ದಿನ ಭವಿಷ್ಯ: ಶನಿವಾರ 30 ಆಗಸ್ಟ್ 2025; ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಆಗಸ್ಟ್ 2025, 0:02 IST
Last Updated 30 ಆಗಸ್ಟ್ 2025, 0:02 IST
ಮೇಷ
ಅಡಿಕೆ ಮತ್ತು ತೆಂಗು ಬೆಳೆಗಳು ನಿರೀಕ್ಷಿಸಿದ ಲಾಭವನ್ನು ತರಲಿವೆ. ಕಾರ್ಯಕ್ಷೇತ್ರದಲ್ಲಿ ಒತ್ತಡ ತೋರಿಬಂದರೂ ಅಭಿವೃದ್ಧಿದಾಯಕ ಬೆಳವಣಿಗೆ ಹರ್ಷ ತರವುದು. ಉದಾಸೀನತೆ ತೋರಬೇಡಿ.
ವೃಷಭ
ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರೋತ್ಸಾಹ ಸಿಗಲಿದೆ. ಆಸ್ತಿ ಹಂಚಿಕೆಯ ವಿಚಾರದಲ್ಲಿ ಮಗನೊಡನೆ ಮಾತುಕತೆ ನಡೆಯುವ ಸಂಭವವಿದೆ. ಯೋಗ್ಯ ವಯಸ್ಕರರಿಗೆ ವಿವಾಹ ಭಾಗ್ಯ ಒದಗಿ ಬರುವುದು.
ಮಿಥುನ
ದಿನಸಿ ವ್ಯಾಪಾರದಲ್ಲಿ ಅತೀವ ಆಸಕ್ತಿ ಮೂಡುತ್ತದೆ. ಲಾಭ ಹೊಂದುವಿರಿ. ದಿನನಿತ್ಯದ ಜೀವನಕ್ಕೆ ಹಣಕಾಸಿನ ಕೊರತೆ ಇರುವುದಿಲ್ಲ. ವೈವಾಹಿಕ ಜೀವನ ಸುಧಾರಿಸಲಿದೆ.
ಕರ್ಕಾಟಕ
ಕ್ರೀಡಾಪಟುಗಳ ಅಥವಾ ಸಂಗೀತಗಾರರ ಅಭ್ಯಾಸದ ಕೊರತೆಯು ವೈಫಲ್ಯಕ್ಕೆ ಕಾರಣವಾಗುವುದು. ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಸಂತಾನ ಭಾಗ್ಯದ ಸುದ್ದಿ ಕೇಳುವಿರಿ.
ಸಿಂಹ
ಸಾಲ ಅಥವಾ ಸಹಾಯದ ರೂಪದಲ್ಲಿ ಹಣ ದೊರೆಯಲಿದೆ. ವಕೀಲರಿಗೆ ಮಾತಿನಲ್ಲಿ ಎದುರಾಳಿಯನ್ನು ಕಟ್ಟಿಹಾಕುವ ಅವಕಾಶ ಸಿಗಲಿದೆ. ಒಂದು ಸಂಸ್ಥೆಯ ಜವಾಬ್ದಾರಿ ನೋಡಲು ಒತ್ತಡಗಳು ಬರಲಿವೆ.
ಕನ್ಯಾ
ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ಪಡೆಯಲು ಪರಿಶ್ರಮ ಜತೆಯಲ್ಲಿ ಬುದ್ಧಿವಂತಿಕೆ ಬಹುಮುಖ್ಯ. ಯೋಜಿತ ಕೆಲಸಗಳು ವಿಳಂಬವಾಗಬಹುದು. ಸ್ತ್ರೀಯರಿಗೆ ಅಭಿವೃದ್ಧಿಯಾಗಲಿದೆ.
ತುಲಾ
ಸಕ್ರಿಯತೆ ಹಾಗೂ ಕಾರ್ಯಮಗ್ನತೆಯಿಂದ ಯೋಜನೆಗಳು ಮುಕ್ತಾಯ ಹಂತಕ್ಕೆ ತಲುಪಲಿವೆ. ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ ಲಾಭ ಇರಲಿದೆ. ಓದಿನಲ್ಲಿ ಅತೀವ ಆಸಕ್ತಿ ಇರುವುದು.
ವೃಶ್ಚಿಕ
ಸತ್ಯ, ಧರ್ಮ, ನೀತಿ, ನಡವಳಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟವೆಂದು ತೀರ್ಮಾನಿಸಬೇಡಿ. ವಸ್ತ್ರ ವಿನ್ಯಾಸದಲ್ಲಿ ವಿಶೇಷ ಪರಿಣತಿಯನ್ನು ಪಡೆದುಕೊಳ್ಳುವಿರಿ.
ಧನು
ಆರಂಭಿಸಿದ ವೈಯಕ್ತಿಕ ಕಾರ್ಯ ಆರ್ಥಿಕ ಸಮಸ್ಯೆಗಳಿಂದ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ. ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಮಹಾಗಣಪತಿ ಅಭಿವೃದ್ಧಿಯ ದಾರಿಯನ್ನು ತೋರಿಸುತ್ತಾನೆ.
ಮಕರ
ಸರ್ಕಾರಿ ಕೆಲಸಗಳು ಸುಗಮವಾಗಿ ಸಾಗಲಿವೆ. ಮಗನ ಉದ್ಯೋಗ ನಿಮಿತ್ತದ ವಿದೇಶ ಪ್ರಯಾಣ ಸಂತೋಷವನ್ನು ಉಂಟುಮಾಡುವುದು. ಸ್ವಂತ ಮನೆ ನಿರ್ಮಾಣವನ್ನು ಮಾಡಲು ಅಥವಾ ಕೊಳ್ಳಲು ಸುಸಮಯ.
ಕುಂಭ
ಉದ್ಯೋಗದಲ್ಲಿ ಎದುರಾಗುವ ಸಂಕಷ್ಟದಿಂದ ಹಿಮ್ಮುಖ ಚಲನೆಯ ತೀರ್ಮಾನವನ್ನು ತೆಗೆದುಕೊಳ್ಳಬೇಡಿ. ದೃಢಚಿತ್ತದಿಂದ ಮುಂದುವರಿಯಿರಿ. ಹೂಡಿಕೆಗಾಗಿ ನೂತನ ಭೂ ಖರೀದಿಯ ಚಿಂತನೆ ನಡೆಸಬಹುದು.
ಮೀನ
ಯೋಚಿಸಿದ ವಿಶೇಷ ಕಾರ್ಯಗಳಿಗೆ ಪತ್ನಿ ಮಕ್ಕಳಿಂದ ಸಹಕಾರ ದೊರೆತು ಕಾರ್ಯ ನೆರೆವೇರುವುದು. ಸಂಘ-ಸಂಸ್ಥೆಗಳಿಗೆ ಪದಾಧಿಕಾರಿಯಾಗುವ ಅವಕಾಶ ಸಿಗಲಿದೆ. ಮಿತ್ರರ ಭೇಟಿಯಿಂದ ಸಂತೋಷ ಹೆಚ್ಚುವುದು.