ದಿನ ಭವಿಷ್ಯ: ವೃತ್ತಿರಂಗದಲ್ಲಿ ಅನಿವಾರ್ಯವಾಗಿ ಮೋಸ ಮಾಡಬೇಕಾದ ಸಂದರ್ಭ ಎದುರಾಗಲಿದೆ
18 ಮೇ 2024 ಶನಿವಾರ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಮೇ 2024, 0:22 IST
Last Updated 18 ಮೇ 2024, 0:22 IST
ದಿನ ಭವಿಷ್ಯ
ಮೇಷ
ನಿಮ್ಮಿಂದ ಸಹಾಯ ಪಡೆದ ವ್ಯಕ್ತಿಗಳು ನಿಮ್ಮನ್ನು ದೂಷಿಸುವ ಲಕ್ಷಣಗಳು ಗೋಚರಿಸಲಿವೆ. ಶಿಕ್ಷಣ ಹಾಗೂ ಸೌಕರ್ಯ ಎಂಬ ಆಯ್ಕೆಗಳು ನಿಮ್ಮ ಮುಂದೆ ಬಂದಾಗ ಬುದ್ಧಿವಂತಿಕೆಯಿಂದ ಒಂದನ್ನು ಆರಿಸಿಕೊಳ್ಳಿ.
ವೃಷಭ
ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಅಥವಾ ವಿಶೇಷ ಗೌರವ ಲಭಿಸಲಿದೆ. ನೆರೆ ಹೊರೆಯರಿಗೆ ನೀವು ಕೊಡುವ ಅತಿಯಾದ ಸಲುಗೆಯು ದುರುಪಯೋಗ ಆಗುವ ಸಾಧ್ಯತೆ ಇದೆ.
ಮಿಥುನ
ವೃತ್ತಿರಂಗದಲ್ಲಿ ಅನಿವಾರ್ಯವಾಗಿ ಮೋಸ ಮಾಡಬೇಕಾದ ಸಂದರ್ಭ ಎದುರಾಗಲಿದೆ. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ನಿಮ್ಮ ಊರು, ಮನೆಯವರ ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯ.
ಕರ್ಕಾಟಕ
ಉದ್ಯೋಗದಲ್ಲಿ ಬದಲಾವಣೆಯ ಆಲೋಚನೆ ಹೊಂದಿದ್ದರೆ, ಸದ್ಯಕ್ಕೆ ಆ ಯೋಚನೆ ಬಿಡುವುದು ಒಳ್ಳೆಯದು. ಕೆಲವು ಕೆಲಸಗಳು ನೀವು ಬೇಡವೆಂದುಕೊಂಡರೂ, ನಿಮ್ಮದೆ ಹೆಗಲೇರುವ ಸಾಧ್ಯತೆ ಇದೆ.
ಸಿಂಹ
ನಿಮಗೆ ತಿಳಿಯದೆ ನಿಮ್ಮ ಬಗ್ಗೆ ಆಗುತ್ತಿರುಲವ ಅಪಪ್ರಚಾರವು ಸದ್ಯದಲ್ಲೇ ನಿಮ್ಮ ಗಮನಕ್ಕೆ ಬರಲಿದೆ. ಹೆಚ್ಚಿನ ಕೆಲಸದ ಕಾರಣ ಕಾರ್ಮಿಕರಿಗೆ ಸಾಂಸಾರಿಕ ಜವಾಬ್ದಾರಿ ನಿಭಾಯಿಸುವುದು ಕಷ್ಟವಾಗಲಿದೆ.
ಕನ್ಯಾ
ನಂಬಿಕೆ ಹಾಗು ದೃಢ ನಿರ್ಧಾರದಿಂದ ಮಾಡಿದ ಕೆಲಸಗಳು ನಿಸ್ಸಂಶಯವಾಗಿ ನಿಮ್ಮ ನಿರೀಕ್ಷೆ ತಲುಪಲಿವೆ. ಮನೆಯಲ್ಲಿನ ಮನಸ್ತಾಪಗಳು ಸರಿಯಾಗದ ಹೊರತು ನಿಮ್ಮ ಅಭಿವೃದ್ಧಿಗೆ ತೊಡಕು ಉಂಟಾಗಬಹುದು
ತುಲಾ
ವೈದ್ಯರ ಸಲಹೆಯಂತೆ ಆರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗಲಿದೆ. ಗಿರವಿ ಇಟ್ಟ ಆಭರಣಗಳನ್ನು ಆದಷ್ಟು ಬೇಗ ಬಿಡಿಸಿಕೊಳ್ಳುವ ಯೋಜನೆ ಮಾಡುವುದು ಸೂಕ್ತ.
ವೃಶ್ಚಿಕ
ಕಾರಣವಿಲ್ಲದೆ ನಡೆಸಿಕೊಂಡು ಬರುತ್ತಿರುವ ಪದ್ಧತಿ ಎಂದು ನೀವು ಭಾವಿಸಿದ ಆಚರಣೆಗೆ ಇಂದು ಕಾರಣ ಸಿಗಲಿದೆ. ಸಮಸ್ಯೆಗಳಿಂದ ನಿದ್ರಾಹೀನತೆ ಕಾಡಬಹುದು. ವನ ವಿಹಾರದಿಂದ ಮನಸ್ಸಿಗೆ ಮುದ ಸಿಗಲಿದೆ.
ಧನು
ಸಹೋದ್ಯೋಗಿಗಳೊಂದಿಗೆ ಹೊಂದಿಕೊಂಡು ಹೋಗುವ ಗುಣ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ನಿಮ್ಮಲಿನ ಆತ್ಮವಿಶ್ವಾಸದಿಂದಾಗಿ ಕೆಲಸ–ಕಾರ್ಯಗಳಲ್ಲಿ ಉತ್ತಮ ಯಶಸ್ಸು ಹೊಂದುವಿರಿ.
ಮಕರ
ಸಾಮಾಜಿಕ ಚಟುವಟಿಕೆಗಳು ಹೆಚ್ಚಲಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ಹೆಜ್ಜೆ ಇಡಿ. ಪಾಲುದಾರರಲ್ಲಿ ಒಮ್ಮತ ಮೂಡಿಸುವಲ್ಲಿ ಯಶಸ್ವಿ ಆಗಲಿದ್ದೀರಿ. ಕಬ್ಬಿಣ ಕೆಲಸ ಮಾಡುವವರು ಜಾಗ್ರತೆವಹಿಸಿ.
ಕುಂಭ
ನಿಮ್ಮ ವೃತ್ತಿ ಜೀವನಕ್ಕಾಗಿ ಬಹಳ ಅವಶ್ಯಕ ನಿರ್ಧಾರವೊಂದನ್ನು ಇಂದು ತೆಗೆದುಕೊಳ್ಳುವಿರಿ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವನ್ನು ನಿರ್ಲಕ್ಷ್ಯ ಬೇಡ. ಆಗಬೇಕಾದ ಅಪಾಯವು ಕೂದಲೆಳೆಯ ಅಂತರದಲ್ಲಿ ತಪ್ಪಲಿದೆ.
ಮೀನ
ಪ್ರಾಪಂಚಿಕ ಅನುಭವಕ್ಕಾಗಿ ಕಾನೂನಿನ ಬಗ್ಗೆ ಅಧ್ಯಯನ ಮಾಡುವ ಮನಸ್ಸಾಗಲಿದೆ. ಕೆಲವು ವಿಚಾರಗಳಲ್ಲಿನ ನಿಮ್ಮ ಭಾವ ಶೂನ್ಯತೆ ನಿಮ್ಮ ಕುಟುಂಬದವರಿಗೆ ನುಂಗಲಾರದ ತುತ್ತಿನಂತೆ ಕಾಣುತ್ತದೆ.