ದಿನ ಭವಿಷ್ಯ: ಈ ರಾಶಿಯವರಿಗೆ ಸಂಬಂಧ ಹಾಳು ಮಾಡುವಂಥ ಜನ ಸಿಗಲಿದ್ದಾರೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ಏಪ್ರಿಲ್ 2025, 0:25 IST
Last Updated 28 ಏಪ್ರಿಲ್ 2025, 0:25 IST
ದಿನ ಭವಿಷ್ಯ
ಮೇಷ
ಕಳೆದು ಹೋಗಿರುವ ಒಡವೆ ಸಿಗುವ ಸಂಭವವಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವುದು. ಆರ್ಥಿಕವಾಗಿ ಮುಂದುವರಿಯುವಿರಿ. ಪರಿಚಿತರ ಸಹಾಯದಿಂದ ಗುತ್ತಿಗೆ ಕೆಲಸ ನಿಮ್ಮದಾಗಲಿದೆ.
ವೃಷಭ
ಸಂಬಂಧ ಹಾಳು ಮಾಡುವಂಥ ಜನ ಸಿಗಲಿದ್ದಾರೆ. ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿರ್ಧಾರವು ಬಹಳ
ಅನುಕೂಲಕರವಾಗುವುದು.
ಮಿಥುನ
ಲೇವಾದೇವಿ ವ್ಯವಹಾರಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿ. ಕಬ್ಬಿಣ ಮಾರಾಟಗಾರರಿಗೆ ಉತ್ತಮ ದಿನ. ಅತ್ಯಂತ ಸಂತೋಷದ ವಾತಾವರಣ ಸಿಗಲಿದೆ. ದೇಹದ ಎಲ್ಲ ನೋವುಗಳು ಮರೆಯಾಗಲಿವೆ.
ಕರ್ಕಾಟಕ
ಮಾಡುವ ಕೆಲಸದಿಂದ ಗುಂಪಿನಲ್ಲಿ ಗುರುತಿಸುವ ವ್ಯಕ್ತಿಯಾಗುವ ಲಕ್ಷಣ ಕಾಣುತ್ತಿದೆ. ಹೊಲದ ಅಥವಾ ಜಮೀನಿನ ನಿರಂತರ ಕೆಲಸಕ್ಕೆ ಆಳನ್ನು ಗೊತ್ತು ಮಾಡಿಕೊಳ್ಳುವಿರಿ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ.
ಸಿಂಹ
ಬೋಧನೆಯಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ನಿಮಗೆ ಅದರಲ್ಲೂ ಗಣಿತ ವಿಷಯದವರಿಗೆ ಶಿಷ್ಯರ ಸಂಖ್ಯೆ ವೃದ್ಧಿಯಾಗಲಿದೆ. ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ.
ಕನ್ಯಾ
ಯೋಜನೆಗಳು ಕಾರ್ಯಗತಗೊಳ್ಳಲು ಚಾಣಾಕ್ಷತನ ಬೇಕು. ಮನುಷ್ಯ ಪ್ರಯತ್ನದ ಜತೆ ಮಹಾಗಣಪತಿಯ ಮೊರೆ ಹೋಗುವುದರಿಂದ ಕಾರ್ಯಸಿದ್ಧಿಯಾಗಲಿದೆ.
ತುಲಾ
ಭವಿಷ್ಯದ ಯೋಜನೆಗಳಿಗೆ ನೆರವಾಗಬಲ್ಲಂಥ ವ್ಯಕ್ತಿಯನ್ನು ಭೇಟಿಯಾಗುವ ಸಂಭವವಿದೆ. ಹೊಸ ಸ್ಥಳದಲ್ಲಿ ಹೊಸ ಜೀವನ ಪ್ರಾರಂಭಿಸಲು ನಿಶ್ಚಯಿಸುವಿರಿ. ಸಾಧ್ಯವಾದಷ್ಟೂ ಉಳಿತಾಯ ಮಾಡುವ ಪ್ರಯತ್ನ ನಡೆಸಿ.
ವೃಶ್ಚಿಕ
ಆತ್ಮೀಯತೆಯ ಸಂಬಂಧವೊಂದನ್ನು ಹುಟ್ಟು ಹಾಕಲು ಹೃದಯದ ಮಾತುಗಳಿಗೆ ಬೆಲೆ ಕೊಡುವಿರಿ. ರಾಜಕೀಯ ಕ್ಷೇತ್ರದಲ್ಲಿ ಪ್ರಭಾವ ಹೆಚ್ಚಲಿದೆ. ಜಾಹೀರಾತು ಸಂಸ್ಥೆಗಳವರಿಗೆ ಉತ್ತಮವಾಗಿರುವುದು.
ಧನು
ಹಂತ ಹಂತವಾಗಿ ಆಸೆಗಳು ಈಡೇರಲಿವೆ. ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಎಂಜಿನಿಯರ್‌ಗಳ ನಿರುದ್ಯೋಗದ ಸಮಸ್ಯೆ ಸ್ನೇಹಿತನ ಪ್ರಯತ್ನ ಬಲದಿಂದ ದೂರವಾಗಲಿದೆ.
ಮಕರ
ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ವಾಹನಗಳ, ಯಂತ್ರೋಪಕರಣಗಳ ಬಿಡಿ ಭಾಗ ಮಾರಾಟಗಾರರಿಗೆ ಬಿಡುವಿಲ್ಲದ ದಿನ. ಸ್ಥಿರ ಆಸ್ತಿ ಖರೀದಿಸುವ ಬಗ್ಗೆ ಯೋಚನೆ ಮಾಡಲಿದ್ದೀರಿ.
ಕುಂಭ
ಅರಸಿ ಬಂದ ಉದ್ಯೋಗವನ್ನು ದೂರಮಾಡುವುದು ಮೂರ್ಖತನ. ಆಹಾರ ಶೈಲಿಯು ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ನಿರುತ್ಸಾಹಿಯಾಗಿರುತ್ತೀರಿ.
ಮೀನ
ಈ ದಿನ ವ್ಯವಸ್ಥಿತವಾಗಿ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿರುವ ಯೋಜನೆಗಳು ಪೂರ್ಣಗೊಳ್ಳಲಿವೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಪ್ರಾಪ್ತಿಯಾಗುತ್ತವೆ.