ADVERTISEMENT

ದಿನ ಭವಿಷ್ಯ: ಇತರರನ್ನು ತಿರಸ್ಕಾರದಿಂದ ನೋಡದಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ನವೆಂಬರ್ 2025, 21:47 IST
Last Updated 3 ನವೆಂಬರ್ 2025, 21:47 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ದಿನಸಿ ವಸ್ತುಗಳ ಖರೀದಿಯನ್ನು ದೊಡ್ಡ ಮಟ್ಟದಲ್ಲಿ ಮಾಡುವಿರಿ. ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿ ಕೇಳುವಿರಿ. ಆಕಸ್ಮಿಕ ಪ್ರಯಾಣದ ಸಾಧ್ಯತೆಯಿದೆ.
  • ವೃಷಭ
  • ವೃತ್ತಿಯಲ್ಲಿದ್ದ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಸಿಕ್ಕ ಗೆಲುವಿನಿಂದ ಹೆಚ್ಚಿನ ತೃಪ್ತಿ, ಸಂತೋಷ ಉಂಟಾಗಲಿದೆ. ಮೊಬೈಲ್ ಬಳಕೆಯು ಯೋಚನೆಗಳಿಗೆ ಕಾರಣವಾಗುತ್ತದೆ. ಭಕ್ತಿಯಿಂದ ಈಶ್ವರನನ್ನು ಆರಾಧಿಸಿ.
  • ಮಿಥುನ
  • ತಾಂತ್ರಿಕ ವಿದ್ಯೆಯಲ್ಲಿ ಯಶಸ್ಸನ್ನು ಹೊಂದುವ ಎಲ್ಲಾ ಲಕ್ಷಣಗಳೂ ಕಂಡರೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಪರಿಸ್ಥಿತಿ ಎದುರಾಗಬಹುದು. ಸಂಗೀತ-ನಾಟ್ಯ ಸಾಧಕರಿಗೆ ವೇದಿಕೆ ದೊರೆತು ವಿದ್ವತ್ ಪ್ರದರ್ಶನವಾಗುವುದು.
  • ಕರ್ಕಾಟಕ
  • ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ನಂತರದಲ್ಲಿ ಷೇರುಗಳನ್ನು ಕೊಳ್ಳುವ ಯೋಜನೆಗೆ ಮುಂದಾಗಿ. ವರ್ತಮಾನ ಸ್ಥಿತಿ ಅರಿತು ವ್ಯವಹಾರ ಮಾಡಿ. ಇತರರನ್ನು ತಿರಸ್ಕಾರದಿಂದ ನೋಡದಿರಿ.
  • ಸಿಂಹ
  • ಬಹಳ ದಿನಗಳಿಂದ ನಿರೀಕ್ಷಿಸಿದ ರೀತಿಯಲ್ಲಿ ಉದ್ಯೋಗ ಸಿಕ್ಕದಿದ್ದರೂ, ಸಣ್ಣ ಮಟ್ಟಿನ ಉದ್ಯೋಗ ಸಿಕ್ಕಿರುವುದು ಸಂತೋಷ ಪಡುವ ವಿಚಾರ. ಹತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುವಂತವರಿಗೆ ಉಷ್ಣದ ಸಮಸ್ಯೆ ಕಾಡಬಹುದು.
  • ಕನ್ಯಾ
  • ಸ್ನೇಹಿತನ ಸಹಾಯದಿಂದ ಹಲವಾರು ವಿಚಾರಗಳಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ರಕ್ಷಣೆಯನ್ನು ಬಯಸಿ ಬಂದ ಸ್ನೇಹಿತನಿಗೆ ಕೈಲಾದ ಸಹಾಯ ಮಾಡಿ. ಒಳ್ಳೆಯದಾಗುತ್ತದೆ.
  • ತುಲಾ
  • ರಾಜಕಾರಣಿಗಳಿಗೆ, ಸರ್ಕಾರಿ ನೌಕರರಿಗೆ ಸುಯೋಗವೆಂದು ಹೇಳ ಬಹುದು. ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಕಡಿಮೆ ಪ್ರಯತ್ನದಿಂದ ಅಧ್ಯಾಪಕ ವೃತ್ತಿ ದೊರೆಯುವ ಸಂಭವವಿದೆ. ಖಾಸಗಿ ನೌಕರರಿಗೆ ಕೆಲಸವಿರುವುದು.
  • ವೃಶ್ಚಿಕ
  • ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ನಿಮಗೆ ಪ್ರತಿ ಬಾರಿಯ ಶುಭಕಾರ್ಯಗಳು ತಪ್ಪಿ ಹೋಗುವುದು ದುಃಖ ತರುವುದು. ಸ್ನೇಹಿತನಿಗಾಗಿ ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಬರುವುದು.
  • ಧನು
  • ಅನಗತ್ಯ ವಿಷಯಗಳಿಂದ ದೂರವಿರುವುದು ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಲು ಅನುಕೂಲ. ವೃತ್ತಿಯಲ್ಲಿ ನಿಷ್ಠರಾಗಿರಿ. ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕಂತಹ ಫಲ ದೊರೆಯುವುದು.
  • ಮಕರ
  • ಮಗಳ ಮದುವೆ ವಿಷಯವನ್ನು ಆಕೆಯ ಅನುಮತಿ ಪಡೆದು ಮಾತ್ರವೇ ಮನೆಯವರ ಜೊತೆ ಪ್ರಸ್ತಾಪಿಸಿ. ಕೋರ್ಟಿನ ಕೆಲಸಗಳನ್ನು ತ್ವರಿತಗತಿಯಲ್ಲಿ ನಡೆಸಿ ಕೊಡುವಂತೆ ವಕೀಲರಲ್ಲಿ ಕೇಳಿಕೊಳ್ಳುವಿರಿ
  • ಕುಂಭ
  • ವೈದ್ಯರಿಗೆ ವೃತ್ತಿಯಲ್ಲಿ ಆಶ್ಚರ್ಯಕರ ಘಟನೆ ನಡೆದು ದೇವರಿದ್ದಾನೆ ಎಂಬ ನಂಬಿಕೆ ಅನುಭವಕ್ಕೆ ಬರುವಂತಾಗುವುದು. ಸಹೋದ್ಯೋಗಿಗಳೊಡನೆ ಪ್ರೀತಿಯಿಂದ ವರ್ತಿಸುವುದರಿಂದ ಕೆಲಸ ಸರಾಗವಾಗಿ ಸಾಗಲಿದೆ.
  • ಮೀನ
  • ಯಾವ ಒತ್ತಡಗಳಿಗೂ, ಯಾರ ದಬ್ಬಾಳಿಕೆಗೂ ಒಳಗಾಗದೆ ಸ್ವತಂತ್ರವಾಗಿರಲು ಬಯಸುವಿರಾದರೂ ಸಾಧ್ಯವಾಗುವುದಿಲ್ಲ. ಮನಸ್ಸಿಗೆ ಅಸಮಾಧಾನ ಆಗುವಂತಹ ಹಲವು ಘಟನೆ ಬಾಳಲ್ಲಿ ನಡೆಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.