ADVERTISEMENT

ದಿನ ಭವಿಷ್ಯ | ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಜುಲೈ 2025, 0:12 IST
Last Updated 5 ಜುಲೈ 2025, 0:12 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪತ್ನಿಯ ಆರೋಗ್ಯದಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗಬಹುದು. ಆಟಿಕೆ ವ್ಯಾಪಾರದಿಂದ ಅಧಿಕ ಲಾಭವನ್ನು ಪಡೆಯುವಂತಾಗಲಿದೆ. ದೀರ್ಘಕಾಲದ ಬಂಡವಾಳ ಹೂಡಿಕೆಯ ಆಲೋಚನೆ ಲಾಭವನ್ನು ತರುವುದು.
  • ವೃಷಭ
  • ನಿಮ್ಮ ಅಚ್ಚುಕಟ್ಟಾದ ಕೆಲಸಗಳಿಂದ ನಿಮ್ಮ ಮೇಲಿನ ಬೇರೆ ಜನರ ಅಭಿಪ್ರಾಯಗಳು ಬದಲಾಗುವುದು. ಸೌಂದರ್ಯದ ಬಗ್ಗೆ ಪ್ರಾಮುಖ್ಯತೆ ನೀಡುವ ಮನಸ್ಸಾಗಲಿದೆ. ವ್ಯಾಪಾರ ವ್ಯವಹಾರಗಳು ದಿನದಂತೆಯೇ ಸರಾಗವಾಗಿ ನಡೆಯಲಿದೆ.
  • ಮಿಥುನ
  • ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ಜೀವನದ ದಿನಗಳು ನೆಮ್ಮದಿದಾಯಕವಾಗಲಿದೆ. ದೇಹದ ಶ್ರಮಕ್ಕೆ ತಕ್ಕಂತಹ ಸಂಪಾದನೆ ಇಲ್ಲವಾದರೂ ನೆಮ್ಮದಿಯ ಕೊರತೆ ಇರುವುದಿಲ್ಲ.
  • ಕರ್ಕಾಟಕ
  • ಕಾರ್ಮಿಕ ವರ್ಗದವರಿಗೆ ಹೆಚ್ಚಿನ ಸವಲತ್ತುಗಳು ಒದಗುವುವು. ಪರೋಪಕಾರ ಮತ್ತು ಮಾನವೀಯತೆ ನಿಮ್ಮಮುಖ್ಯ ಧ್ಯೇಯವಾಗಿರಲಿ. ನಡೆ-ನುಡಿ ನೇರವಾದಷ್ಟು ಸಂಬಂಧದ ಮಧ್ಯವಿರುವ ಬಿರುಕು ಕಡಿಮೆಯಾಗುವುದು.
  • ಸಿಂಹ
  • ಬಹುಕಾಲಗಳಿಂದ ಬಾಕಿ ಇರುವ ಸಾಲ ತೀರಿಸುವಿಕೆಯಂತಹಾ ಯೋಜನೆ ಇದ್ದರೆ ಒಳ್ಳೆಯದು. ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡುವವರಿಗೆ ನಿಮ್ಮ ಕನಸುಗಳು ನನಸಾಗಲಿದೆ. ನಿಮ್ಮ ಏಳ್ಗೆಗೆ ನೆರವಾಗುವವರ ಸಹಾಯ ಸಿಗುವುದು.
  • ಕನ್ಯಾ
  • ಇಂದು ನಿಮಗೆ ಉಂಟಾದ ಹತಾಶೆಯಿಂದಾಗಿ ಮನಸ್ಸು ಆಧ್ಯಾತ್ಮದ ಕಡೆಗೆ ಎಳೆಯುತ್ತದೆ. ಇಂದಿನ ಖರ್ಚು ವೆಚ್ಚಗಳು ಹೆಚ್ಚೆ ಇರುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಕೃಷಿಗಾಗಿ ಪರಿಶ್ರಮ ವಹಿಸುವಿರಿ.
  • ತುಲಾ
  • ಹಲವು ವಿಚಾರಗಳು ಒಂದೇ ಬಾರಿಗೆ ನಿಮ್ಮನ್ನು ತಲುಪುವುದರಿಂದ ಒಮ್ಮೆ ತಳಮಳವಾಗಬಹುದು. ನಿಮ್ಮ ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದ ತೀರ್ಮಾನವನ್ನು ಕೈಗೊಳ್ಳುವುದು ಉತ್ತಮ. ಬೂದು ಬಣ್ಣ ಶುಭಪ್ರದ.
  • ವೃಶ್ಚಿಕ
  • ಜೀವನದ ಕಷ್ಟ ಸುಖಗಳು ತಿರುಗುವ ಚಕ್ರದಂತಿರುವುದರಿAದ ನೀವು ಒಳ್ಳೆಯ ದಿನಗಳು ನಿಮ್ಮ ಜೀವನದಲ್ಲಿದೆ ಎಂಬ ಆಶಾ ಭಾವನೆಯನ್ನು ಮರೆಯದಿರಿ. ಮನೆಯಲ್ಲಿ ಮಕ್ಕಳ ಒಡನಾಟದಿಂದಾಗಿ ಮನಸ್ಸು ಸರಾಗವಾಗುವುದು.
  • ಧನು
  • ಬಹಳವಾಗಿ ಹಚ್ಚಿಕೊಂಡ ಸಾಕುಪ್ರಾಣಿಯ ಅನಾರೋಗ್ಯವು ತೀರ ಬೇಸರ ಪಡಿಸುವ ಸಾಧ್ಯತೆ ಇದೆ. ಇಂದು ನಿಮ್ಮ ಸುತ್ತ ನಡೆಯುವ ಕೆಲವು ಸನ್ನಿವೇಶಗಳಿಂದಾಗಿ ನಿಮ್ಮನ್ನಗಲಿದ ನಿಮ್ಮ ಹಿರಿಯರ ನೆನಪು ತರಿಸಲಿದೆ.
  • ಮಕರ
  • ನಿಮ್ಮ ಆತ್ಮವಿಶ್ವಾಸವು ಒಳ್ಳೆಯದು. ಆದರೆ ಅತಿಯಾದ ಆತ್ಮವಿಶ್ವಾಸವು ನೀವು ಮಾಡುವ ಕೆಲಸದ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ. ನಿಮಗೆ ಒದಗಿಬರಲಿರುವ ಅವಕಾಶಗಳನ್ನು ನಿಮ್ಮ ಕೈತಪ್ಪಿಸುವ ಪ್ರಯತ್ನ ಕೆಲವರು ಮಾಡಲಿದ್ದಾರೆ.
  • ಕುಂಭ
  • ಬೇಕಾದ ಸಮಯದಲ್ಲಿಯು ವಿರಾಮವನ್ನು ನೀಡದೆಯೇ ದುಡಿಯುತ್ತಿದ್ದಲ್ಲಿ ನಿಮ್ಮ ದೇಹವು ನಿಮಗೆ ಅಗತ್ಯವಿರುವ ಸಮಯದಲ್ಲಿ ಕೈಕೊಡುವ ಸಾಧ್ಯತೆಗಳಿವೆ. ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ.
  • ಮೀನ
  • ಉದ್ಯೋಗದಲ್ಲಿ ಯಾವುದೇ ಮುಜುಗರ ಅಥವಾ ಹೆದರಿಕೆ ಇಲ್ಲದೆ ಸಮಯವನ್ನು ಬಳಸಿಕೊಳ್ಳಲು ಪ್ರಯತ್ನವನ್ನು ಮಾಡಿ. ಮಹಿಳೆಯರಿಗೆ ಕೆಲವು ಭಾವುಕರಾಗುವಂತಹಾ ಸನ್ನಿವೇಶಗಳು ಎದುರಾಗಬಹುದು
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.