ADVERTISEMENT

ದಿನ ಭವಿಷ್ಯ: ಮೋಸದ ವ್ಯವಹಾರ ಹಾಗೂ ಕಾನೂನುಬಾಹಿರ ಸಂಗತಿಗಳಲ್ಲಿ ತಲೆ ಹಾಕಬೇಡಿ

ದಿನ ಭವಿಷ್ಯ: ಭಾನುವಾರ 19 ಮೇ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಮೇ 2024, 23:02 IST
Last Updated 18 ಮೇ 2024, 23:02 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ವಿಶಿಷ್ಟ ರೀತಿಯ ವೃತ್ತಿ ಕೌಶಲ್ಯದ ಸೂಕ್ಷ್ಮ ವಿಚಾರಗಳನ್ನು ತಿಳಿಯಲು ಸಹೋದ್ಯೋಗಿಯೊಬ್ಬರು ಅಪೇಕ್ಷಿಸಲಿದ್ದಾರೆ. ಸಕುಟುಂಬ ಸಮೇತರಾಗಿ ಯಾವುದಾದರೂ ಶಕ್ತಿಪೀಠಕ್ಕೆ ಭೇಟಿ ನೀಡುವ ಯೋಚನೆ ಮಾಡಿ.
  • ವೃಷಭ
  • ಮೋಸದ ವ್ಯವಹಾರ ಹಾಗೂ ಕಾನೂನುಬಾಹಿರ ಸಂಗತಿಗಳಲ್ಲಿ ತಲೆ ಹಾಕಬೇಡಿ. ನಿಮ್ಮ ವ್ಯಾಪಾರ ವ್ಯವಹಾರಗಳು ಅಧಿಕ ವರಮಾನ ತರಲಿದೆ. ಮಕ್ಕಳ ದುಡಿಮೆಯಿಂದ ಬರುತ್ತಿರುವ ಹಣದ ಮೂಲದ ಬಗ್ಗೆ ಗಮನಹರಿಸಿ.
  • ಮಿಥುನ
  • ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವ ಕೆಲಸ ನಡೆಯಲಿದೆ. ಜಾನುವಾರುಗಳ ಆರೋಗ್ಯ ನಿರ್ವಹಣೆಗಾಗಿ ಹಣ ವಿನಿಯೋಗ ಮಾಡಲಿದ್ದೀರಿ. ಓದುವುದರಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ.
  • ಕರ್ಕಾಟಕ
  • ಸೋದರ ಮಾವನ ಸಹಾಯದಿಂದ ನಿಮ್ಮ ಕಟ್ಟಡ ನಿರ್ಮಾಣಕ್ಕೆ ಸಹಾಯವಾಗಬಹುದು. ಜಗಳ ಸರಿಪಡಿಸಲು ಹೋಗಿ ನೀವೇ ಜಗಳದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಮನೋರಂಜನೆಗಾಗಿ ಖರ್ಚು ಮಾಡುವಿರಿ.
  • ಸಿಂಹ
  • ವ್ಯಂಗ್ಯಚಿತ್ರ ಕಲಾವಿದರಿಗೆ ಮಾಸ ಪತ್ರಿಕೆಯ ಸಂಸ್ಥೆಯಿಂದ ಹೆಚ್ಚಿನ ಅವಕಾಶಗಳು ಸಿಗಲಿವೆ. ಬಾಲ್ಯದ ಮುಗ್ಧತೆಯಿಂದ ತಪ್ಪಿಸಿಕೊಂಡ ಹಲವಾರು ಅವಕಾಶಗಳನ್ನು ನೆನೆದು ಮರುಗುವಿರಿ. ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚಲಿದೆ.
  • ಕನ್ಯಾ
  • ಮುತ್ತು ರತ್ನಗಳ ಆಭರಣದ ಖರೀದಿ ಮಾಡುವಾಗ ನಿಮ್ಮ ಸ್ನೇಹಿತೆಯ ಅಭಿರುಚಿ ನಿಮಗೆ ಸರಿ ಎನ್ನಿಸಬಹುದು. ರಾಜಕಾರಣಿಗಳಿಗೆ ನಾಯಕತ್ವದಲ್ಲಿ ಬದಲಾವಣೆಯಾಗುವ ಸಂಭವ ಇದೆ. ವಾತ-ಪಿತ್ತಗಳ ನಿರ್ಲಕ್ಷ್ಯ ಬೇಡ.
  • ತುಲಾ
  • ಅಭಿಪ್ರಾಯ ವಿನಿಮಯಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿ ಸೂಕ್ತ ತೀರ್ಮಾನ ಸಿಗಲಿದೆ. ಅದರಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ಹಣ್ಣು-ತರಕಾರಿಗಳ ವ್ಯಾಪಾರಿಗಳಿಗೆ ಲಾಭಾಂಶ ವೃದ್ಧಿಯಾಗಲಿದೆ.
  • ವೃಶ್ಚಿಕ
  • ಮಾತನಾಡುವಾಗ ನೀವು ಬಳಸುವ ಪದಗಳಿಂದಾಗಿ ಇಂದು ಕೆಲವರು ನಿಮ್ಮ ವ್ಯಕ್ತಿತ್ವವನ್ನು ಲೆಕ್ಕ ಹಾಕುತ್ತಾರೆ. ಕೌಟುಂಬಿಕ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಕಾರ್ಯ ಪ್ರವೃತ್ತರಾಗುವಿರಿ
  • ಧನು
  • ಈ ದಿನ ನೀವು ಆಡಿದ ಮಾತುಗಳು ತಿರುಗಿ ನಿಮಗೆ ಮುಳ್ಳಾಗುವ ಸಾಧ್ಯತೆ ಇದೆ. ಇತರರಿಗೆ ಪ್ರಶ್ನಿಸಲಾಗದ ರೀತಿಯಲ್ಲಿ ಮಾತುಗಳನ್ನಾಡಿ, ನಿಮ್ಮ ಗೌರವ ಹಾಗೂ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವಿರಿ
  • ಮಕರ
  • ಮನೆಯಲ್ಲಿ ಅಲಂಕಾರಿಕ ವಸ್ತುಗಳ ಖರೀದಿಯಿಂದ ಅಧಿಕ ಖರ್ಚು ಬಂದೀತು. ಸಗಟು ವ್ಯಾಪಾರಿಗಳಿಗೆ ಖರ್ಚು-ವೆಚ್ಚಗಳು ಆದಾಯದ ಮಿತಿಯೊಳಗಿರಲಿದೆ. ವ್ಯವಹಾರದಲ್ಲಿ ನಷ್ಟವಾಗಬಹುದು. ಜಾಗ್ರತೆ ವಹಿಸಿ.
  • ಕುಂಭ
  • ನಿಮ್ಮನ್ನು ಪ್ರೀತಿಸುವವರ ಮಾರ್ಗದರ್ಶನ ಈ ದಿನ ದೊರೆಯಲಿದ್ದು, ಹೊಸ ಚೈತನ್ಯ ಬರಲಿದೆ. ನಿಮ್ಮ ನಾಜೂಕಿನ ಕೆಲಸಗಳಿಂದಾಗಿ ವಿಶೇಷ ಮನ್ನಣೆ ಗಳಿಸುವಿರಿ. ನಿಮ್ಮ ಅಭಿಪ್ರಾಯಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ.
  • ಮೀನ
  • ಅಧಿಕಾರಿ ಹಾಗೂ ಹಿರಿಯರಿಂದ ಸಹಾಯ ಸಹಕಾರ ಅಪೇಕ್ಷಿಸುವ ದಿನ. ಸಣ್ಣ ಸಣ್ಣ ವಿಚಾರದಲ್ಲಿ ಅಶಾಂತಿ ತೋರಿ ಬಂದು ದಾಂಪತ್ಯದಲ್ಲಿ ಕಿರಿಕಿರಿ ಎನಿಸುವುದು. ಪಾಲುದಾರಿಕೆ ವ್ಯವಹಾರಗಳು ಲಾಭ ತರಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.