ADVERTISEMENT

ದಿನ ಭವಿಷ್ಯ: ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದೆ, ಮದುವೆ ಮಾತುಕತೆಗಳು ನಡೆಯಲಿವೆ.

ದಿನ ಭವಿಷ್ಯ: ಸೋಮವಾರ, 14 ಏಪ್ರಿಲ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಏಪ್ರಿಲ್ 2025, 23:57 IST
Last Updated 13 ಏಪ್ರಿಲ್ 2025, 23:57 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮಡದಿಯಲ್ಲಿ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಭಿನ್ನಾಭಿಪ್ರಾಯ ಮೂಡದಂತೆ ಗಮನವಹಿಸಿ. ಉಳಿತಾಯದ ಹಣವನ್ನು ಮನೆಯ ನಿರ್ಮಾಣ ಕಾರ್ಯಗಳಿಗೆ ಬಳಸುವಿರಿ. ಆಲಂಕಾರಿಕ ವಸ್ತುಗಳ ಮಾರಾಟದಿಂದ ಆದಾಯ. ‌
  • ವೃಷಭ
  • ಕೇಟರಿಂಗ್ ಸೇವೆಯನ್ನು ಮಾಡುವವರಿಗೆ ಅಧಿಕ ಲಾಭ ಇರಲಿದೆ. ಸರಿಯಾದ ಪರಿಶೀಲನೆ ಇಲ್ಲದೆ ಯಾವ ಕ್ಷೇತ್ರಗಳಲ್ಲಿಯೂ ಹೂಡಿಕೆ ಸಲ್ಲದು. ಶ್ರೀರಾಮನಾಮದ ಜಪವನ್ನು ಮಾಡಿ. ‌
  • ಮಿಥುನ
  • ಸಹೋದರಿಯರ ಆಗಮನ ಅಥವಾ ಭೇಟಿಯು ಸಂತಸ ತರುತ್ತದೆ. ಆಗು ಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅನಿರೀಕ್ಷಿತ ಧನಾಗಮನದಿಂದ ಸಂತಸ ಮೂಡಲಿದೆ.
  • ಕರ್ಕಾಟಕ
  • ಬೇಕಾದ ರೀತಿಯಲ್ಲಿ ವ್ಯಕ್ತಿಯ ಮನಃ ಪರಿವರ್ತನೆ ಮಾಡುವ ವಿಚಾರದಲ್ಲಿ ಸಫಲರಾಗುತ್ತೀರಿ. ಉದರವ್ಯಾಧಿ ಅಥವಾ ಜೀರ್ಣಾಂಗಕ್ಕೆ ಸಂಬಂಧಿಸದಂತೆ ಅನಾರೋಗ್ಯ ಎದುರಾಗಬಹುದು.
  • ಸಿಂಹ
  • ಕಲಿಕೆಯಿಂದ ಆಫೀಸಿನ ಕೆಲಸಗಳನ್ನು ಇನ್ನಷ್ಟು ತಿಳಿದು ಕೊಳ್ಳುವ ಅವಕಾಶ ಸಿಗುತ್ತದೆ. ಕ್ರೀಡಾಪಟುಗಳಿಗೆ ಪುರಸ್ಕಾರ, ಅಭಿನಂದನೆಗಳು ಪ್ರಾಪ್ತಿ. ಮಗನಿಂದ ಮನಸ್ಸಿಗೆ ನೋವಾಗುವಂತಹ ಘಟನೆ ನಡೆಯಬಹುದು.
  • ಕನ್ಯಾ
  • ದೂರದ ಊರಿನಲ್ಲಿರುವ ಆಪ್ತರನ್ನು ಭೇಟಿ ಮಾಡುವ ಸಲುವಾಗಿ ಪ್ರಯಾಣವನ್ನು ಕೈಗೊಳ್ಳಬೇಕಾಗುತ್ತದೆ. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದ್ದು , ಮದುವೆಯ ಮಾತುಕತೆಗಳನ್ನು ನಡೆಸಲಿದ್ದಾರೆ.
  • ತುಲಾ
  • ವ್ಯಾಪಾರಸ್ಥರು ಹೊಸ ತರದ ಯೋಜನೆಗಳನ್ನು ರೂಪಿಸಿಕೊಳ್ಳುವುದರಿಂದ ಗ್ರಾಹಕರ ಪರಿಚಯ ಆಗಬಹುದು. ದಿನಗೂಲಿ ನೌಕರರಿಗೆ ಅನುಕೂಲಕರ ವಾತಾವರಣ ಸಿಗಲಿದೆ. ಸಂಗೀತಕ್ಕೆ ಪ್ರೋತ್ಸಾಹ ಸಿಗಲಿದೆ.
  • ವೃಶ್ಚಿಕ
  • ಯಾರ ನೆರವೂ ಇಲ್ಲದೆ ಕಾರ್ಯಗಳನ್ನು ಸ್ವಯಂ ನಿರ್ವಹಿಸುವಂತಾಗಲಿದೆ. ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ರಕ್ಷಣಾ ದೇವತೆಯನ್ನು ಆರಾಧಿಸಿ. ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳು ನಿವಾರಣೆಯಾಗಲಿವೆ.
  • ಧನು
  • ವಿವಿಧ ಧಾರ್ಮಿಕ ಕಾರ್ಯಕ್ರಮ ಮಾಡುವುದರಿಂದ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದು. ಹಣಕಾಸಿನ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಿರಿ.
  • ಮಕರ
  • ನೂತನ ಕೆಲಸಗಳ ಆರಂಭಕ್ಕೆ ಮತ್ತು ಒಡಂಬಡಿಕೆಗೆ ಸೂಕ್ತ ಕಾಲವಾಗಿರುತ್ತದೆ. ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳು ಸಂತಸ ಹೊಂದುವರು.
  • ಕುಂಭ
  • ವಾಕ್ಚಾತುರ್ಯದಿಂದ ಕಾರ್ಯಗಳನ್ನು ನೆರವೇರಿಸಿಕೊಳ್ಳುವಿರಿ. ಉದಯೋನ್ಮುಖ ತಾರೆಯರಿಗೆ ಅವಕಾಶಗಳಿಂದ ಲಾಭವಿದೆ. ತತ್ವಜ್ಞಾನಿಗಳೊಡನೆ ಸುದೀರ್ಘ ಚರ್ಚೆ ನಡೆದು ಬುದ್ಧಿಮಟ್ಟ ಹೆಚ್ಚಲಿದೆ.
  • ಮೀನ
  • ಪಾಲುದಾರಿಕೆಯ ವ್ಯವಹಾರದ ಯೋಜನೆಯ ಬೆಳವಣಿಗೆಯಲ್ಲಿ ಸಂಬಂಧಿಸಿದವರಿಂದ ಚರ್ಚೆ ನಡೆಸದೆ ತೀರ್ಮಾನಗಳಿಗೆ ಬರುವುದು ಸರಿಯಲ್ಲ. ಸರ್ಕಾರಿ ಸಂಸ್ಥೆಗಳಲ್ಲಿ ಉಪನ್ಯಾಸ ಕೈಗೊಳ್ಳುವ ಅವಕಾಶವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.