ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಅಕ್ಟೋಬರ್ 2025, 23:30 IST
Last Updated 22 ಅಕ್ಟೋಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯೂ ನಿಮ್ಮ ಬುದ್ಧಿವಂತಿಕೆಯ ಕಾರ್ಯವೈಖರಿಯಿಂದ ಅನುಭವಕ್ಕೆ ಬರುತ್ತದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಅತೀವ ಆಸಕ್ತಿಗೆ ಇತರೆ ಅನಿವಾರ್ಯ ಜವಬ್ದಾರಿಗಳ ಮೋಡ ಮುಸುಕಿ ಗ್ರಹಣ ಬಂದಂತಾಗುವುದು.
  • ವೃಷಭ
  • ಹವ್ಯಾಸಿ ಉಪನ್ಯಾಸಕರಿಗೆ ಹೇರಳವಾದ ಅವಕಾಶ ಲಭ್ಯವಾಗುತ್ತದೆ. ವಿವಾಹ ವಿಷಯ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ದೇಹಾರೋಗ್ಯದ ಬಗ್ಗೆ ಅದರಲ್ಲೂ ಉದರ ವ್ಯಾಧಿಯ ಬಗ್ಗೆ ಕಳಜಿ ವಹಿಸಬೇಕು.
  • ಮಿಥುನ
  • ಈ ದಿನ ಮಗಳ ಮದುವೆಯ ವಿಚಾರದಲ್ಲಿ ನೀವು ಇಡುವ ಹೆಜ್ಜೆ ಬಹಳ ಪ್ರಮುಖವಾದುದು ಆಗಿರುತ್ತದೆ. ಶಿಕ್ಷಕ ವೃತ್ತಿಯನ್ನು ಆರಂಭಿಸುವ ಬಗ್ಗೆ ಆಲೋಚಿಸಿದವರಿಗೆ ಶುಭ ದಿನ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.
  • ಕರ್ಕಾಟಕ
  • ಬೇರೆಯ ವ್ಯಕ್ತಿಯ ಕೆಲವು ವಸ್ತುಗಳು ಅರಿವಿಲ್ಲದಂತೆ ನಿಮ್ಮ ಮನೆಯನ್ನು ಸೇರುವ ಸಾಧ್ಯತೆ ಇದೆ. ಅಚಾತುರ್ಯದಿಂದ ಬಳಸಿದ ಔಷಧವು ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುವ ಲಕ್ಷಣವಿದೆ.
  • ಸಿಂಹ
  • ಸದ್ಯದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆಸಕ್ತಿ ನೀಡುವುದು ಉತ್ತಮವಾಗಿ ಕಾಣುತ್ತದೆ. ಹಳೆಯ ಸ್ನೇಹಿತರೊಂದಿಗಿನ ಭೇಟಿ, ಅವರೊಂದಿಗಿನ ಮಾತುಕತೆ, ವ್ಯವಹಾರಗಳ ಬಗ್ಗೆ ಚರ್ಚೆ ಹಾಗೂ ಹಳೆಯ ದಿನದ ನೆನಪುಗಳ ಮೆಲುಕು ನಿಮಗೆ ಹೊಸ ಉತ್ಸಾಹವನ್ನು ಕೊಡಲಿದೆ.
  • ಕನ್ಯಾ
  • ಕಠಿಣವಾದ ಕೆಲಸವೊಂದಕ್ಕೆ ಕೈ ಹಾಕುವ ಮನಸ್ಸಾಗಲಿದೆ, ನಿಧಾನವಾಗಿ ಯೋಚಿಸಿ ನಂತರದಲ್ಲಿ ನಿರ್ಧರಿಸಿ. ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯು ಈ ದಿನದಿಂದಲೇ ಉಂಟಾಗಲಿದೆ.
  • ತುಲಾ
  • ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವ ರೀತಿಯನ್ನು ಒಬ್ಬರಿಗೆ ವಿಸ್ತಾರವಾಗಿ ವಿವರಿಸುವ ಮೂಲಕ ಅದರ ಚೌಕಟ್ಟು ನಿಮಗೆ ದೊರಕುತ್ತದೆ. ರಕ್ತ ಸಂಬಂಧೀ ಖಾಯಿಲೆಯನ್ನು ಹೊಂದಿದವರು ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.
  • ವೃಶ್ಚಿಕ
  • ಸಾಮಾಜಿಕ ಸ್ಥಾನಮಾನಗಳನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ನಿಮಗಿರುವ ಕಟ್ಟುಪಾಡುಗಳು ಹೆಚ್ಚೆಂದು ಎನ್ನಿಸುವುದು. ಅವೆಲ್ಲವೂ ಬಿಡಲಾಗದ ಅನಿವಾರ್ಯವಾಗಿರುತ್ತದೆ. ಮುಖ್ಯವಾದ ವಿಚಾರಗಳನ್ನು ಮರೆಯುವುದರಿಂದಾಗಿ ಕೆಲಸದಲ್ಲಿ ನಿಧಾನಗತಿ ಉಂಟಾಗಬಹುದು.
  • ಧನು
  • ಸ್ವಂತ ಉದ್ಯೋಗಸ್ಥರಿಗೆ ಬಿಡುವಿಲ್ಲದೆ ಕೆಲಸಗಳು ಪೂರ್ತಿಗೊಳಿಸಬೇಕಾದ ಸಂದರ್ಭ ಎದುರಾಗುವುದು. ಕಚ್ಚಾ ತೈಲದ ವಹಿವಾಟನ್ನು ನಡೆಸುವವರಿಗೆ ಅನಿರೀಕ್ಷಿತ ಸವಾಲುಗಳು ಎದುರಾಗುತ್ತದೆ. ಗಣಪತಿಯ ಆರಾಧನೆ ಧೈರ್ಯ ತರುತ್ತದೆ.
  • ಮಕರ
  • ಮಧುರ ಖಾದ್ಯಗಳ ಉತ್ಪಾದಕರಿಗೆ ಬೇಡಿಕೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ನಿರಪರಾಧಿಗಳ ಮೇಲೆ ಅಪರಾಧಗಳನ್ನು ಹೊರಸಿ ಅವರನ್ನು ದುಃಖಗೊಳಿಸುವುದು ಶ್ರೇಯಸ್ಸಲ್ಲ. ಪ್ರಯಾಣದಲ್ಲಿ ಮೃತ್ಯುವಿನ ದರ್ಶನವೇ ಆದಂತಾಗಬಹುದು.
  • ಕುಂಭ
  • ದಿನದ ಮೊದಲ ಭಾಗ ಶ್ರಮ ಭರಿತವಾಗಿದ್ದರೂ ನಂತರ ನಿಮಗೆ ಬಹಳ ವಿರಾಮ ದೊರೆಯುವುದು. ಸಂಶೋಧನಾ ಕ್ಷೇತ್ರದಲ್ಲಿನ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಿರಿ. ಸಂಘ ಸಂಸ್ಥೆಗಳಲ್ಲಿ ಸ್ಥಾನ ಮಾನಗಳು ದೊರೆಯಲಿದೆ.
  • ಮೀನ
  • ಇಂಜಿನಿಯರಿಂಗ್ ಮುಗಿಸುವ ಹಂತದ ವಿದ್ಯಾರ್ಥಿಗಳು ಹೊರದೇಶಕ್ಕೆ ಹೋಗುವುದಿದ್ದಲ್ಲಿ ಆದಷ್ಟು ಬೇಗ ಕೆಲವು ಕೋರ್ಸ್ಗಳನ್ನು ಮಾಡಿಕೊಳ್ಳುವ ಯೋಚನೆ ಮಾಡಿ. ಕೆಲಸದ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಮಾಡುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.