ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಭೇಟಿಯಾದ ವ್ಯಕ್ತಿಯಿಂದ ಕೆಲವು ಪ್ರಯೋಜನಗಳಾಗುವವು

ಪ್ರಜಾವಾಣಿ ವಿಶೇಷ
Published 6 ಆಗಸ್ಟ್ 2023, 23:30 IST
Last Updated 6 ಆಗಸ್ಟ್ 2023, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮಕ್ಕಳ ಭವಿಷ್ಯದ ಕುರಿತಾಗಿ ಆಳವಾದ ಚಿಂತನೆ ನೆಡೆಸುವಿರಿ. ಇಂದು ನಿಮ್ಮ ಎಲ್ಲಾ ಆಲೋಚನೆಗಳಿಗೂ ಸಂಗಾತಿಯ ಸಂಪೂರ್ಣ ಬೆಂಬಲ ಇರುವುದು. ಸಾಲದ ರೂಪದಲ್ಲಿ ಕೊಟ್ಟ ಹಣ ಮರಳುವ ಲಕ್ಷಣಗಳು ಇವೆ.
  • ವೃಷಭ
  • ಹೊಸ ಕನಸು ಹಾಗು ಉತ್ಸಾಹದಿಂದ ಕೆಲಸವನ್ನು ಶುರು ಮಾಡುವಿರಿ. ತಾಯಿಯ ಆರೋಗ್ಯ ಹದಗೆಟ್ಟಿದ್ದಲ್ಲಿ ಹಂತ ಹಂತವಾಗಿ ಚೇತರಿಕೆ ಉಂಟಾಗುವುದು. ಹಳೆಯ ಸಿಹಿ ಘಟನೆಗಳನ್ನು ಮೆಲಕು ಹಾಕುವಿರಿ.
  • ಮಿಥುನ
  • ನಿಮ್ಮ ಸ್ಥಿರ ಅಥವಾ ಚರ ಆಸ್ತಿಯನ್ನು ಮಾರಲು ಯೋಚನೆ ನೆಡೆಸಿದ್ದಲ್ಲಿ ಹಿರಿಯರಿಂದ ಸರಿಯಾದ ಮಾರ್ಗ ಕೇಳಿ ಪಡೆದುಕೊಳ್ಳಿ. ನಿಮಗೆ ಅಚಾನಕ್ಕಾಗಿ ಭೇಟಿಯಾದ ವ್ಯಕ್ತಿಯಿಂದ ಕೆಲವು ಪ್ರಯೋಜನಗಳಾಗಬಹುದು.
  • ಕರ್ಕಾಟಕ
  • ನಿಮಗಿಂತ ಸಣ್ಣ ವಯಸ್ಸಿನ ಮಕ್ಕಳ ಆಟೋಟಗಳನ್ನು ನೋಡಿ ಕಳೆದು ಹೋದ ದಿನಗಳನ್ನು ನೆನಪಿಸಿಕೊಳ್ಳುವಿರಿ. ಅಧಿಕ ಒತ್ತಡದ ಕೆಲಸದ ನಡುವೆಯೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.
  • ಸಿಂಹ
  • ನಿಮ್ಮ ಮಾನಸಿಕ ಒತ್ತಡವು ಕಡಿಮೆಯಾಗದ ಹೊರತು ಇತರರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ವ್ಯವಹಾರದಲ್ಲಿ ಗೆಳೆಯನ ಮಾತುಗಳನ್ನು ಕೇಳಿದರೆ ಲಾಭವಾಗುವುದು. ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಬರುವುದು ಶುಭ ತರುವುದು.
  • ಕನ್ಯಾ
  • ನೀವು ತೆಗೆದುಕೊಂಡ ದಿಟ್ಟ ಹೆಜ್ಜೆಗಳು ನಿಮ್ಮ ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುವುದು. ಕುಟುಂಬದ ಸದಸ್ಯರ ನಡುವೆ ಅನಗತ್ಯ ಚರ್ಚೆಗಳನ್ನು ಮಾಡಬೇಡಿ. ನಕಾರಾತ್ಮಕ ಚಿಂತೆಗಳಿಗೆ ಆಸ್ಪದ ಕೊಡಬೇಡಿ.
  • ತುಲಾ
  • ದಿನಗೂಲಿ ಕೆಲಸವನ್ನು ಮಾಡುವವರಿಗೆ ಈ ದಿನ ಸ್ವಲ್ಪ ಅಸ್ಥಿರತೆ ಕಾಡಬಹುದು. ನಿಮ್ಮ ಖರ್ಚುಗಳನ್ನು ಬಿಟ್ಟು ಕೆಲವು ಮನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸುವುದಕ್ಕಾಗಿ ಖರ್ಚು ಮಾಡಬೇಕಾಗಿ ಬರುವುದು.
  • ವೃಶ್ಚಿಕ
  • ಸಂಜೆಯ ವೇಳೆಗೆ ತಾಯಿಯ ತವರು ಮನೆಯ ಕಡೆಯಿಂದ ಸಿಹಿ ಸುದ್ಧಿಯನ್ನು ಕೇಳುವಿರಿ. ಕೆಲವೊಂದು ಸಮಾರಂಭದಲ್ಲಿ ನಿಮ್ಮ ಹಾಜರಿಯು ವಿಶೇಷವಾದ ಕಳೆ ತರುವುದು. ವಾತ ಪಿತ್ತಗಳ ದೋಷ ಉಂಟಾಗುವುದು.
  • ಧನು
  • ಮುಂಜಾಗರೂಕತೆ ಇಲ್ಲದೇ ಮಾಡಿದ ಕೆಲಸಗಳು ಅಪಾಯವನ್ನು ತಂದೊಡ್ಡಬಹುದು. ಸ್ವಾದವನ್ನು ಅರಸಿ ತಿಂದ ಆಹಾರವು ಅನಾರೋಗ್ಯಕ್ಕೆ ಕಾರಣವಾಗುವುದು. ನಿಮ್ಮ ಬಗ್ಗೆ ಹೆತ್ತವರಿಗೆ ಚಿಂತೆಯಾಗುವಂತೆ ಮಾಡಬೇಡಿ
  • ಮಕರ
  • ಜೀವನದ ಎಲ್ಲ ರೀತಿಯ ಕ್ಷಣಗಳನ್ನು ಅನುಭವಿಸಿದ ನಿಮಗೆ ಇತರರಿಗೆ ಜೀವನವನ್ನು ಹೇಳಿಕೊಡುವುದು ಕಷ್ಟವಾಗುವುದಿಲ್ಲ. ಆದಾಯಕ್ಕೆ ಹೊಸ ಮೂಲಗಳನ್ನು ಹುಡುಕುವಿರಿ. ನೂತನ ವಸ್ತ್ರ ಧಾರಣೆ ಖುಷಿ ಕೊಡುವುದು.
  • ಕುಂಭ
  • ಬಹು ಕಾಲದಿಂದ ಎದುರು ನೋಡುತ್ತಿದ್ದ ಜೀವನವನ್ನು ಅನುಭವಿಸುವ ಸಮಯ ಹತ್ತಿರವಿದೆ. ಭಾವನಾತ್ಮಕವಾಗಿ ಸ್ನೇಹಿತರು ಹಾಗೂ ಕುಟುಂಬದವರ ಸಹಕಾರ ಸಿಗಲಿದೆ. ಆರ್ಥಿಕವಾಗಿ ಸದೃಢವಾಗಲಿದ್ದೀರಿ.
  • ಮೀನ
  • ನಿಮ್ಮ ಧ್ಯೇಯಗಳನ್ನು ಪಸರಿಸುವ ಕೆಲಸ ಮಾಡುವಿರಿ. ಕಾರಣಾಂತರದಿಂದ ಇಂದು ಕೆಲ ವ್ಯಕ್ತಿಗಳನ್ನು ನಿರ್ಲಕ್ಷಿಸುವಿರಿ. ಅಕ್ಕ ಪಕ್ಕದವರಿಗೆ ನಿಮ್ಮ ಸಂಪತ್ತು ಅನುಭವಿಸುವ ಚಟ ಉಂಟಾಗವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.