ADVERTISEMENT

ದಿನ ಭವಿಷ್ಯ: ಭಾನುವಾರ, 28 ಮೇ 2023

ಪ್ರಜಾವಾಣಿ ವಿಶೇಷ
Published 27 ಮೇ 2023, 18:30 IST
Last Updated 27 ಮೇ 2023, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮನೆಯಲ್ಲಿ ಮಾಡುವ ಅಡಿಗೆಯನ್ನು ಹೊರತು ಪಡಿಸಿ ಬೇರೆಯ ಆಹಾರವನ್ನು ತಿನ್ನುವ ಮನಸ್ಸಾಗುತ್ತದೆ. ಯಾತ್ರೆಯನ್ನು ಮಾಡುತ್ತಿರುವವರಿಗೆ ಜೊತೆಗಾರರಿಂದ ಸ್ಥಳಪುರಾಣ ತಿಳಿಯುತ್ತದೆ. ವ್ಯಸನಗಳಿಂದ ಬೇಗನೆ ಮುಕ್ತಿ ಪಡೆಯುವಿರಿ.
  • ವೃಷಭ
  • ಮಗಳಿಗೆ ಹೆಸರಿಡುವ ವಿಷಯವಾಗಿ ಹಲವಾರು ಚರ್ಚೆ ಆಗುತ್ತದೆ. ಶುಭ ಸಮಾರಂಭದ ದಿನಕ್ಕಾಗಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುವಿರಿ. ಬರುವ ಸಂಬAಧಿಗಳು ನಿಮ್ಮ ಆದರಾತಿಥ್ಯದಿಂದ ಸಂತುಷ್ಟರಾಗುವರು.
  • ಮಿಥುನ
  • ನಿಮ್ಮ ಸಾಮರ್ಥ್ಯದ ಅರಿವಿಲ್ಲದೆ ನಿಮ್ಮ ಬಗ್ಗೆ ಲಘುವಾಗಿ ಮಾತನಾಡಿದವರಿಗೆ ಸರಿಯಾದ ಪಾಠವನ್ನು ಕಲಿಸುವಿರಿ. ಹಿರಿಯಲ್ಲಿ ನಿಮ್ಮ ತಪ್ಪಿಲ್ಲದಿದ್ದರು ಸಹ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮೆಯನ್ನು ಕೇಳಿ. ಮೀನು ಮಾರಾಟಗಾರರು ಲಾಭ ಪಡೆಯುವಿರಿ.
  • ಕರ್ಕಾಟಕ
  • ವ್ಯವಹಾರದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮವಾದ ಸಂಬAಧವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಅನಿರೀಕ್ಷಿತವಾಗಿ ನಿಮ್ಮ ಮನಸ್ಸಿನಲ್ಲಿದ್ದಂತಹ ಅಸಮಾಧಾನಗಳೆಲ್ಲವು ಮಾತಿನಲ್ಲಿ ಹೊರ ಬರುವವು.
  • ಸಿಂಹ
  • ನಿಮ್ಮ ಹಲವು ದಿನಗಳ ಪ್ರತೀಕ್ಷೆಯ ಮನೋಭಿಲಾಷೆಯು ಪೂರ್ಣಗೊಳ್ಳುವ ದಿನ ಇದಾಗಲಿದೆ. ದೀರ್ಘವಾದ ಪ್ರಯಾಣವನ್ನು ಮುಗಿಸಿ ಮನೆಗೆ ಮರಳಲಿದ್ದೀರಿ. ಅನುಭವಗಳ ಕಥೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದೀರಿ.
  • ಕನ್ಯಾ
  • ಅದ್ದೂರಿಯ ಮದುವೆಯಲ್ಲಿ ನಿಮ್ಮ ಮಕ್ಕಳು ಮಾಡಿದ ಖರ್ಚು ವೆಚ್ಚಗಳು ನಿಮಗೆ ದುಂದುವೆಚ್ಚದAತೆ ಕಾಣುತ್ತದೆ. ಮುಕ್ತವಾದ ಭಾವನೆಯಿಂದ ನೀವಾಡಿದ ಮಾತುಗಳು ಉಳಿದವರಿಗೆ ಅಧಿಕ ಪ್ರಸಂಗದAತೆ ತೋರುವುದರಲ್ಲಿ ಸಂಶಯವಿಲ್ಲ.
  • ತುಲಾ
  • ಕೆಲವು ಸಮಸ್ಯೆಗಳನ್ನು ನಿಮ್ಮ ವಯಸ್ಕರಲ್ಲಿಯೇ ಹೇಳುವುದಕ್ಕಿಂತ ಹಿರಿಯರಲ್ಲಿ ಹೇಳುವುದರಿಂದಾಗಿ ಸಮಾಧಾನವಾಗುವುದು. ಯಾವುದೇ ವಿಷಯವನ್ನಾಗಲಿ ಅಧಿಕಾರಿಗಳಿಂದ ಒಂದಕ್ಕಿAತ ಹೆಚ್ಚು ಬಾರಿ ಹೇಳಿಸಿಕೊಳ್ಳಬೇಡಿ.
  • ವೃಶ್ಚಿಕ
  • ಚಕ್ರವ್ಯೂಹದಲ್ಲಿ ಸಿಲುಕಿದ ನಿಮಗೆ ಅದನ್ನು ಭೇದಿಸುವ ಉಪಾಯವು ಮಿತ್ರರಿಂದ ಸಿಗುತ್ತದೆ. ಮಧ್ಯವರ್ತಿಗಳ ಅತಿ ಆಸೆಯಿಂದ ರೈತರಾದ ನಿಮಗೆ ಲಾಭವಿಲ್ಲವಾಗುವ ಕಾರಣ ರೈತ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿ.
  • ಧನು
  • ಅತ್ಯಂತ ಆತ್ಮೀಯರಿಂದಲೇ ಭೂಮಿಯ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಬಹಳ ಕಷ್ಟದಿಂದ ಸಂಪಾದನೆ ಮಾಡಿದ ಹಣವನ್ನು ಸರಿಯಾದ ವಿನಿಯೋಗಕ್ಕಾಗಿ ಬಹಳವಾಗಿ ಯೋಚಿಸುವಿರಿ. ವಾತಕ್ಕೆ ಔಷಧಿ ತೆಗೆದುಕೊಳ್ಳಿರಿ.
  • ಮಕರ
  • ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಶಯವನ್ನು ಬಗೆಹರಿಸುವುದಾದರೆ ಮನೆಯಲ್ಲಿ ಮಗುವಿನ ಸಂಶಯನ್ನು ಬಗೆ ಹರಿಸುವುದರಲ್ಲಿ ನಿಮ್ಮ ದಿನವನ್ನು ಕಳೆಯುವಿರಿ. ಮಿತ್ರವರ್ಗದಿಂದ ದುಃಖದ ಸಮಾಚಾರಗಳನ್ನು ಕೇಳಬೇಕಾಗಬಹುದು.
  • ಕುಂಭ
  • ಹೊಸ ಹೊಸ ಮನೆ ಕೆಲಸಗಳ ಜವಬ್ದಾರಿಯನ್ನು ನಿಮ್ಮದಾಗಿ ಮಾಡಿಕೊಳ್ಳುತ್ತಿರುವ ಕಾರಣ ಬಿಡುವಿಲ್ಲದ ದುಡಿಮೆಯ ದಿನಗಳು ನಿಮ್ಮದಾಗಲಿದೆ. ತಿಳಿಯದ ವಿಷಯಗಳ ಬಗ್ಗೆ ಅನಾವಶ್ಯಕವಾಗಿ ಸಹೋದರರ ಜೊತೆ ವಾದಿಸಬೇಡಿ.
  • ಮೀನ
  • ಬದಲಾವಣೆಯ ಅಲೆಯನ್ನು ನಿರೀಕ್ಷಿಸುತ್ತಿರುವ ನೀವು ಸಣ್ಣ ಸಣ್ಣ ವಿಷಯಗಳಲ್ಲಿ ಉತ್ತಮ ರೀತಿ ನೀತಿಗಳನ್ನು ಅಳವಡಿಸಿಕೊಳ್ಳುವಿರಿ. ಗಂಡ ಹೆಂಡತಿಯರ ವಾದ ವಿವಾದದಲ್ಲಿ ಮಧ್ಯ ಪ್ರವೇಶಸುವುದು ಒಳ್ಳೆಯ ನಡೆಯಲ್ಲ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.