಾನ್ನಿಧ್ಯ ಹಾಗೂ ನಿಶ್ಚಲವಾದ ಭಕ್ತಿಯು ಮನಶ್ಶಾಂತಿಯನ್ನು ತಂದುಕೊಡುವುದು. ಹಿಂದಿನ ದಿನಗಳಿಗೆ ಹೋಲಿಸಿದರೆ ಸಂಸಾರ ನಿರ್ವಹಣೆ ಸುಲಭವೆನಿಸುವುದು. ಮಕ್ಕಳ ಒತ್ತಾಯಕ್ಕೆ ಮಣಿದು ಪ್ರವಾಸ ಒಪ್ಪಿಕೊಳ್ಳುವಿರಿ.
ವೃಶ್ಚಿಕ
ವೃತ್ತಿ ಜೀವನದಲ್ಲಿ ದೊರೆಯಬೇಕಾದ ಬಡ್ತಿಯು ಅನಿವಾರ್ಯ ಕಾರಣಗಳಿಂದ ಮುಂದೂಡಿಕೆ ಆಗುವುದು. ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಸಂಪಾದನೆ ಮಾಡಬಹುದು. ಸಂಸಾರದ ಜವಾಬ್ದಾರಿ ಹೆಚ್ಚಲಿದೆ.
ಧನು
ವ್ಯಸನಕ್ಕೆ ತುತ್ತಾಗಿರುವವರಿಂದ ತೊಂದರೆಯನ್ನು ಅನುಭವಿಸ ಬೇಕಾದೀತು. ವಿಷಜಂತುಗಳ ಕಡಿತಕ್ಕೆ ಒಳಗಾಗುವಂತಹ ಸಾಧ್ಯತೆ ಇರುವದರಿಂದ ಅತ್ಯಂತ ಎಚ್ಚರದಲ್ಲಿರಿ. ಕೆಲಸಗಳತ್ತ ಮನಸ್ಸು ಹರಿಸುವಿರಿ.
ಮಕರ
ಹಣ ಕಾಸಿನ ಪರಿಸ್ಥಿತಿಯು ನಿಮ್ಮ ಆಲೋಚನೆಗಿಂತಲೂ ಮಿಗಿಲಾಗಿ ನಿಯಂತ್ರಣ ತಪ್ಪಿಹೋಗುವುದು. ಮಕ್ಕಳಿಗಾಗಿ ಇಷ್ಟದ ವಿಚಾರಗಳನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ. ವೈವಾಹಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಕುಂಭ
ಮನೆಯಲ್ಲಿ ವಿವಾಹಕ್ಕೆ ಸಂಬಂಧ ಮಾತುಕತೆಗಳು ಹಿರಿಯರಲ್ಲಿ ಚರ್ಚೆಗೆ ಬರಲಿವೆ. ಮತ್ತೊಬ್ಬರನ್ನು ಗೌರವಿಸುವುದರಿಂದ ಗೌರವ ಕೂಡ ಹೆಚ್ಚುವುದು. ಮನೆಯವರ ಆರೋಗ್ಯದ ಬಗೆಗೆ ಕಾಳಜಿ ವಹಿಸಿ.
ಮೀನ
ಯಶಸ್ಸಿಗೆ ಏಕಾಗ್ರತೆ ಮತ್ತು ಪ್ರಯತ್ನ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಎಲ್ಲ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ನಿಮಗೆ ಬರುವುದು. ಮನೆಯಲ್ಲಿನ ಗೋಸಂಪತ್ತಿನಲ್ಲಿ ತೊಂದರೆಗಳು ಉಂಟಾಗಬಹುದು.