ADVERTISEMENT

ದಿನ ಭವಿಷ್ಯ: ನಟ ನಟಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಜನವರಿ 2026, 0:30 IST
Last Updated 26 ಜನವರಿ 2026, 0:30 IST
   
ಮೇಷ
  • ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಅಪೇಕ್ಷಿತ ಜಯವನ್ನು ಹೊಂದುವಿರಿ. ಪ್ರಾಧ್ಯಾಪಕರಿಗೆ ಮತ್ತು ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಶುಭ ದಿನ. ಧನಲಾಭ ಉಂಟಾಗಲಿದೆ.
  • ವೃಷಭ
  • ಮನೆಯ ಹಿರಿಯರ ಮಧ್ಯಸ್ತಿಕೆಯಿಂದ ವಿವಾದಗಳು ಬಗೆ ಹರಿಯಲಿವೆ. ಇಷ್ಟ ಬಂಧುಗಳಿಂದ ವಿಶೇಷ ವಸ್ತು ಉಡುಗೊರೆಯ ರೂಪದಲ್ಲಿ ದೊರೆಯುವುದು. ಹಸಿರು ಬಣ್ಣ ಶುಭ ತರುವುದು.
  • ಮಿಥುನ
  • ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ತರಬೇತಿಗಳನ್ನು ತೆಗೆದುಕೊಳ್ಳಲು ಯೋಚನೆ ನಡೆಸುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಕಾನೂನು ಸಮಸ್ಯೆಗಳೆಲ್ಲಾ ಬಗೆಹರಿಯಲಿವೆ.
  • ಕರ್ಕಾಟಕ
  • ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯಾಪಾರ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ಬೆಲೆಬಾಳುವ ವಸ್ತುವಿನ ಖರೀದಿಯಿಂದ ಹಿರಿಯರು ಮುನಿಸಿಕೊಳ್ಳುವರು.
  • ಸಿಂಹ
  • ಇಂದಿನ ಅಪರೂಪದ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಸಂತೋಷವೆನಿಸುವುದು. ಜಾಹೀರಾತುಗಳಲ್ಲಿ ತೋರಿಸಿದ್ದನ್ನು ಪರಿಶೀಲಿಸದೇ ನಂಬಿ ಹಣವ್ಯಯ ಮಾಡಿದಲ್ಲಿ ಮೋಸ ಹೋಗಲಿದ್ದೀರಿ.
  • ಕನ್ಯಾ
  • ಯಾವುದರಲ್ಲಾದರೂ ನೀವು ಗೆಲುವನ್ನು ಬಯಸುತ್ತಿದ್ದರೆ ಆಲಸ್ಯತನ ಬಿಟ್ಟು ಗುರಿ ತಲುಪಲು ಶ್ರಮಿಸಬೇಕು. ವ್ಯವಹಾರದಲ್ಲಿ ಪರಿಶ್ರಮದಿಂದಾಗಿ ಕಲ್ಪನೆಗೂ ಮೀರಿದ ಲಾಭವನ್ನು ಗಳಿಸುವಿರಿ.
  • ತುಲಾ
  • ಹೊಸ ಪ್ರಯತ್ನಗಳಲ್ಲಿ ಯಾರ ಸಹಕಾರವೂ ಸಿಗದೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಂಗೀತಾಭ್ಯಾಸಿಗರಿಗೆ ದೊಡ್ಡ ವೇದಿಕೆಯಲ್ಲಿ ಗಾಯನ ಪ್ರದರ್ಶಿಸುವ ಅವಕಾಶ ದೊರೆಯುತ್ತದೆ.
  • ವೃಶ್ಚಿಕ
  • ಆದಾಯ ಎಲ್ಲರ ಕಣ್ಣಿಗೂ ಅಧಿಕವಾಗಿ ಕಂಡರೂ ಅಧಿಕವಾದ ಖರ್ಚೂ ಇರುವುದರಿಂದ ಉಳಿತಾಯ ಸಾಧ್ಯವಾಗುವುದಿಲ್ಲ. ಮಗನಿಗೆ ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಕುಟುಂಬ ಸಂತಸದಲ್ಲಿರುವುದು.
  • ಧನು
  • ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣ ಇರಲಿದೆ. ಆತಂಕಕ್ಕೆ ಒಳಗಾಗಬೇಡಿ. ವೈದ್ಯರ ಸಹಾಯವಿಲ್ಲದೆಯೂ ಗುಣಮುಖರಾಗುವಿರಿ. ನಟ ನಟಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ.
  • ಮಕರ
  • ಉದಯೋನ್ಮುಖ ಸಾಹಿತಿಗಳಿಗೆ ಚಿಂತನಾಶೀಲತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೆಂಬ ಸಲಹೆಗಳು ಅಭಿಮಾನಿಗಳ ಕಡೆಯಿಂದ ಬರಬಹುದು. ಪುಸ್ತಕ ಮುದ್ರಕ ಹಾಗೂ ಮಾರಾಟಗಾರರಿಗೆ ಅಧಿಕ ಕೆಲಸ ಇರುತ್ತದೆ.
  • ಕುಂಭ
  • ದೊಡ್ಡ ಕಂಪನಿಗಳಲ್ಲಿ ಕೆಲಸ ಹೊಂದಬೇಕೆಂಬ ಆಸೆ ಹೊಂದಿರುವವರು ಸಣ್ಣ ಕಂಪನಿಗಳಲ್ಲಿ ಉದ್ಯೋಗ ಅನುಭವವನ್ನು ಹೊಂದಿದ ನಂತರ ಅಂಥ ಪ್ರಯತ್ನ ಮಾಡಿ.
  • ಮೀನ
  • ಇತರರಿಗೆ ಸಹಾಯ ಮಾಡಲೆಂದು ಹೋದ ನಿಮಗೆ ಸಂಕೋಚದ ಸ್ವಭಾವದಿಂದ ಆರ್ಥಿಕವಾಗಿ ನಷ್ಟವಾಗಬಹುದು. ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.