ADVERTISEMENT

ದಿನ ಭವಿಷ್ಯ: ಈ ರಾಶಿಯವರ ಸಾಂಸಾರಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ

ಗುರುವಾರ, 25 ಏಪ್ರಿಲ್ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಏಪ್ರಿಲ್ 2024, 18:44 IST
Last Updated 24 ಏಪ್ರಿಲ್ 2024, 18:44 IST
   
ಮೇಷ
  • ಎಷ್ಟು ಜಾಗರೂಕತೆಯಿಂದ ಕೆಲಸ ಮಾಡಿದರೂ ಮೇಲಿನ ಅಧಿಕಾರಿಗಳ ಹದ್ದಿನ ಕಣ್ಣಿಗೆ ನಿಮ್ಮ ಕೆಲವು ದೋಷಗಳು ಕಾಣುತ್ತವೆ. ನಿಮ್ಮ ಸ್ನೇಹಿತನಿಗಾದ ವಾಹನ ಅಪಘಾತವು ನಿಮ್ಮನ್ನು ಖೇದವಾಗಿಸುವುದು.
  • ವೃಷಭ
  • ಯಾವುದೋ ಕಾರಣದಿಂದ ದೂರವಾದ ಸ್ನೇಹಿತ ಮತ್ತೆ ನಿಮ್ಮ ಪ್ರಾಣ ಸ್ನೇಹಿತನಾಗಿ ಮರಳಲಿದ್ದಾನೆ. ಉನ್ನತ ವಾಣಿಜ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ಯಶಸ್ಸಿನ ಸಾಧ್ಯತೆ ಇದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
  • ಮಿಥುನ
  • ನಿಮ್ಮ ತಪ್ಪುಗಳಿಗೆ ಕಾರಣವನ್ನು ಹುಡುಕುವುದು ಹಾಗೂ ಇತರರಿಗೆ ಕಾರಣವನ್ನು ಕೊಡುವುದರಲ್ಲಿ ಹುರುಳಿಲ್ಲ. ಅಧಿಕಾರಿಗಳ ಮುಖಸ್ತುತಿಯಿಂದ ನಿಮ್ಮ ಕೆಲಸ ಆಗುತ್ತದೆ ಎಂದು ಭಾವಿಸಿದ್ದರೆ ಆ ಯೋಚನೆಯನ್ನು ಕೈಬಿಡಿ.
  • ಕರ್ಕಾಟಕ
  • ಪ್ರತಿದಿನವೂ ಭಕ್ತಿಯಿಂದ ದೇವರನ್ನು ನೀವು ಸ್ತುತಿಸುವುದರಿಂದ ಇಂದು ನಿಮಗೆ ಎದುರಾಗಲಿರುವ ಸಣ್ಣ ಪುಟ್ಟ ಸಮಸ್ಯೆಗಳು ಸರಾಗವಾಗಿ ನಿವಾರಣೆಯಾಗಲಿದೆ. ನಿಮಗೆ ಸಂತಸ ತರುವ ಸಂಗತಿಗಳಿಗೆ ಇಂದು ಕೊರತೆ ಇಲ್ಲ.
  • ಸಿಂಹ
  • ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸಹವರ್ತಿಗಳ ಅಭಿಪ್ರಾಯ ಗಳನ್ನು ಪಡೆದುಕೊಳ್ಳಿ. ಎಲ್ಲದರಿಂದಲೂ ಧನಲಾಭವನ್ನು ಮಾತ್ರ ಯೋಚಿಸಬೇಡಿ. ಸಹಾಯ ಮಾಡುವ ಮನಸ್ಥಿತಿಯನ್ನೂ ಬೆಳೆಸಿಕೊಳ್ಳಿ.
  • ಕನ್ಯಾ
  • ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ದೀರ್ಘವಾದ ಶ್ವಾಸವನ್ನು ಬಿಡುವಂತಹ ಸಂದರ್ಭ ಎದುರಾಗಲಿದೆ. ಇಂದು ನೀವು ಭೇಟಿ ಮಾಡುವಂಥ ವ್ಯಕ್ತಿಯ ಸಾಂಗತ್ಯವು ಸಾರ್ಥಕವೆಂದು ಎನಿಸುವುದು.
  • ತುಲಾ
  • ಮನಃಶಾಸ್ತ್ರಜ್ಞರು ರೋಗಿಗಳೊಂದಿಗೆ ವ್ಯವಹರಿಸುವುದು ಕಷ್ಟಕರ ವಾಗಿರುತ್ತದೆ. ತಿಳಿದವರ ಮಾರ್ಗದರ್ಶನದಿಂದ ಮುನ್ನಡೆದರೆ ಎಲ್ಲವೂ ಪರಿಹಾರವಾಗುವುದು. ಅನಿರೀಕ್ಷಿತ ಪ್ರಯಾಣ ಬೆಳಸಬೇಕಾಗುವುದು.
  • ವೃಶ್ಚಿಕ
  • ಉನ್ನತ ವ್ಯಾಸಂಗಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಮಂದಗತಿ ನಡೆ ಇದ್ದರೂ ಅಭಿವೃದ್ಧಿಯಂತೂ ಖಚಿತವಾಗಿ ಅನುಭವಕ್ಕೆ ಬರುವುದು. ಸಾಂಸಾರಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ.
  • ಧನು
  • ನಿಮ್ಮ ಉಡುಗೆ ತೊಡುಗೆ ಮೇಲೆ ಅತಿಯಾದ ಗಮನ ಕೊಡುವುದರಿಂದ ಸಮಯದ ಅಭಾವ ಉಂಟಾಗಬಹುದು. ನಿಮ್ಮ ದೇಹದಲ್ಲಾಗುವ ಅನಿರೀಕ್ಷಿತ ಬದಲಾವಣೆಗಳು ನಿಮ್ಮ ಆತಂಕಗಳಿಗೆ ಕಾರಣವಾಗುವಂತಹ ಸಾಧ್ಯತೆ ಇದೆ.
  • ಮಕರ
  • ಹಣ್ಣಿನ ತೋಪನ್ನು ಮಾಡಲು ಇಚ್ಚಿಸುತ್ತಿರುವ ಕೃಷಿಕರಿಗೆ ನಿಮ್ಮ ಹಣದ ಜೊತೆಗೆ ದಾನಿಗಳ ಹಣವೂ ಕೈಸೇರುವ ಸಾಧ್ಯತೆ ಇದೆ. ದೇವತಾ ಅನುಗ್ರಹ ಉತ್ತಮವಿದ್ದು ಬಂದ ಕಷ್ಟ-ನಷ್ಟಗಳು ಉಪಶಮನಗೊಳ್ಳುತ್ತವೆ.‌
  • ಕುಂಭ
  • ನಿಮ್ಮ ಸಂಭಾಷಣೆಯಲ್ಲಿನ ಉತ್ತಮ ಪದಗಳ ಬಳಕೆಯು ನಿಮ್ಮ ಮುಂದಿರುವವರನ್ನು ಆಕರ್ಷಿಸಿ ಲಾಭವನ್ನುಂಟುಮಾಡುತ್ತದೆ. ಅಪರಿಚಿತ ವ್ಯಕ್ತಿಯ ಕರೆಯೊಂದು ಇಂದು ನಿಮ್ಮ ಮನಸ್ಸನ್ನು ತಳಮಳಗೊಳಿಸುತ್ತದೆ.
  • ಮೀನ
  • ನಿಮ್ಮ ಜೀವನ ಸಂಪೂರ್ಣವಾಗಿ ಪೋಷಕರ ಮೇಲೆ ಅವಲಂಬಿತ ವಾಗಿರುವುದರಿಂದ ಯಾವುದೇ ಸಸಾರದ ಮಾತುಗಳಿಗೂ ಆಸ್ಪದ ಬೇಡ. ಬೆನ್ನು ನೋವು ಹೋಗಲಾಡಿಸಿಕೊಳ್ಳುವ ಸಲುವಾಗಿ ಯೋಗಾಭ್ಯಾಸ ಮಾಡಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.