ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಮಹತ್ವದ ಮಾತುಕತೆ ನಡೆಸಲು ಒಳ್ಳೆಯ ಸಮಯ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಆಗಸ್ಟ್ 2025, 19:24 IST
Last Updated 6 ಆಗಸ್ಟ್ 2025, 19:24 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮಹತ್ವದ ಮಾತುಕತೆ ನಡೆಸಲು ಒಳ್ಳೆಯ ಸಮಯ. ಸಂಯಮದಿಂದ ವರ್ತಿಸಿ. ಹಂತ–ಹಂತವಾಗಿ ಕುಟುಂಬದಲ್ಲಿ ನೆಮ್ಮದಿ ಕಾಣುವಿರಿ. ರಾಮಾಯಣ, ಮಹಾಭಾರತದಂತಹ ಧರ್ಮ ಗ್ರಂಥಗಳ ಓದಿನಲ್ಲಿ ಆಸಕ್ತಿ ಹುಟ್ಟಲಿದೆ.
  • ವೃಷಭ
  • ಕಷ್ಟದ ಕಾಲವೆಲ್ಲವೂ ದೂರಾಗುವ ಸಾಧ್ಯತೆ ಇರಲಿದೆ. ಒಣ ದ್ರಾಕ್ಷಿ, ಗೋಡಂಬಿ, ಉತ್ತುತೆ ಮತ್ತು ಎಲಕ್ಕಿ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಸುವ್ಯವಸ್ಥೆಯಿಂದ ಕೂಡಿದ ದಿನವಾಗಿರುವುದು.
  • ಮಿಥುನ
  • ಸಂವಹನ ಕಲೆ ಪರೀಕ್ಷೆಗೆ ಒಳಗಾಗಲಿದೆ. ನಿತ್ಯದ ಜೀವನ ಕ್ರಮವನ್ನು ಯಾವುದೇ ಕಾರಣಕ್ಕೂ ಬದಲಿಸದೆ ಹಿಂದಿನಂತೆ ಮುಂದುವರಿಸಿ. ಈಗಿರುವ ಉದ್ಯೋಗದಲ್ಲಿ ಸ್ಥಿರತೆ ಮತ್ತು ಧನಾನುಕೂಲತೆ ಇರುತ್ತದೆ.
  • ಕರ್ಕಾಟಕ
  • ಸರ್ಕಾರಿ ಕೆಲಸಗಳು ಮುಕ್ತಾಯದ ಹಂತಕ್ಕೆ ಬರುವುದು. ಷೇರು ವ್ಯವಹಾರಗಳು ಲಾಭ ತರಲಿವೆ. ಮಾಡುವ ಕೆಲಸ ಕ್ರಿಯಾಶೀಲತೆಗೆ ಒತ್ತು ನೀಡುವುದರಿಂದ ಹೊಸ ಹುರುಪು ಮೂಡಲಿದೆ.
  • ಸಿಂಹ
  • ಕಬ್ಬು ಬೆಳೆಯುವುದರ ಜೊತೆಗೆ ವ್ಯಾಪಾರ ಹೊಂದಿರುವಂಥವರಿಗೆ ಲಾಭದ ದಿನ. ಯಾರಿಗೂ ತಿಳಿಯದೆ ಮಾಡಿದೆ ಎಂದು ತಿಳಿದ ಕಾರ್ಯವು ಜಗಜ್ಜಾಹೀರಾಗುವ ಪ್ರಸಂಗಗಳು ಎದುರಾಗಬಹುದು.
  • ಕನ್ಯಾ
  • ಮೊಂಡು ಹಠವು ಪೋಷಕರ ಹಾಗೂ ಕುಟುಂಬ ವರ್ಗದ ಚಿಂತೆಗೆ ಕಾರಣವಾಗಬಹುದು. ಅವರೋಹಣ ಪ್ರಕ್ರಿಯೆಯಲ್ಲಿರುವ ಷೇರು ವ್ಯವಹಾರಗಳು ನಿಧಾನಗತಿಯಲ್ಲಿ ಆರೋಹಣ ಪ್ರಕ್ರಿಯೆಗೆ ಬರುತ್ತವೆ.
  • ತುಲಾ
  • ಸೋಮಾರಿತನ ಮಾಡದೇ ಸೂಕ್ತ ಸಮಯದಲ್ಲಿ ಸರಿಯಾದ ಕೆಲಸ ಮಾಡುವುದರಿಂದ ಅದೃಷ್ಟ ಖುಲಾಯಿಸಲಿದೆ. ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಯಶಸ್ಸು ಸಿಗುತ್ತದೆ.
  • ವೃಶ್ಚಿಕ
  • ಉನ್ನತ ಸ್ಥಾನಕ್ಕೆ ತಲುಪಿರುವ ನಿಮ್ಮ ಮಕ್ಕಳು ಆಗುಹೋಗುಗಳಿಗೆ ಎಳ್ಳಿನಿತೂ ಗಮನ ಕೊಡದಿರುವುದು ಬೇಸರಕ್ಕೆ ಕಾರಣವಾಗಬಹುದು. ಮನೆಯನ್ನು ಯುದ್ಧರಂಗವಾಗದಂತೆ ತಡೆಗಟ್ಟ ಬೇಕಾಗುತ್ತದೆ.
  • ಧನು
  • ಮಕ್ಕಳ ಎಲ್ಲಾ ವಿಚಾರಗಳಲ್ಲೂ ಮೃದು ಮನಸ್ಸಿನ ಆಲೋಚನೆಗಳನ್ನೇ ಮಾಡಿದಲ್ಲಿ ಫಲಿತಾಂಶ ನೀವಂದುಕೊಂಡ ರೀತಿಯಲ್ಲಿ ಇರುವುದಿಲ್ಲ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.
  • ಮಕರ
  • ಬರಹಗಾರರಾಗಬೇಕು ಎಂಬ ಪಥದಲ್ಲಿ ಸಾಗುತ್ತಿರುವವರಿಗೆ ಪ್ರಸಿದ್ಧ ಬರಹಗಾರರ ಬರಹಗಳನ್ನು ಓದಿ ಬರವಣಿಗೆಗೆ ರೂಪುರೇಷೆ ದೊರೆಯುತ್ತದೆ. ಹೂಡಿಕೆ ಮಾಡುವವರು ಜಾಗರೂಕತೆಯಿಂದ ವರ್ತಿಸಿ.
  • ಕುಂಭ
  • ಯಾವುದೇ ಆಹಾರವಾಗಲಿ ಹಿತವಾಗಿ, ಮಿತವಾಗಿ ಸೇವಿಸುವುದು ಉತ್ತಮ. ಸಂಪೂರ್ಣ ಸಾವಯವ ವ್ಯವಸಾಯವನ್ನು ಮಾಡಿ ತಾಜಾ ತರಕಾರಿ ಹಾಗೂ ಹಣ್ಣುಗಳ ಮಾರಾಟಗಾರರಿಗೆ ಲಾಭ ಅಧಿಕವಾಗಲಿದೆ.
  • ಮೀನ
  • ಹಣಕಾಸಿನ ವ್ಯವಹಾರ ನಡೆಸುವವರು ನೂತನ ಯೋಜನೆಗಳನ್ನು ವಿಸ್ತರಿಸಬಹುದು. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು. ಸಂಪರ್ಕ ಸಾಧನದಂಥ ಉದ್ಯೋಗ ನಿರತರಿಗೆ ಗೌರವ ಲಭಿಸಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.