ದಿನ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಶುಭ ಸಂದೇಶವೊಂದು ಕೇಳಿಬರಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಆಗಸ್ಟ್ 2025, 0:07 IST
Last Updated 3 ಆಗಸ್ಟ್ 2025, 0:07 IST
ಮೇಷ
ಹೆಚ್ಚಿನ ಹೂಡಿಕೆಯ ಬಗ್ಗೆ ತಿಳಿದವರೊಂದಿಗೆ ಮಾತುಕತೆ ನಡೆಸಿ ತೀರ್ಮಾನಿಸಿ. ಔದಾರ್ಯದಿಂದ ಕಾರ್ಯನಿರ್ವಹಿಸಿದಲ್ಲಿ ಹೆಚ್ಚಿನ ಏಳಿಗೆಯನ್ನು ಕಾಣುವಿರಿ. ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವೃಷಭ
ಐಶ್ವರ್ಯವು ಅನಿರೀಕ್ಷಿತವಾಗಿ ಬಂದಾಗ ದುಂದುವೆಚ್ಚ ಮಾಡದೆ ಬುದ್ಧಿವಂತಿಕೆಯಿಂದ ಸದುಪಯೋಗ ಪಡಿಸಿಕೊಳ್ಳಿ. ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುವ ಸನ್ನಿವೇಶಗಳು ಈ ದಿನ ನಿಮಗೆ ಎದುರಾಗಲಿದೆ.
ಮಿಥುನ
ಅಧಿಕಾರಿಗಳಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗಲಿದ್ದು, ಆತ್ಮವಿಶ್ವಾಸ ಬೆಳೆಯುವುದು. ಬಳೆ ಮತ್ತು ಫ್ಯಾನ್ಸಿ ವಸ್ತುಗಳ ಮಾರಾಟಗಾರರಿಗೆ ಉತ್ತಮ ಲಾಭ. ಮಕ್ಕಳಿಗೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿ ಹೆಚ್ಚುವುದು.
ಕರ್ಕಾಟಕ
ಹಿರಿಯರ ಬಳಿಯಲ್ಲಿ ಅನಾವಶ್ಯಕವಾದ ವಿವಾದ, ಗೊಂದಲಗಳಿಗೆ ಅವಕಾಶ ನೀಡಬೇಡಿ. ಹೆಚ್ಚಿನ ಶಿಕ್ಷಣಕ್ಕೆಂದು ವಿದೇಶಕ್ಕೆ ತೆರಳಿದ ಮಗನ ಆಗಮನವಾಗುವುದು. ನಿಮ್ಮ ಸ್ಪರ್ಧಾಮನೋಭಾವಗಳು ತೀವ್ರಗೊಳ್ಳುವುದು.
ಸಿಂಹ
ಹೊಸ ಯೋಜನೆಗಳ ಜಂಟಿ ಕಾರ್ಯಾಚರಣೆಯ ವಿಷಯವಾಗಿ ಸ್ನೇಹಿತರೊಡನೆ ಮಾತುಕತೆ ನಡೆಯಲಿದೆ. ರಂಗಕರ್ಮಿಗಳಿಗೆ ಮತ್ತು ಟಿ.ವಿ ಕಲಾವಿದರಿಗೆ ಒಳ್ಳೆಯ ದಿನ. ಅನಿರೀಕ್ಷಿತವಾಗಿ ಶುಭ ಸಂದೇಶವೊಂದು ಕೇಳಿಬರಲಿದೆ.
ಕನ್ಯಾ
ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ. ಆರ್ಥಿಕ ಬಲವನ್ನು ಮತ್ತು ನೆಮ್ಮದಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಹೊಂದಿರುವ ನಿಮಗೆ ಗಣಪತಿಯ ಆರಾಧನೆ ಶುಭವನ್ನುಂಟುಮಾಡುವುದು.
ತುಲಾ
ನಿಮ್ಮ ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಅಪಾರವೆಂದು ಅನಿಸಲಿದೆ. ಪರೋಪಕಾರ ಮಾಡಲು ಹೋಗಿ ಯಾವುದೋ ಅಪವಾದಕ್ಕೆ ಒಳಗಾಗುವಂತೆ ಆಗಲಿದೆ. ಕೆಲವು ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಬಯಸುವಿರಿ.
ವೃಶ್ಚಿಕ
ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಹತ್ತಾರು ರೀತಿಯಲ್ಲಿ ಯೋಚನೆ ಮಾಡುವುದಕ್ಕಿಂತ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಉತ್ತಮ.
ಧನು
ವ್ಯವಹಾರದಲ್ಲಿ ಪಾಲುದಾರರನ್ನಾಗಿ ಸೇರಿಸಿಕೊಳ್ಳಲು ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುವಿರಿ. ಮುರಿದುಬಿದ್ದಿದ್ದ ಸಂಬಂಧ ಮತ್ತೆ ಚಿಗುರೊಡೆಯುತ್ತದೆ. ಅನಾವಶ್ಯಕವಾಗಿ ಖರ್ಚು ಮಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು.
ಮಕರ
ಇಂದು ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಮನಸ್ಸಿಗೆ ಬೇಸರವಿರುವುದು. ವಿದ್ವಾಂಸರೊಡನೆ ಕೆಲ ಹೊತ್ತು ಕಳೆಯುವ ಸಂಭವವಿದೆ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಸಮಯ ಕಳೆಯುರಿ.
ಕುಂಭ
ಶ್ರೀಮಂತಿಕೆಯ ಬದುಕಿಗೆ ಮನಸ್ಸು ಹಾತೊರೆಯುವುದು. ಮಕ್ಕಳಿಂದ ದುಬಾರಿ ವಸ್ತುಗಳ ಖರೀದಿಯಾಗಬಹುದು. ಸಮಸ್ಯೆಗಳು ಹೆಚ್ಚುವುದಕ್ಕೆ ಮುಂಚಿತವಾಗಿಯೇ ಜಾಣ್ಮೆಯಿಂದ ಪರಿಹರಿಸಿಕೊಳ್ಳಿ. ಮಹಾಲಕ್ಷ್ಮಿ ಆರಾಧಿಸಿ.
ಮೀನ
ತಾಯಿಯ ಮಾತನ್ನು ಕೇಳಿದ್ದರೆ ಆಗುತ್ತಿತ್ತು ಎಂದು ಮುಂದೊಂದು ದಿನ ಸ್ಮರಿಸುವ ಬದಲು ಇಂದೇ ಕೇಳಿ. ದುರಾಸೆಯ ಸ್ವಭಾವದಿಂದ ಹೊರಬನ್ನ. ಮಕ್ಕಳ ಮೊದಲ ತೊದಲ ನುಡಿಗಳು ನಿಮ್ಮ ಸಂತೋಷಕ್ಕೆ ಕಾರಣವಾಗುವುದು.