ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕ ಅನುಕೂಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಆಗಸ್ಟ್ 2025, 19:30 IST
Last Updated 5 ಆಗಸ್ಟ್ 2025, 19:30 IST
   
ಮೇಷ
  • ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಕೆಲವೊಂದು ಸಮಸ್ಯೆಗಳಿಗೆ ಪೊಲೀಸರಿಂದ ಪರಿಹಾರ ತೆಗೆದುಕೊಳ್ಳುವುದು ಉತ್ತಮ.
  • ವೃಷಭ
  • ಮನೆಯಲ್ಲಿ ಶಾಂತ ವಾತಾವರಣವಿರುವುದು. ನಿಧಾನಗತಿಯ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಕಾರ್ಮಿಕರಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಿರಿ. ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರ ಜೋರು.
  • ಮಿಥುನ
  • ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ಖರ್ಚು–ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರಲಿದ್ದಾರೆ.
  • ಕರ್ಕಾಟಕ
  • ದೇವತಾ ಕಾರ್ಯಗಳಿಗೆ ಪ್ರಯಾಣ ಮಾಡಬೇಕಾಗಲಿದೆ. ಕುಟುಂಬ ವರ್ಗದವರಲ್ಲಿ ಆರೋಗ್ಯ ಉತ್ತಮವಾಗಿ ಇರುವುದು. ಸಿವಿಲ್ ಎಂಜಿನಿಯರ್‌ ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ.
  • ಸಿಂಹ
  • ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ–ಮಾನಗಳು ಲಭಿಸಲಿವೆ. ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ಸುಲಭವಾಗಿ ಸ್ಥಾನ ಗಳಿಸುವಿರಿ. ಸಮೀಪವರ್ತಿಗಳ ದುರ್ಬುದ್ಧಿಯಿಂದ ವಂಚನಾಕಾರ್ಯ ನಡೆದಾವು.
  • ಕನ್ಯಾ
  • ಸಾಮರ್ಥ್ಯ, ದಕ್ಷತೆ, ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿ ಜವಾಬ್ದಾರಿಯುತ ಹುದ್ದೆ ನಿಮ್ಮದಾಗಲಿದೆ. ಸತ್ಕಾರ ಸಮಾರಂಭಗಳಲ್ಲಿ ಭಾಗ ವಹಿಸುವಿರಿ. ವಾಹನ ಖರೀದಿಗೆ ಸಕಾಲ. ಬಂಧು ಮಿತ್ರರು ಮನೆಗೆ ಬರಲಿದ್ದಾರೆ.
  • ತುಲಾ
  • ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕವಾಗಿ ಅನುಕೂಲ ಉಂಟಾಗುವುದು. ತಂದೆ –ತಾಯಿ ಕೋರಿಕೆಯಂತೆ ಮನೆಯಲ್ಲಿ ದೇವತಾ ಕಾರ್ಯ ನಡೆಸುವಿರಿ. ಉದ್ಯೋಗದಲ್ಲಿ ಸಮತೋಲನ ತಪ್ಪಲಿದೆ.
  • ವೃಶ್ಚಿಕ
  • ಆಧ್ಯಾತ್ಮಿಕ ವಿಚಾರಗಳ ಪುಸ್ತಕಗಳನ್ನು ಕೊಳ್ಳಲು ಧನ ವಿನಿಯೋಗವಾಗುವುದು. ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ ಬರುವುದು. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ.
  • ಧನು
  • ಮನೆಯ ಪರಿಸ್ಥಿತಿಗಳ ಸುಧಾರಣೆಯಿಂದ ಗಮನ ಕೊಡಲು ಉತ್ತಮವಾಗುವುದು. ಕೇವಲ ದೇವತಾ ಕೃಪೆಯಿಂದ ಕೆಲಸಗಳನ್ನೂ ಲಾಭಮಯವಾಗಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.
  • ಮಕರ
  • ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಿರಿ. ಕಂಪ್ಯೂಟರ್ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ನಿವೇಶನ ಮಾರುವ ಪರಿಸ್ಥಿತಿ ಎದುರಾದರೂ ಉತ್ತಮ ಲಾಭ .
  • ಕುಂಭ
  • ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳ ಬಗ್ಗೆ ನಿಗಾ ಇರಲಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ಆಘಾತವಾಗಲಿದೆ. ವೆಚ್ಚ ಸರಿ ಸಮವಾಗಿರುವುದು. ಪ್ರಯಾಣ ಮಾಡಬೇಕಾದ ಸಂದರ್ಭಗಳು ಬರಲಿವೆ.
  • ಮೀನ
  • ಸರ್ಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಹೊಸದನ್ನು ಕಲಿಯುವ ಆಸೆಗಳು ಹೆಚ್ಚಲಿವೆ. ಬೇಡಿಕೆಯ ಅರ್ಜಿಗಳಿಗೆ ಪ್ರೋತ್ಸಾಹ ಸಿಗಲಿದೆ. ಅಧ್ಯಯನಕ್ಕೆ ಸಕಾಲವಾಗಿರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.