ADVERTISEMENT

ದಿನ ಭವಿಷ್ಯ | ಈ ರಾಶಿಯವರಿಗೆ ಇಂದು ಚಿನ್ನ ಖರೀದಿ ಯೋಗ ಇದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಅಕ್ಟೋಬರ್ 2024, 23:02 IST
Last Updated 18 ಅಕ್ಟೋಬರ್ 2024, 23:02 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಅನ್ಯರಿಂದ ಆರ್ಥಿಕ ಸಹಾಯ ನಿರೀಕ್ಷಿಸುವುದು ಸರಿಯಲ್ಲ ಹಾಗೂ ನಿಮ್ಮಿಂದ ಅದು ಸಾಧ್ಯವಾಗುವುದೂ ಇಲ್ಲ. ಹಿರಿಯರು ಹೇಳಿದಂತೆ ದೂರ ದೃಷ್ಟಿಯನ್ನು ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದನ್ನು ಕಲಿಯಿರಿ.
  • ವೃಷಭ
  • ವಾಣಿಜ್ಯ ಸಂಸ್ಥೆಯೊಂದರಲ್ಲಿ ಕಾಂಟ್ರಾಕ್ಟ್ ಪಡೆಯುವ ಪ್ರಯತ್ನವು ಫಲಕಾರಿ ಆಗಲಿದೆ. ಆದರೆ ಉದ್ಯೋಗಕ್ಕಾಗಿ ನಿಮ್ಮ ಖಾಸಗಿ ಜೀವನವನ್ನೇ ತ್ಯಾಗ ಮಾಡಬೇಕಾಗಬಹುದು. ಧ್ಯಾನ, ಭಜನೆಗಳತ್ತ ಮನಸ್ಸು ವಾಲುವುದು.
  • ಮಿಥುನ
  • ವಿಮೆ ಸಲಹೆಗಾರರಿಗೆ ವೃತ್ತಿ ರಂಗದಲ್ಲಿ ಉತ್ತಮ ಪ್ರಚೋದನೆಯಿಂದ ಯಶಸ್ಸು ಸಿಗಲಿದೆ. ಗೊತ್ತಿಲ್ಲದ ವಿಚಾರಗಳನ್ನು ಕೇಳಿ ತಿಳಿದುಕೊಳ್ಳುವ ಮೂಲಕ ಕೆಲಸಗಳು ಸುಗಮವಾಗುವುದು. ಬಂಧುಗಳ ಆಗಮನ ಸಂತೋಷ ಕೊಡಲಿದೆ.
  • ಕರ್ಕಾಟಕ
  • ಹೆಚ್ಚು ಜವಾಬ್ದಾರಿಯುತವಾದ ಹುದ್ದೆ ನಿಮ್ಮ ಪಾಲಿಗೆ ಬರಲಿದೆ. ಆದ್ದರಿಂದ ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಗಮನಹರಿಸಿ. ನವದಂಪತಿಗಳಿಗೆ ಸಂತಾನ ಭಾಗ್ಯ ದೊರೆತು ಸಂತೋಷವಾಗುವುದು.
  • ಸಿಂಹ
  • ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಪಶುಸಂಗೋಪನೆ ಯಿಂದ ಹೆಚ್ಚಿನ ಲಾಭ ಇರುವುದು. ವೃತ್ತಿ ಬರಹಗಾರರಿಗೆ ಅವಕಾಶಗಳು ಹಾಗೂ ಸರಕುಸಾಗಣಿಕೆ ಮತ್ತು ಸಾರಿಗೆ ವ್ಯವಸ್ಥೆಯವರಿಗೆ ವಿಫುಲ ಆದಾಯ ಇರುತ್ತದೆ.
  • ಕನ್ಯಾ
  • ದೇವರ ಮತ್ತು ಹಿರಿಯರ ಅನುಗ್ರಹದಿಂದ ಕುಟುಂಬದಲ್ಲಿನ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ವ್ಯವಹಾರಗಳಲ್ಲಿ ಮುಂದಾಲೋಚನೆ ಇಲ್ಲದೇ ಯಾವುದೇ ಭರವಸೆ ನೀಡಬೇಡಿ. ಚಿನ್ನ ಖರೀದಿ ಯೋಗ ಇದೆ.
  • ತುಲಾ
  • ಮನಸ್ಸು ಚಂಚಲವಾಗಿರುವುದು ಆದರೆ ದೇವಬಲವಿರುವ ಕಾರಣದಿಂದ ಕೈಹಾಕಿದ ಕೆಲಸ ಜಯದ ಜೊತೆಯಲ್ಲಿ ಪೂರ್ಣಗೊಳ್ಳುವುದು. ಕೆಲಸಗಳು ತೀವ್ರಗತಿಯಲ್ಲಿ ಸಾಗುತ್ತಿರುವುದು ತುಸು ಸಂತಸವೆನಿಸುವುದು.
  • ವೃಶ್ಚಿಕ
  • ಈ ದಿನದಂದು ಒಂದು ವಿಚಾರದ ಬಗೆಗಿನ ಯೋಚನೆಯಿಂದಾಗಿ ಉಳಿದೆಲ್ಲಾ ಕೆಲಸದಲ್ಲಿ ಮನಸ್ಸಿಲ್ಲದಂತಾಗುವುದು. ಹೊಸದನ್ನು ಕಲಿಯುವ ಉತ್ಸಾಹದಿಂದ ಮುನ್ನುಗ್ಗಿದಲ್ಲಿ ಯಶಸ್ಸು ಖಂಡಿತವಾಗಿ ಲಭಿಸುವುದು.
  • ಧನು
  • ಆರ್ಥಿಕ, ಮಾನಸಿಕ ಹಾಗು ದೈಹಿಕ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ಅಪೇಕ್ಷಿಸಬಹುದು. ಕಂಪನಿಯ ರಾಜಕೀಯ ಸನ್ನಿವೇಶಗಳು ನಿಮಗೆ ಅನುಕೂಲಕರವಾಗಿರುತ್ತದೆ, ಸ್ವಲ್ಪ ಜಾಣತನ ಪ್ರದರ್ಶಿಸಿ.
  • ಮಕರ
  • ಸಂಗೀತಗಾರರಿಗೆ ಪ್ರತಿಭೆ ಹೊರಹಾಕಲು ಹಾಗೂ ಜನಪ್ರಿಯರಾಗಲು ಉತ್ತಮ ವೇದಿಕೆ ಸಿಗಲಿದೆ. ಮಗನ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿ ಆತಂಕಗಳು ಬಾರದಂತೆ ತಾಯಿ ಶ್ರೀ ಶಾರದಾ ದೇವಿಯನ್ನು ಪ್ರಾರ್ಥಿಸಿ.
  • ಕುಂಭ
  • ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಪರಿಚಿತರಿಂದ ಆರ್ಥಿಕ ಬಲ ಸಿಗಲಿದೆ. ಆಫೀಸಿನಲ್ಲಿ ನಡೆಯುವ ವಿಚಾರಗಳಿಗೆ ಸಂಬಂಧಿಸಿ ಅಧಿಕಾರಿಗಳು ನಿಮ್ಮ ಪರವಾಗಿ ಇರುತ್ತಾರೆ. ಅವಿವಾಹಿತರಿಗೆ ಶುಭ ಫಲಗಳು ಲಭಿಸುವುದು.
  • ಮೀನ
  • ಉದ್ಯೋಗಾಕಾಂಕ್ಷಿಗಳು ಸಂದರ್ಶನ ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಿ. ಎಲ್ಲಾ ಕೆಲಸಗಳೂ ಉತ್ತಮ ಉದ್ದೇಶವನ್ನೇ ಹೊಂದಿರುವುದು. ಹಸಿರು ಬಣ್ಣ ಅದೃಷ್ಟ ತರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.