ADVERTISEMENT

ದಿನ ಭವಿಷ್ಯ: ಮನಸ್ಸಿದ್ದರೆ ಮಾರ್ಗ ಎಂಬ ಮಾತು ಅನ್ವಯಿಸುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಸೆಪ್ಟೆಂಬರ್ 2025, 18:30 IST
Last Updated 21 ಸೆಪ್ಟೆಂಬರ್ 2025, 18:30 IST
   
ಮೇಷ
  • ಜವಾಬ್ದಾರಿ ಕೆಲಸಗಳು ಒದಗಿ ಬಂದು ಅವುಗಳನ್ನು ಮುಗಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈದ್ಯರಿಗೆ ತುರ್ತು ಕೆಲಸಗಳಿಂದ ಬಿಡುವಿಲ್ಲದಂತಾಗುವುದು. ಧರ್ಮದಲ್ಲಿ ಶ್ರದ್ಧೆ ಹೆಚ್ಚಲಿದೆ, ಧಾರ್ಮಿಕ ಕೆಲಸಗಳಲ್ಲಿ ತೊಡಗುತ್ತೀರಿ.
  • ವೃಷಭ
  • ಭಾಷಾ ಅಧ್ಯಾಪಕರಿಗೆ ಮತ್ತು ನಾಟಕ ಕಲಾವಿದವರಿಗೆ ಮನ್ನಣೆ ಸಿಗಲಿದೆ. ಚರ್ಮದ ವಸ್ತುಗಳ ಮಾರಾಟಗಾರರಿಗೆ ವಿದೇಶದಿಂದ ಅವಕಾಶ ಸಿಗಲಿದೆ. ರಫ್ತು ವ್ಯವಹಾರದಲ್ಲಿ ಲಾಭ ಸಿಗಲಿದೆ.
  • ಮಿಥುನ
  • ತುಂಬ ದಿನಗಳಿಂದ ಶತ್ರುಗಳ ಉಪಟಳದಿಂದ ಬೇಸರಗೊಂಡಿರುವ ನಿಮಗೆ ಶತ್ರುಗಳ ಬಣ್ಣ ಬಯಲಾಗುವುದು ಸಂತಸ ತರಲಿದೆ. ವ್ಯಾಪಾರದ ಅಭಿವೃದ್ಧಿಗೆ ಪತ್ರಿಕೆಯವರ ಸಹಾಯ ಪಡೆದು ಪ್ರಚಾರಕ್ಕೆ ಬರಬಹುದು.
  • ಕರ್ಕಾಟಕ
  • ಮಕ್ಕಳ ಕೆಲವು ಮಾತುಗಳು ಮನಸ್ಸಿಗೆ ಬಹಳವಾಗಿ ನಾಟುವುದು. ಎಲ್ಲಾ ರೀತಿಯ ಕುಟುಂಬದ ಸಮಸ್ಯೆಗಳು ಪರಿಹಾರವಾಗುವವು. ತಂದೆ ಮಕ್ಕಳ ನಡುವೆ ಸಂಬಂಧ ಅಭಿವೃದ್ಧಿಯಾಗುವುದು.
  • ಸಿಂಹ
  • ನಡೆದು ಬಂದ ದಾರಿಯು ನಿಮಗಿಂತ ಕಿರಿಯರಿಗೆ ಮಾರ್ಗದರ್ಶನವನ್ನು ಕೊಡಲಿದೆ. ಮಕ್ಕಳ ಹಾಗೂ ಮೊಮ್ಮಕ್ಕಳ ಜತೆಗೆ ಈ ಹಬ್ಬವನ್ನು ಆಚರಿಸುವಿರಿ. ಈ ದಿನವು ಹರ್ಷದಾಯಕವಾಗಿರುವುದು.
  • ಕನ್ಯಾ
  • ಸಾಂಪ್ರದಾಯಿಕ ಉಡುಗೆಗಳ ಮಾರಾಟಗಾರರಿಗೆ ಅಧಿಕ ಮಾರಾಟ ಇರುವುದು. ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶಗಳು ಬರಲಿವೆ. ಕೌಟುಂಬಿಕ ವಿಚಾರಗಳತ್ತ ಸಂಪೂರ್ಣ ಗಮನ ನೀಡಬೇಕಾಗುತ್ತದೆ.
  • ತುಲಾ
  • ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ವ್ಯಕ್ತಿಯ ಪರಿಚಯ ಮತ್ತು ವ್ಯವಹಾರದ ಸಂಪರ್ಕ ನಿಮಗಿದ್ದರೆ ಶುಭವಾಗುವುದು. ಎಲ್ಲಾ ಕಿರಿ ಕಿರಿಗಳನ್ನೂ ಶಾಂತ ರೀತಿಯಿಂದ ಎದುರಿಸಿ.
  • ವೃಶ್ಚಿಕ
  • ವಕೀಲೀ ವೃತ್ತಿ ನಡೆಸುವವರಿಗೆ, ನ್ಯಾಯಾಂಗ ಇಲಾಖೆಯವರಿಗೆ ಉತ್ತಮ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ. ತಾಮ್ರ, ಹಿತ್ತಾಳೆ ಪಾತ್ರೆಗಳ ಮಾರಾಟಗಾರರಿಗೆ ಅಧಿಕ ಲಾಭವಿರುವುದು.
  • ಧನು
  • ಈಗೆರಡು ದಿನಗಳಿಂದ ಅನುಭವಿಸುತ್ತಿರುವ ಹಣಕಾಸಿನ ಸಂಬಂಧದ ಅಪವಾದಗಳು ದೂರವಾಗಲಿವೆ. ಅತಿಯಾಗಿ ಪ್ರೀತಿಸುವ ಹಾಗೂ ಆದರಿಸುವ ಜನರೊಂದಿಗೆ ಕಾಲ ಕಳೆಯಲು ಸಕಾಲವಾಗಿದೆ. ‌
  • ಮಕರ
  • ಹಣ ಉಳಿತಾಯದ ಸನ್ಮಾರ್ಗಗಳನ್ನು ಕಂಡುಕೊಳ್ಳುವಿರಿ, ಅದರಂತಯೇ ಉಳಿತಾಯವಾಗಲಿದೆ. ಸಮಯ ಪ್ರಜ್ಞೆಯ ಜೊತೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಶುಭ. ಎಣಿಕೆಯಂತೆ ಕಾರ್ಯಗಳು ಸಿದ್ಧಿಸಲಿವೆ.
  • ಕುಂಭ
  • ಸಾಹಿತಿಗಳು ಈ ದಿನದಲ್ಲಿ ಬರೆಯುವ ಲೇಖನಕ್ಕೆ ಸರಸ್ವತಿಯ ಅನುಗ್ರಹ ಇದ್ದಂತೆ ಅನುಭವವಾಗಲಿದೆ. ತಿಂಡಿ ತಿನಿಸುಗಳ ವ್ಯಾಪಾರದಲ್ಲಿ ಲಾಭ ನಷ್ಟದ ಮಿಶ್ರಫಲ ಕಾಣುವಿರಿ. ಮನಸ್ಸಿದ್ದರೆ ಮಾರ್ಗ ಎಂಬ ಮಾತು ಅನ್ವಯಿಸುತ್ತದೆ.
  • ಮೀನ
  • ಇತರರಿಗಿಂತ ಭಿನ್ನವಾದ ಹಾಗೂ ಧನಾತ್ಮಕವಾದ ನಿರ್ಧಾರವನ್ನು ತಗೆದುಕೊಳ್ಳುವಿರಿ. ಧನಾಗಮನಕ್ಕೆ ಹಲವು ರೀತಿಯ ಅವಕಾಶಗಳು ಇದ್ದರೂ ಬುದ್ಧಿವಂತಿಕೆ, ಆತ್ಮವಿಶ್ವಾಸದ ಅಗತ್ಯವಿರುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.