ADVERTISEMENT

ದಿನ ಭವಿಷ್ಯ: ರೈತರು ಬೆಳೆದ ಬೆಳೆಗೆ ನಿರೀಕ್ಷಿತ ಲಾಭ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಮಾರ್ಚ್ 2024, 22:30 IST
Last Updated 1 ಮಾರ್ಚ್ 2024, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮೇಷ: ಸ್ನೇಹಿತರೊಂದಿಗೆ ಸಂತೋಷ ಕೂಟಗಳಲ್ಲಿ, ಸಾಮಾಜಿಕ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಸಿಗುವುದು. ಮನಸ್ಸನ್ನು ಜಾಗೃತವಾಗಿಟ್ಟುಕೊಳ್ಳುವುದು ಕಷ್ಟವೆನಿಸಲಿದೆ. ಮನೆಯವರೊಂದಿಗೆ ಸಿಡುಕುತನ ಬೇಡ.
  • ವೃಷಭ
  • ವೃಷಭ: ಅನುಮಾನಕ್ಕೆ ಎಡೆ ಮಾಡಿಕೊಡುವ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ. ಅನವಶ್ಯಕವಾಗಿ ಮಕ್ಕಳಿಂದ ಖರ್ಚು ಹೆಚ್ಚಾಗುವ ಸಂಭವ ಇದೆ. ಕುಟುಂಬ ವರ್ಗದವರಲ್ಲಿ ಸುಖ, ಸಂತೋಷ ಕಂಡು ಬರುವುದು.
  • ಮಿಥುನ
  • ಮಿಥುನ: ರಾಜಕೀಯ ಭವಿಷ್ಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಬೇಕಾದ ಪ್ರಯತ್ನಗಳನ್ನು ನಡೆಸಿ. ಗೃಹ ನಿರ್ಮಾಣ ಅಥವಾ ನಿವೇಶನ ಖರೀದಿಯ ಕೆಲಸ ಆರಂಭಿಸಲು ಸಿದ್ಧತೆ  ಮಾಡಿಕೊಳ್ಳಬಹುದು.
  • ಕರ್ಕಾಟಕ
  • ಕರ್ಕಾಟಕ: ವ್ಯಕ್ತಿತ್ವಕ್ಕೆ ಅನುಗುಣವಾಗಿ ಸಮಾಜದಲ್ಲಿ ಗೌರವ ದೊರೆಯಲಿದೆ. ವೃತ್ತಿಪರವಾಗಿ ಬಹಳ ದಿನಗಳ ನಿರೀಕ್ಷಿತ ಕಾರ್ಯಕ್ಕೆ ಈ ದಿನ ಸಲಹೆ ದೊರಕುವುದು.ಭರವಸೆಯಂತೆ ನಡೆದುಕೊಳ್ಳುವಿರಿ.
  • ಸಿಂಹ
  • ಸಿಂಹ: ರೈತರು ಬೆಳೆದ ತರಕಾರಿ ಮತ್ತು ಹಣ್ಣಿನ ಬೆಳೆಗೆ ನಿರೀಕ್ಷಿತ ಲಾಭ ದೊರೆ ಯುತ್ತದೆ. ದುರ್ಜನರ ಸಹವಾಸದ ದುಷ್ಫಲ ಅನುಭವಕ್ಕೆ ಬರಲಿದೆ. ರಕ್ತ ಸಂಬಂಧೀ ಕಾಯಿಲೆ ಹೊಂದಿದವರು ಪರೀಕ್ಷೆ ಮಾಡಿಸುವುದು ಒಳ್ಳೆಯದು.
  • ಕನ್ಯಾ
  • ಕನ್ಯಾ: ಈಗಾಗಲೇ ಆರಂಭಿಸಿರುವ ಕೆಲಸವು ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತದೆ. ಉಲ್ಲಾಸ ಹಾಗೂ ಕಾರ್ಯಪ್ರವೃತ್ತಿ ಹೊಂದುತ್ತೀರಿ. ವಿದ್ಯಾಭ್ಯಾಸದಲ್ಲಿನ ಪ್ರಗತಿಯ ಫಲವಾಗಿ ವಿದ್ಯಾ ಸಂಸ್ಥೆಗಳಿಂದ ಮನ್ನಣೆ ಪಡೆಯುವಿರಿ.
  • ತುಲಾ
  • ತುಲಾ: ಸ್ವಂತ ಮನೆ ಮಾಡುವ ಬಗ್ಗೆ ಯೋಚಿಸಿ ಹಾಗೂ ಮುಖ್ಯ ಕೆಲಸಗಳಿಗೆ ಆಪ್ತರ ಸಲಹೆ ಸ್ವೀಕರಿಸುವುದು ಅಗತ್ಯ. ಅತಿ ತಿರುಗಾಟದಿಂದಾಗಿ ವಿಶ್ರಾಂತಿ ಬಯಸುವಿರಿ. ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಲು ಇನ್ನೂ ಸಮಯ ಬೇಕಿದೆ.
  • ವೃಶ್ಚಿಕ
  • ವೃಶ್ಚಿಕ: ಖಾಸಗಿ ಸಂಸ್ಥೆಗಳ ಆಡಳಿತಾಧಿಕಾರಿಗಳೊಡನೆ ಫಲಪ್ರದ ಮಾತುಕತೆಗಳು ನಡೆಸುವಂತಾಗುವುದು. ವ್ಯಕ್ತಿಯೊಬ್ಬರ ಪರಿಚಯ ಜೀವನದ ಶೈಲಿಯನ್ನೇ ಬದಲಿಸಲಿದೆ. ಬಹು ನಿರೀಕ್ಷಿತ ಧನ ಕೈ ಸೇರುವುದು.
  • ಧನು
  • ಧನು: ಹೊಸ ಯೋಜನೆಗೆ ಹೊಸ ರೂಪ ನೀಡಲು ಇಂದು ಬಹಳಷ್ಟು ಅವಕಾಶಗಳು ಎದುರಾಗುವುದು. ನಶಿಸಿ ಹೋಗಿದ್ದ ಪ್ರೇರಣೆಯು ಮತ್ತೆ ಮರಳುವುದು. ಹೆಚ್ಚಿನ ಆತ್ಮವಿಶ್ವಾಸದಿಂದ ಈ ದಿನವನ್ನು ಆರಂಭಿಸಿ.
  • ಮಕರ
  • ಮಕರ: ಸದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದೇ ಉತ್ತಮ ಎಂಬ ಭಾವನೆ ಸರಿಯಾಗಿದೆ. ಮಗಳಿಂದ ಸಂತೋಷದ ಸುದ್ದಿ ಕೇಳಲಿರುವಿರಿ. ಹಣಕಾಸಿನ ವಿಚಾರದಲ್ಲಿ ಪ್ರಬಲರಾಗಿರುವಿರಿ. ಆರೋಗ್ಯ ಉತ್ತಮಗೊಳ್ಳಲಿದೆ.
  • ಕುಂಭ
  • ಕುಂಭ: ಇತರರೊಂದಿಗೆ ಸಾಧ್ಯವಾದಷ್ಟು ಬೆರೆಯಲು ಪ್ರಯತ್ನಿಸಿ. ಅದರಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗಲಿದೆ. ಒಳ್ಳೆಯತನ ಹಾಗೂ ಸರಳತೆಯು ದುರುಪಯೋಗವಾಗದಂತೆ ಎಚ್ಚರ ವಹಿಸಿ.
  • ಮೀನ
  • ಮೀನ: ಗೆಳೆಯರ ಅಭಿಪ್ರಾಯಕ್ಕೆ ಅಥವಾ ಗೆಳೆತನಕ್ಕೆ ಸಂಬಂಧಿಸಿದ ವಿಷಯಗಳಿಗೆ  ಪೋಷಕರಿಂದ ಬಹಳಷ್ಟು ಪ್ರೋತ್ಸಾಹ ಸಿಗುವುದು. ವೃತ್ತಿಯ ಕೆಲಸಗಳಿಗಾಗಿ ಹೆಚ್ಚಿನ ಓಡಾಟ  ನಡೆಸಬೇಕಾಗಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.