ADVERTISEMENT

ದಿನ ಭವಿಷ್ಯ: ಬಹುಜನರ ಒಡನಾಟದಿಂದ ಪ್ರೀತಿ ಪಡೆಯುವಂತಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಸೆಪ್ಟೆಂಬರ್ 2025, 23:33 IST
Last Updated 11 ಸೆಪ್ಟೆಂಬರ್ 2025, 23:33 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಇಂಧನ ಮಾರಾಟಗಾರರಿಗೆ ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಮನೋಭಾವ ಹೊಸ ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸುವುದು. ಇನ್ನೊಬ್ಬರ ಜೀವನದಲ್ಲಿ ಪಾತ್ರ ಮಹತ್ವದ್ದು.
  • ವೃಷಭ
  • ದೈವಬಲ ಉಂಟಾಗಿದ್ದು ಆರ್ಥಿಕ ಪರಿಸ್ಥಿತಿಯು ಸುಧಾರಣೆಯತ್ತ ಸಾಗಿರುವುದನ್ನು ಕಾಣುವಿರಿ. ಉತ್ತಮ ಅವಕಾಶಗಳು ಬರಲಿವೆ.ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ.
  • ಮಿಥುನ
  • ಎಲ್ಲಾ ಕೆಲಸಗಳು ಸಿಬ್ಬಂದಿ ವರ್ಗದವರ ಸಹಕಾರದಿಂದ ವ್ಯವಸ್ಥಿತವಾಗಿ ಕೈಗೂಡಲಿವೆ. ಸ್ಥಿರಾಸ್ತಿ ಸಂಬಂಧಿಸಿದ ವ್ಯವಹಾರಗಳಿಂದ ಲಾಭವಿರುವುದು. ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮರೆಯದಿರಿ.
  • ಕರ್ಕಾಟಕ
  • ಕಾರ್ಮಿಕ ವರ್ಗದವರ ಬೇಡಿಕೆಗಳು ಈಡೇರಲಿವೆ. ವಿದೇಶದಿಂದ ಹೆಚ್ಚಿನ ಶಿಕ್ಷಣಕ್ಕೆಂದು ತೆರಳಿದ ಮಗನ ಆಗಮನವಾಗುವುದು. ಸಾಹಿತಿ ಹಾಗೂ ಕಲಾವಿದರಿಗೆ ಉತ್ತಮವಾದ ದಿನ. ಈಶ್ವರನ ಆರಾಧನೆಯಿಂದ ನೆಮ್ಮದಿ.
  • ಸಿಂಹ
  • ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಯಶಸ್ಸು ಕಾಣುವರು. ಸಂಬಂಧಿಕರೊಬ್ಬರ ಆಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕೆಲಸ ಭಿನ್ನಾಭಿಪ್ರಾಯವನ್ನು ಮೂಡಿಸಲಿದೆ. ಕೆಲಸಗಳು ನಿರೀಕ್ಷಿತ ಹಾದಿಯಲ್ಲಿ ಸಾಗುವುದು.
  • ಕನ್ಯಾ
  • ನೈತಿಕ ಧೈರ್ಯ ಹೆಚ್ಚುವುದು. ಸ್ವಲ್ಪ ಮಟ್ಟಿಗೆ ಧನ ವ್ಯಯವಿದ್ದರೂ ವಿವಿಧ ಹೊಸ ಮೂಲಗಳಿಂದ ಧನಾಗಮವಾಗುವುದು. ಕುಟುಂಬದಲ್ಲಿ ನೆಮ್ಮದಿ ಇರುವುದು. ರಾಜಕಾರಣದ ವಿಷಯಗಳು ಅನುಕೂಲಕರವಾಗಿರುವುದು.
  • ತುಲಾ
  • ದೇವರ ಮತ್ತು ಹಿರಿಯರ ಅನುಗ್ರಹದಿಂದ ಕುಟುಂಬದಲ್ಲಿನ ಅನೇಕ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ಕಾಗದದ ರಫ್ತು ಉದ್ಯಮದವರಿಗೆ ಉತ್ತಮ ಆದಾಯವಿರುವುದು. ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ ಪ್ರಾಪ್ತಿ.
  • ವೃಶ್ಚಿಕ
  • ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣವನ್ನು ಕಾಣುವಿರಿ. ಆಭರಣ ಮಾರಾಟಗಾರರಿಗೆ ಒದಗುವ ಅವಕಾಶಗಳ ಹೆಚ್ಚಳದಿಂದ ಕೆಲಸವಿರುವುದು.
  • ಧನು
  • ಕಂಪ್ಯೂಟರ್ ಎಂಜಿನಿಯರ್‌ಗಳಿಗೆ ವಿದೇಶಿ ಕಂಪನಿಗಳ ಅಹ್ವಾನ ಅಥವಾ ಉತ್ತಮ ಲಾಭದಾಯಕ ಅವಕಾಶಗಳು ಲಭ್ಯ. ಮನೆ ಅಥವಾ ಕಟ್ಟಡ ನಿರ್ಮಾಣ ಕಾರ್ಯವು ಯಾವುದೇ ತೊಂದರೆಗಳಿಲ್ಲದೆ ಮುಂದುವರಿಯಲಿದೆ.
  • ಮಕರ
  • ಉತ್ತಮ ಒಡನಾಟ ಹೊಂದಿರುವ ವ್ಯಕ್ತಿಗಳೊಂದಿಗೆ ವ್ಯಾವಹಾರಿಕ ಆಲೋಚನೆಯನ್ನು ಹಂಚಿಕೊಳ್ಳುವುದರಿಂದ ವಿವಿಧ ರೀತಿಯಲ್ಲಿ ನಷ್ಟ ಆಗುವುದು. ವ್ಯವಹಾರದ ಗೌಪ್ಯತೆ ಕಾಪಾಡಿಕೊಳ್ಳಿ.
  • ಕುಂಭ
  • ಸಂಘ ಸಂಸ್ಥೆಗಳ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದು ಉತ್ತಮ. ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ಪಡೆಯಲು ಪರಿಶ್ರಮ ಜತೆ ಬುದ್ಧಿವಂತಿಕೆಯೂ ಬಹುಮುಖ್ಯ.
  • ಮೀನ
  • ಐಷಾರಾಮಿ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸುವುದು ಅನಿವಾರ್ಯ. ಸಮಾಜದಲ್ಲಿನ ಮುಂದಾಳತ್ವಕ್ಕೆ ಜನ ಮೆಚ್ಚಿ, ಸಲಹೆಗಳನ್ನು ಕೇಳುವರು. ಬಹುಜನರ ಒಡನಾಟದಿಂದ ಪ್ರೀತಿ ಪಡೆಯುವಂತಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.