ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಕ್ಲಿಷ್ಟಕರ ಸವಾಲು ಎದುರಾಗಲಿದೆ

ಶನಿವಾರ, 27 ಏಪ್ರಿಲ್ 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಏಪ್ರಿಲ್ 2024, 19:04 IST
Last Updated 26 ಏಪ್ರಿಲ್ 2024, 19:04 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ತಲೆನೋವಿನಂಥ ಕಾಯಿಲೆಗಳು ಬರಬಹುದಾದ ಸಾಧ್ಯತೆ ಇದ್ದು, ಕಂಪ್ಯೂಟರ್, ಟಿವಿ ಮತ್ತು ಮೊಬೈಲ್ ನೋಡುವುದನ್ನು ಆದಷ್ಟು ಕಡಿಮೆ ಮಾಡಿ. ವೃತ್ತಿ ಜೀವನದಲ್ಲಿ ಕ್ಲಿಷ್ಟಕರವಾದ ಸವಾಲು ಎದುರಾಗಲಿದೆ.
  • ವೃಷಭ
  • ಮಗಳ ಮದುವೆಯ ವಿಚಾರವಾಗಿ ವಿವಿಧ ರೀತಿಯ ಪರಿಸ್ಥಿತಿ ಎದುರಿಸುವಿರಿ. ಕಂಪ್ಯೂಟರ್ ಎಂಜಿನಿಯರ್‌ಗಳು ಕಂಪನಿ ಬದಲಿಸುವ ಅಭಿಪ್ರಾಯ ಹೊಂದಲಿದ್ದೀರಿ. ನಿತ್ಯದ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ.
  • ಮಿಥುನ
  • ಹಿಂದಿನ ಕಹಿ ಘಟನೆಗಳನ್ನು ಮರೆತು ಮುನ್ನೆಡೆದಲ್ಲಿ ಮುಂದಿನ ಸಿಹಿ ದಿನಗಳನ್ನು ಆನಂದದಿಂದ ಅನುಭವಿಸಬಹುದು. ವೈದ್ಯಕೀಯ ಲೋಕದಲ್ಲಿ ಅದರಲ್ಲೂ ಆಯುರ್ವೇದ ತಿಳಿದವರಿಗೆ ಬೇಡಿಕೆ ಹೆಚ್ಚಾದೀತು.
  • ಕರ್ಕಾಟಕ
  • ಇಷ್ಟು ದಿನ ನೀವು ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿ ಅಥವಾ ವಸ್ತು ನಿಮ್ಮ ಎಚ್ಚರ ತಪ್ಪಿದಲ್ಲಿ ನಿಮ್ಮಿಂದ ದೂರಾಗುವ ಸಾಧ್ಯತೆ ಇದೆ. ಶ್ರಮ ವಹಿಸಿದ್ದಲ್ಲಿ ಯಶಸ್ಸಿನ ಹಾದಿಯು ಅತ್ಯಂತ ಸುಗಮವಾಗಲಿದೆ.
  • ಸಿಂಹ
  • ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ಗಣಪತಿ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ. ಸ್ನೇಹಿತರ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವಿಕೆಯು ಮನಸ್ಸಿಗೆ ಖುಷಿ ತರಲಿದೆ. ಆದರೆ ನಾಳೆ ಬಗ್ಗೆ ಗಮನವಿರಲಿ.
  • ಕನ್ಯಾ
  • ಸಂಬಂಧಿಗಳ ಮನೆಯಲ್ಲಿ ಪರಿಚಯವಾದ ಕುಟುಂಬವು ನಿಮ್ಮ ಹತ್ತಿರದ ಸಂಬಂಧವಾಗಿ ಬದಲಾಗುವ ಎಲ್ಲ ಲಕ್ಷಣಗಳೂ ಇವೆ. ಗುರಿ ಸಾಧಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಅತ್ಯಂತ ಶೀಘ್ರವಾಗಿ ಪೂರ್ಣ ಗೊಳಿಸುವಿರಿ.
  • ತುಲಾ
  • ದೇಹಕ್ಕೆ ಅಗತ್ಯವಿರುವಷ್ಟು ಆಹಾರ ಹಾಗೂ ವಿಶ್ರಾಂತಿ ತೆಗೆದುಕೊಳ್ಳಬೇಕು. ಇದರಿಂದ ಆರೋಗ್ಯವಾಗಿರುವುದರಿಂದ ವೈದ್ಯರಿಂದ ದೂರವಿರಬಹುದು. ನಿಮ್ಮಿಷ್ಟದ ಬದುಕು ಪ್ರಯತ್ನದಿಂದ ನಿಮ್ಮದಾಗಲಿದೆ.
  • ವೃಶ್ಚಿಕ
  • ದಿನಗೂಲಿ ಕೆಲಸದಲ್ಲಿರುವವರು ಈ ದಿನದ ಕೆಲಸದಲ್ಲಿ ಹೊಸತನ ಕಂಡುಕೊಳ್ಳಲಿದ್ದೀರಿ. ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ನೀವು ಈ ದಿನ ಪ್ರಗತಿಯ ಹಾದಿ ಸ್ಪರ್ಶಿಸಲಿದ್ದೀರಿ.
  • ಧನು
  • ನಿಮ್ಮ ಮನಸ್ಸು ಇಂದು ಉತ್ತಮ ಗಾಳಿ, ಪ್ರಶಾಂತ ವಾತಾವರಣ ಮತ್ತು ಏಕಾಂತದ ನಿರೀಕ್ಷೆಯಲ್ಲಿರಲಿದೆ. ಹರಿತವಾದ ವಸ್ತುಗಳನ್ನು ಬಳಸುವಾಗ ವಿಶೇಷ ಗಮನ ಇರಲಿ. ನಿಮ್ಮ ಗೌರವ ಉಳಿಸಿಕೊಳ್ಳುವಂತವರಾಗಬೇಕು.
  • ಮಕರ
  • ಪರಂಪರೆಯಲ್ಲಿ ನಮಗೆ ಬಂದಿರುವ ಆಸ್ತಿ ಮತ್ತು ವಸ್ತುಗಳ ಮಾರಾಟದ ಯೋಚನೆಗಳಿದ್ದಲ್ಲಿ ಅದನ್ನು ಕೈ ಬಿಡುವುದು ಸೂಕ್ತ. ಈಗಷ್ಟೇ ಆರಂಭವಾಗಿದ್ದ ಹೊಸ ಕೆಲಸವು ನಿಲ್ಲುವ ಸೂಚನೆಗಳು ನಿಮಗೆ ಕಾಣಬಹುದು.
  • ಕುಂಭ
  • ವೃದ್ಧರು ಹಾಗೂ ಅಶಕ್ತರನ್ನು ಗೌರವದಿಂದ ಕಾಣುವ ನಿಮ್ಮ ಸ್ವಭಾವವು ನಿಮ್ಮಿಂದ ಆಕರ್ಷಿತರಾದವರಲ್ಲಿ ಬಹಳ ಗೌರವ ಮೂಡಿಸಲಿದೆ. ಮಾಡುವ ಕೆಲಸವು ಉತ್ತಮವಾಗಿ ಹಾಗೂ ಸರಾಗವಾಗಿ ಮುಗಿಯುತ್ತದೆ.
  • ಮೀನ
  • ಮಿತಿ ಮೀರಿದ ನಿಮ್ಮ ಪುತ್ರ ವ್ಯಾಮೋಹವು ಆತನ ಭವಿಷ್ಯಕ್ಕೆ ಕಂಟಕ ತಂದೊಡ್ಡುವ ಸಾಧ್ಯತೆಯೇ ಹೆಚ್ಚು. ಹಿಂದೆ ಕೊಟ್ಟ ಮಾತು ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿ. ಬೇರೆಯವರನ್ನು ಕಾರಣವಿಲ್ಲದೆ ದೂಷಿಸಬೇಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.