ದಿನ ಭವಿಷ್ಯ: ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು
ಭಾನುವಾರ, 21 ಸೆಪ್ಟೆಂಬರ್ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಸೆಪ್ಟೆಂಬರ್ 2025, 20:29 IST
Last Updated 20 ಸೆಪ್ಟೆಂಬರ್ 2025, 20:29 IST
ಮೇಷ
ಜೀವನದಲ್ಲಿ ನಿಮ್ಮದೇ ಆದ ಉತ್ತಮ ನಿಯಮ ರೂಡಿಸಿಕೊಳ್ಳಿ. ತಪ್ಪು ಪುನರಾವರ್ತನೆ ಆಗದಂತೆ ಎಚ್ಚರ. ಕಾಲು ನೋವಿನ ಸಮಸ್ಯೆ ಕಾಡಬಹುದು . ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ.
ವೃಷಭ
ವರಮಾನದಲ್ಲಿ ಈ ದಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಹೊಸ ಮನೆ ನಿರ್ಮಾಣಕ್ಕಾಗಿ ಹೆಚ್ಚಿನ ತಯಾರಿ ನಡೆಸಬಹುದು, ವಾಸ್ತು ವಿಚಾರ ದಲ್ಲಿ ಗಮನಹರಿಸಿ. ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು.
ಮಿಥುನ
ಮನೆಯ ಎಲ್ಲ ವಿಷಯಗಳನ್ನು ಮನೆಯ ಸರ್ವ ಸದಸ್ಯರ ಎದುರು ಚರ್ಚಿಸಬೇಕೆಂಬ ಮನಸ್ಸಾಗುವುದು ಅದರಂತಯೇ ಚರ್ಚಿಸಲು ಸಿದ್ಧರಾಗು ವಿರಿ. ಮಕ್ಕಳೊಂದಿಗೆ ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಲಿದೆ.
ಕರ್ಕಾಟಕ
ಸತತ ಪ್ರಯತ್ನದಿಂದ ಯಶಸ್ಸು ಹೊಂದಿ ಅಗೌರವಿಸಿದ ಸಂಬಂಧಿಕರ ಎದುರು ತಲೆ ಎತ್ತಿ ನಿಲ್ಲುವಂತಾಗುತ್ತದೆ. ಸುಖ ದುಃಖವನ್ನು ಸಮವಾಗಿ ಸ್ವೀಕರಿಸಿ ಜೀವನದಲ್ಲಿ ಹೊಸ ಚೈತನ್ಯ ತುಂಬಿ, ಆಸಕ್ತಿ ಹೆಚ್ಚಿಸಿಕೊಳ್ಳಿ.
ಸಿಂಹ
ದೇವರ ಅನುಗ್ರಹದಿಂದ ಬಹಳ ಹಳೆಯದಾದ ಹಾಗೂ ಕೌಟುಂಬಿಕವಾದ ಮುಖ್ಯ ಕೆಲಸವೊಂದನ್ನು ಪೂರ್ಣಗೊಳಿಸುವಿರಿ. ಪಿತ್ತ ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು.
ಕನ್ಯಾ
ಅವಶ್ಯಕವಾಗಿ ಬೇಕಾಗಿರುವ ಮತ್ತು ನಿಮ್ಮ ನೆಚ್ಚಿನ ಉದ್ಯೋಗ ದೊರಕಿಸಿಕೊಳ್ಳಲು ತೀವ್ರ ಪ್ರಯತ್ನವನ್ನು ನಡೆಸಬೇಕಾಗುತ್ತದೆ. ಬಹಳ ದಿನಗಳ ಬಳಿಕ ಬಂಧು-ಮಿತ್ರರ ಜೊತೆಗಿನ ಒಡನಾಟ ಸಂತೋಷ ತರಲಿದೆ.
ತುಲಾ
ಯೋಜನಾಬದ್ಧ ಕೆಲಸ ರೂಪಿಸದಿದ್ದರೆ ಈ ದಿನದ ನಿಮ್ಮ ಶ್ರಮ ವ್ಯರ್ಥ
ಆಗಲಿದೆ. ಪ್ರಾಮಾಣಿಕವಾಗಿ ದೇವರು ಮೆಚ್ಚುವ ರೀತಿ ಕರ್ತವ್ಯ ನಿರ್ವಹಿಸು ವುದು ಉತ್ತಮ. ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆ ಕೊಡಲು ಕಲಿಯಿರಿ.
ವೃಶ್ಚಿಕ
ಶಿಕ್ಷಕ ವೃತ್ತಿಯನ್ನು ನಡೆಸಿ ವಿದ್ಯಾದಾನ ಮಾಡುವವರಿಗೆ ಸೂಕ್ತ ಗೌರವಾದರಗಳು ದೊರೆಯಲಿವೆ. ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟ ಇರಲಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಅಧಿಕವಾದ ಗಮನವಿರಲಿ.
ಧನು
ಕಟ್ಟಡ ನಿರ್ಮಾಣದ ಕೆಲಸಗಾರರಿಗೆ ವೃತ್ತಿಯಲ್ಲಿ ಬೇಸರ ಹುಟ್ಟಬಹುದು. ತಾಂತ್ರಿಕ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮದ ಅಗತ್ಯವಿದೆ. ದೂರ ಸಂಚಾರದಲ್ಲಿ ವೃಥಾ ಖರ್ಚುಗಳಿದ್ದರೂ ಸಂತೋಷ ಇರಲಿದೆ.
ಮಕರ
ಮದುವೆಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಯೋಚನೆ ಬರಲಿದೆ. ನಿಧಾನಗತಿಯಲ್ಲಿ ಸಾಗುತ್ತಿರುವ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ವ್ಯಾಪಾರದಲ್ಲಿ ಮೋಸದ ಬಲೆಗೆ ಬೀಳದಿರಿ.
ಕುಂಭ
ನಾಳೆಯ ಯೋಜನೆಗಳಿಗೆ ಇಂದು ಹೆಚ್ಚು ಗಮನ ಕೊಡುವುದರಿಂದ ಕೆಲಸ ಪೂರ್ಣಗೊಳಿಸಲು ಸಹಾಯ ಮಾಡಲಿದೆ. ಒಂದು ಕುತೂಹಲಕಾರಿ ವಿಷಯ ತಿಳಿದು ಅಚ್ಚರಿಗೊಳ್ಳುವಿರಿ.
ಮೀನ
ರಾಜಕಾರಣಿಗಳ ಮಾತಿನ ಪ್ರಭಾವದಿಂದ ಅಥವಾ ಹಣಬಲದಿಂದ ನಿಮ್ಮ ಕೆಲಸ ನೆರವೇರುತ್ತದೆ. ಯೋಜನೆಯ ಮೇಲೆ ಹಿಡಿತ ಸಾಧಿಸಲು ಸ್ನೇಹಿತರ ಬೆಂಬಲ ಸಿಗಲಿದೆ. ಶ್ರೀ ಮಂಜುನಾಥನ ದರ್ಶನ ಪಡೆದುಕೊಳ್ಳಿ.