ದಿನ ಭವಿಷ್ಯ: ಈ ರಾಶಿಯವರು ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ
ಶನಿವಾರ, 20 ಸೆಪ್ಟೆಂಬರ್ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಸೆಪ್ಟೆಂಬರ್ 2025, 22:30 IST
Last Updated 19 ಸೆಪ್ಟೆಂಬರ್ 2025, 22:30 IST
ದಿನ ಭವಿಷ್ಯ
ಮೇಷ
ರಾಜಕೀಯ ವ್ಯಕ್ತಿಗಳು ಪಕ್ಷದ ಸದಸ್ಯರಿಂದ ತೀವ್ರತರ ಮಾತು ಕೇಳಬೇಕಾಗುವುದು ಅನಿವಾರ್ಯ. ವ್ಯಾಪಾರದಲ್ಲಿ ತೃಪ್ತಿಕರ ವಾತಾವರಣ. ವೈಮಾನಿಕ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಮತ್ತು ಪುರಸ್ಕಾರಗಳು ಪ್ರಾಪ್ತಿ.
ವೃಷಭ
ನೂತನವಾಗಿ ನಿರ್ಮಿಸುತ್ತಿರುವ ಮನೆಗೆ ಅಲಂಕಾರ ಮಾಡಿಸುವ ಬದಲಾಗಿ ಅನಿವಾರ್ಯವಾಗಿ ಬೇಕಾದ ವಿಚಾರವನ್ನು ಅಳವಡಿಸುವ ಬಗ್ಗೆ ಗಮನವಹಿಸಿ. ಇಂದಿನ ನಿಮ್ಮ ಫಲಿತಾಂಶ ನಿಮ್ಮ ಮನಸ್ಸಿಗೆ ಸರಿಯಾಗಿರುತ್ತದೆ.
ಮಿಥುನ
ಅಡಿಗೆ ತಯಾರಕರಿಗೆ ಶುಭದಿನ. ನಿಮ್ಮ ರುಚಿಯಾದ ಅಡುಗೆಗೆ ಹೊಸ ಅಭಿಮಾನಿಗಳ ಸಂಪಾದನೆ ಆಗುತ್ತದೆ. ಲಂಚದ ಬಲೆಗೆ ಬೀಳದಿರಿ. ಮಾಸಿಕ ವೇತನ ಪಡೆಯುವ ಹೊಸದಾರಿ ಕಣ್ಣಿಗೆ ಬೀಳುವುದು.
ಕರ್ಕಾಟಕ
ಅಚ್ಚರಿಯ ಸಂಗತಿಯನ್ನು ಎದುರಿಸುವ ಸಾಮರ್ಥ್ಯ ಕೊಡಲು ದೇವರಲ್ಲಿ ಪ್ರಾರ್ಥಿಸಿ. ಸಣ್ಣ ಮಕ್ಕಳ ಶಿಕ್ಷಕರು ಮಕ್ಕಳ ಸಂತೋಷದಿಂದ ಖುಷಿ ಹೊಂದುವಿರಿ. ಬಿಸಿ ವಸ್ತು ಹಾಗು ವಿದ್ಯುತ್ ಸಂಬಂಧಿ ವಿಷಯಗಳಲ್ಲಿ ಎಚ್ಚರ.
ಸಿಂಹ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಲು ಆಹ್ವಾನ ಸಿಗುವುದು. ಕುಟುಂಬ ಮತ್ತು ಮಕ್ಕಳ ಬಗ್ಗೆ ಗಮನ ಹರಿಸುವುದು ಅಗತ್ಯ. ಸಕಾಲದಲ್ಲಿ ಆರಂಭಿಸಿದ್ದ ವ್ಯವಹಾರಗಳು, ಕೆಲಸ ಕಾರ್ಯ ಸಫಲತೆ ತರಲಿವೆ.
ಕನ್ಯಾ
ಮುಖ್ಯವಾಗಿ ಮಾತುಗಾರರು ಅವಕಾಶಗಳನ್ನು ಸದುಪಯೋಗಪಡಿಸಿ ಕೊಂಡಲ್ಲಿ ಉತ್ತಮ ಅಭಿವೃದ್ಧಿ ಹೊಂದುವಿರಿ. ಇಷ್ಟದೇವರ ದರ್ಶನದಿಂದ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ, ಮನಸ್ಸಿಗೆ ಶಾಂತಿ ದೊರೆಯಲಿದೆ.
ತುಲಾ
ಪಂಡಿತರ ಸಮಾಗಮದಿಂದ ಜ್ಞಾನವೃದ್ಧಿಯಾಗುವುದು. ನೂತನ ಕಾರ್ಯದಲ್ಲಿ ನಿರಾಸಕ್ತಿ ಇದ್ದರೂ, ದೈನಂದಿನ ಕೆಲಸಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಪರೀಕ್ಷಿಸಬಹುದು.
ವೃಶ್ಚಿಕ
ಕ್ಯಾಟರಿಂಗ್ ಉದ್ಯಮದಾರಿಗೆ ಹೊಸ ಹೊಸ ಪರಿಚಯ, ಹೊಸ ಹೊಸ ಅವಕಾಶ ಅಭಿವೃದ್ಧಿಗೆ ಕಾರಣವಾಗುತ್ತದೆ. ಬಟ್ಟೆ ವ್ಯಾಪಾರಿಗಳು ಬಂಡವಾಳ ಹೂಡಿಕೆಯಲ್ಲಿ ಎಡಗುವಂತಾಗಲಿದೆ. ರೈತರಿಗೆ ಸಾಲ ತೀರಿಸುವ ಕಾಲ.
ಧನು
ಬಹಳ ದಿನಗಳಿಂದ ಯೋಚಿಸಿದ್ದ ವಾಹನ ಖರೀದಿ ವಿಚಾರಕ್ಕೆ ತೀರ್ಮಾನ ಸಿಗುತ್ತದೆ. ಡೈರಿ ಪದಾರ್ಥ ವ್ಯಾಪಾರಸ್ಥರಿಗೆ ಆಗುವ ಹೆಚ್ಚಿನ ಉತ್ಪಾದನೆಯಿಂದ ಲಾಭ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ.
ಮಕರ
ಕಾರ್ಯರಂಗದಲ್ಲಿ ಹೆಚ್ಚಿನ ಸ್ಪರ್ಧೆ, ಪೈಪೋಟಿಗಳಿರುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳಿರಿ. ಕೇವಲ ಹಟಮಾರಿತನದಿಂದ ಹಿಡಿದ ಕೆಲಸ ಬಿಡುವುದಿಲ್ಲ ಎಂದು ತೀರ್ಮಾನಿಸಿದರೆ ಸಮಯ, ಹಣ ವ್ಯರ್ಥ.
ಕುಂಭ
ರೈತರಿಗೆ ಬೆಳೆದ ತರಕಾರಿ ಬೆಳೆಗೆ ಒಳ್ಳೆಯ ಮಾರುಕಟ್ಟೆ ಸಿಕ್ಕಿ ಸಂತೋಷ ಉಂಟಾಗುತ್ತದೆ. ನಿರೋದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದಂಥ ಕೆಲಸ ಸಿಗುವ ಸಾಧ್ಯತೆ ಇದೆ. ನಿಮ್ಮ ಕರ್ತವ್ಯಕ್ಕೆ ಇನ್ನೂ ಹೆಚ್ಚಿನ ಜವಾಬ್ದಾರಿ ಬೇಕಾಗುವುದು.
ಮೀನ
ರಾಜಕಾರಣಿಗಳಿಗೆ ನಾಯಕತ್ವದಲ್ಲಿ ಬದಲಾವಣೆಯಾಗುವ ಸಂಭವ. ಸಗಟು ವ್ಯಾಪಾರಿಗಳಿಗೆ ಖರ್ಚು-ವೆಚ್ಚ ಆದಾಯದ ಮಿತಿಯೊಳಗಿರುವುದು. ರಾಸಾಯನಿಕ ಕ್ಷೇತ್ರಗಳಿಗೆ ಸಂಬಂಧಿಸಿದವರಿಗೆ ಹರ್ಷದಾಯಕವಾಗಿರುತ್ತದೆ.