ADVERTISEMENT

ದಿನ ಭವಿಷ್ಯ: ಈ ರಾಶಿಯ ಯೋಗ್ಯರಿಗೆ ಮದುವೆಯ ಸುಯೋಗವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಜುಲೈ 2025, 23:56 IST
Last Updated 31 ಜುಲೈ 2025, 23:56 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಾಹಸ ಮಾಡಿ ಪಡೆದುಕೊಂಡ ದ್ರವ್ಯವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸಕಾರಾತ್ಮಕ ನಡವಳಿಕೆಯಿಂದ ಲಾಭ ಹೊಂದುವಿರಿ. ಅಗತ್ಯ ವಸ್ತುಗಳಿಗೆ ಹಣ ವಿನಿಯೋಗ ಮಾಡಿದರೂ ಲೆಕ್ಕವಿರಲಿ.
  • ವೃಷಭ
  • ಮನೆಯ ಗೃಹಿಣಿಯರ ಚತುರತೆಯಿಂದ ಪುರುಷರಿಗೆ ಅನಾಯಾಸವಾಗಿ ಅನುಕೂಲವಾಗುತ್ತದೆ. ಎಷ್ಟೇ ಗಳಿಸಿದ್ದರೂ ಇನ್ನೂ ಗಳಿಸಬೇಕೆಂಬ ಅತಿಯಾದ ಆಸೆಯಿಂದ ವೇದನೆಯಾಗುವಂತೆ ಮಾಡದಿರಿ.
  • ಮಿಥುನ
  • ಗೋಮಾಳ, ಅರಣ್ಯ ಭೂಮಿ ಅಥವಾ ಇತರೆ ಸರ್ಕಾರಿ ಜಾಗಗಳ ಸಂಬಂಧಿ ಭೂವ್ಯಾಜ್ಯಗಳು ಹೆಗಲೇರುವ ಸಾಧ್ಯತೆ ಇದೆ. ತೀಕ್ಷ್ಣವಾದ ವೇದನೆ,  ಕಾಯಿಲೆಗಳಿಂದ ಬಳಲುವವರಿಗೆ ಆಶಾಕಿರಣ ಗೋಚರಿಸುತ್ತದೆ.
  • ಕರ್ಕಾಟಕ
  • ಸಂಪಾದನೆಯಲ್ಲಿ  ಮಾಡುತ್ತಿರುವ ಧಾರ್ಮಿಕ ಕೆಲಸಗಳು, ದಾನಾದಿ ಕಾರ್ಯಗಳು  ಕುಟುಂಬಕ್ಕೆ ಶ್ರೇಯಸ್ಸನ್ನುಂಟು ಮಾಡುತ್ತವೆ. ಕುಟುಂಬದ ಜನರೊಂದಿಗೆ ಮನರಂಜನೆಗಾಗಿ ಸಮಯ ಮೀಸಲಿಡಿ.
  • ಸಿಂಹ
  • ಕೆಲಸ ಕಾರ್ಯಗಳಲ್ಲಿ ಇದ್ದ ಅಡಚಣೆಗಳು, ಅನವಶ್ಶಕ ವಾದ-ವಿವಾದಗಳು ಹಾಗೂ ಭಿನ್ನಾಭಿಪ್ರಾಯಗಳು  ದೂರಾಗಲಿವೆ. ಉನ್ನತ ಸರ್ಕಾರಿ ನೌಕರರಿಗೆ ಬಡ್ತಿಯ ಯೋಗ. ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷ.
  • ಕನ್ಯಾ
  • ಶಿಕ್ಷಕ ವೃಂದದವರಿಗೆ ಕೆಲಸದ ಒತ್ತಡ ಕಡಿಮೆ ಇರುವುದು. ಆಲಂಕಾರಿಕ ವಸ್ತುಗಳ ಮೇಲಿನ ಹಣ ವಿನಿಯೋಗ ಸರಿಯಲ್ಲ. ಕುಟುಂಬದಲ್ಲಿ ಆರ್ಥಿಕ ತೊಂದರೆಯಿಂದ ನಿಂತಿದ್ದ ಅನೇಕ ಕಾರ್ಯಗಳು ಮುಂದುವರಿಯಲಿವೆ. 
  • ತುಲಾ
  • ಬೇಕಾದ ವಸ್ತು ನಿಮ್ಮಲ್ಲಿಯೇ ಇದ್ದರೂ, ಅಜ್ಞಾನದ ಕಾರಣ  ಬೇರೆಲ್ಲಾ ಕಡೆ ಹುಡುಕುವಂತಾಗುತ್ತದೆ. ಕಟ್ಟಡ ನಿರ್ಮಾಣ ಮಾಡಿಸುತ್ತಿರುವವರಿಗೆ ಲಾಭ ನಷ್ಟಗಳ ಬಗ್ಗೆ ಪುನರಾವಲೋಕನ ಅಗತ್ಯ.
  • ವೃಶ್ಚಿಕ
  • ವಿಳಂಬವಾಗಿದ್ದ ಕೆಲಸ ಕಾರ್ಯಗಳು ಚುರುಕುಗೊಂಡು  ಅನುಕೂಲ ಒದಗಿ ಬರಲಿವೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇಕಾದ ಆರ್ಥಿಕ ವ್ಯವಸ್ಥೆಯು ಸಕಾಲದಲ್ಲಿ ಆಗಲಿದೆ. ತಂತಜ್ಞಾನದ ತರಬೇತಿ ಅನಿವಾರ್ಯ.
  • ಧನು
  • ಸಹನೆಯಿಂದ ಸಮಸ್ಯೆಗಳ ಪರಾಮರ್ಶೆ ಮಾಡಿದರೆ ಯಾವುದೂ ಕಷ್ಟಕರವಲ್ಲವೆಂಬ ಅರಿವಾಗುವುದು. ಪ್ರಾಮಾಣಿಕತೆಯಿಂದ  ಮೇಲಧಿಕಾರಿಗಳ ನಂಬಿಕೆ ಪಡೆಯುವಿರಿ. ಯೋಗ್ಯರಿಗೆ ಮದುವೆಯ ಸುಯೋಗವಿದೆ.
  • ಮಕರ
  • ಇಂದು ಷರತ್ತುಗಳನ್ನು ಹೊಂದಿರುವ ಯಾವುದೇ ವ್ಯವಹಾರವನ್ನು ಒಪ್ಪಿಕೊಳ್ಳಬೇಡಿ. ವಿವಾಹದ ಬಗ್ಗೆ ಮನೆಯಲ್ಲಿ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ದಿನ. ಲೇವಾದೇವಿ ವ್ಯವಹಾರದಲ್ಲಿ ಅನುಕೂಲ ಇರಲಿದೆ.
  • ಕುಂಭ
  • ಒತ್ತಡಗಳ ನಡುವೆಯೂ ಸಂತೋಷದಿಂದ ಇರಿ. ಸಕ್ರಿಯ ಹಾಗೂ ಕಾರ್ಯ ಮಗ್ನತೆಯ ದಿನವು ಇದಾಗಿದೆ. ಸಂಜೆ ಸ್ನೇಹಿತರ ಜೊತೆ ಕಾಲ ಕಳೆಯುವಿರಿ. ಹೊಸದೊಂದು ವಿಚಾರ ಸಿಗಲಿದೆ.
  • ಮೀನ
  • ಗುರಿಯನ್ನು ತಲುಪುವಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮ. ಶ್ರಮವು ಸಾರ್ಥಕವೆನಿಸುವುದು. ಷೇರು ವ್ಯವಹಾರಗಳಲ್ಲಿ ಲಾಭವಿದೆ. ಕೆಲಸ ಬದಲಿಸುವ ಯೋಚನೆಗೆ ದಾರಿ ದೊರಕುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.