ADVERTISEMENT

ದಿನ ಭವಿಷ್ಯ: ಗುರುವಾರ 28 ಆಗಸ್ಟ್ 2025; ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಆಗಸ್ಟ್ 2025, 23:30 IST
Last Updated 27 ಆಗಸ್ಟ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಅಣ್ಣ-ತಮ್ಮಂದಿರ ವರ್ಗದವರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಸಮೀಪವರ್ತಿಗಳ ಆಶ್ವಾಸನೆ ಹಾಗು ಸಲಹೆ ದೊರೆತು ಶುಭಕಾರ್ಯಗಳತ್ತ ಗಮನ ಹರಿಸುವಿರಿ. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು.
  • ವೃಷಭ
  • ಭಾವನಾತ್ಮಕ ಹಾದಿಯಲ್ಲಿ ಬರುವ ತಾರ್ಕಿಕ ಆಲೋಚನೆಗಳನ್ನು ಬದಿಗೆ ಸರಿಸಿ. ತಾರ್ಕಿಕ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತವಾದ ಸಮಯವಾಗಿದೆ. ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ.
  • ಮಿಥುನ
  • ಗುರಿ ಸಾಧಿಸಲು ಕೆಲ ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ. ಹಣಕಾಸಿನ ಸಂಸ್ಥೆಗೆ ಪಾಲುದಾರರಾಗುವ ಸಾಧ್ಯತೆ ಇದೆ. ಟೆಕ್ಸ್ಟೈಲ್ಸ್ ಉದ್ಯಮದವರಿಗೆ ರಫ್ತು ವ್ಯಾಪಾರಗಳಿಂದ ಬಹಳಷ್ಟು ಹಣ ಹಾಗೂ ವ್ಯಾಪಾರಗಳ ಲಾಭವನ್ನು ಹೊಂದುವರು
  • ಕರ್ಕಾಟಕ
  • ಆರೋಗ್ಯದ ಬಗ್ಗೆ ನಿಗವಹಿಸುವುದು ಅಗತ್ಯ.‌ಶ್ರೀ ಸತ್ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚುವುದರಿಂದ ಪುಣ್ಯಸಂಪಾದನೆಯಾಗಲಿದೆ. ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವ ಸನ್ನಿವೇಶ ಬರಲಿದೆ.
  • ಸಿಂಹ
  • ತಂದೆಯಾಗುವ ಸುದ್ದಿ ಕೇಳಿ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದಂತೆ ಈ ದಿನ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ನಿಮ್ಮ ಮೇಲೆ ಗಣಪತಿಯ ಅನುಗ್ರಹವಿರಲಿದೆ.
  • ಕನ್ಯಾ
  • ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ. ನಿಮ್ಮ ನಂಬಿಕೆಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ. ಸಾಲಬಾಧೆ ಸ್ವಲ್ಪ ಮಟ್ಟಿಗೆ ತೀರಲಿದೆ. ನಿಮ್ಮ ಪೂರ್ವನಿಯೋಜಿತ ಕೆಲಸ ಕಾರ್ಯಗಳು ಸರ್ವರ ಸಹಾಯದಿಂದ ಮಂದಗತಿಯಲ್ಲಿ ಪೂರ್ಣಗೊಳ್ಳುವುದು.
  • ತುಲಾ
  • ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ. ಆದರೇ ಯಾವುದೇ ಕಾರಣಗಳಿಗೂ ಉದ್ಯೋಗ ಬದಲಾವಣೆಯ ಬಗ್ಗೆ ತೀರ್ಮಾನಿಸಬೇಡಿ. ನಿರ್ಧಾರಗಳು ಅಗತ್ಯವಾಗಿ ತೆಗೆದುಕೊಳ್ಳುವ ಸಮಯದಲ್ಲಿ ಜ್ಯೋತಿಷ್ಯರನ್ನು ಸಂಪರ್ಕಿಸಿ.
  • ವೃಶ್ಚಿಕ
  • ನಿಮ್ಮ ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ, ಕೇವಲ ನಿಮ್ಮ ಮೇಲಿನ ನಂಬಿಕೆಯಿಂದಾಗಿ ಮೇಲಧಿಕಾರಿಗಳು ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಳ್ಳುವರು. ಮನೆಯಲ್ಲಿ ಧಾರ್ಮಿಕ ಸಮಾರಂಭಗಳ ಸಿದ್ಧತೆ ನೆಡೆಯಲಿದೆ.
  • ಧನು
  • ವಾಹನದಲ್ಲಿ ಚಲಿಸುವಾಗ ಜಾಗ್ರತೆ ಇರಲಿ. ನಿಮ್ಮನ್ನು ಅಥವಾ ನಿಮ್ಮ ನಾಜೂಕತೆಯ ಕೆಲಸವನ್ನು ಕಂಡು ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ದೃಷ್ಟಿದೋಷಕ್ಕೆ ಒಳಗಾಗುವ ಸಂಭವವಿದೆ.
  • ಮಕರ
  • ವ್ಯವಹಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಅಂತರಾಜ್ಯದ ಅತಿ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ನಿಮ್ಮ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು.
  • ಕುಂಭ
  • ಹಿರಿಯರ ಮಾರ್ಗದರ್ಶನದಂತೆ ನಡೆದು ಕೆಲಸಗಳನ್ನು ಮಾಡುವುದರಿಂದ ಅಡೆತಡೆಗಳು ಇರುವುದಿಲ್ಲ. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳುವ ಬಗ್ಗೆ ಪ್ರಯತ್ನಿಸಿ. ಅನಿರೀಕ್ಷಿತವಾಗಿ ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಬೇಕಾಗುವುದು.
  • ಮೀನ
  • ಅತಿಯಾಗಿ ಒತ್ತಡ ತರುವ ಕೆಲಸಗಳಿಂದ ದೂರ ಉಳಿಯುವ ಯೋಚನೆಯು ಸರಿಯಾಗಿರುವುದು. ದಿನಸಿ ವರ್ತಕರಿಗೆ ಉತ್ತಮ ಮಾರಾಟದೊಂದಿಗೆ ಲಾಭವೂ ಇರುವುದು. ಭೂಮಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.