ADVERTISEMENT

ದಿನ ಭವಿಷ್ಯ: ಈ ರಾಶಿಯ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ದೊರೆಯುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಏಪ್ರಿಲ್ 2025, 23:30 IST
Last Updated 10 ಏಪ್ರಿಲ್ 2025, 23:30 IST
   
ಮೇಷ
  • ಎಂದಿನಂತೆ ಮನಸ್ಸು ಹೆಚ್ಚು ಉಲ್ಲಾಸದಿಂದ ಕೂಡಿರುವುದರಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುವುದು. ಹೋಟೆಲ್ ಉದ್ಯಮಿಗಳಿಗೆ ಮತ್ತು ಅಡುಗೆಯ ವೃತ್ತಿಯವರಿಗೆ ಲಾಭದಾಯಕ.
  • ವೃಷಭ
  • ರಾಜಿಯಾಗುವ ಮನೋಭಾವ ಬೆಳೆಸಿಕೊಳ್ಳಿ. ಹೊಸ ಕ್ಷೇತ್ರದಲ್ಲಿ ಏಳಿಗೆ ಪಡೆಯುವಿರಿ. ಏಕಾಂಗಿಯಾಗಿರುವವರಿಗೆ ಸಂಗಾತಿ ಸಿಗುವ ಲಕ್ಷಣಗಳಿವೆ. ಸಗಟು ವ್ಯಾಪಾರಿಗಳಿಗೆ ಹೇರಳ ಲಾಭ.
  • ಮಿಥುನ
  • ಪಾಲುದಾರಿಕೆ ವಿಚಾರವಾಗಿ ಆಶ್ವಾಸನೀಯ ವರ್ತನೆಯಿಂದ ಸಹೋದರ ವರ್ಗದಲ್ಲಿ ಬಹಳ ಸಂತಸ ಉಂಟಾಗುವುದು. ಕೌಟುಂಬಿಕವಾಗಿ ತೆಗೆದುಕೊಳ್ಳಬೇಕಾದ ನಿರ್ಣಯದ ಬಗ್ಗೆ ಮೇಲ್ವಿಚಾರಣೆ ಮಾಡಬಹುದು.
  • ಕರ್ಕಾಟಕ
  • ಅಭಿರುಚಿಗೆ ತಕ್ಕಂಥ ವ್ಯಕ್ತಿಗಳೊಂದಿಗೆ ವ್ಯವಹರಿಸುವುದು ಹೆಚ್ಚು ಸೂಕ್ತ. ದೇಹದಲ್ಲಿ ಅಧಿಕ ಉಷ್ಣಾಂಶದಿಂದ ಅನಾರೋಗ್ಯ ಉಂಟಾಗುವ ಸಂಭವವಿದೆ. ಆರ್ಥಿಕವಾಗಿ ಸೌಕರ್ಯ ಪಡೆದುಕೊಳ್ಳುವಿರಿ.
  • ಸಿಂಹ
  • ಕೃಷಿ ಭೂಮಿಗೆ ಸಂಬಂಧಿಸಿದಂತೆ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ದೊರೆಯುತ್ತದೆ. ಕರಕುಶಲ ವಸ್ತು ತಯಾರಿಕರಿಗೆ ಆದಾಯದಲ್ಲಿ ಹೆಚ್ಚಳ. ಪ್ರಗತಿಯ ಲಕ್ಷಣಗಳು ನಿಚ್ಚಳವಾಗಿ ತೋರಿಬರುವುದು.
  • ಕನ್ಯಾ
  • ಧಾರ್ಮಿಕವಾಗಿ ಹೆಚ್ಚಿನ ಏಕಾಗ್ರತೆ ಹಾಗೂ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ. ಜನಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಬಹಳ ಕೆಲಸದ ಒತ್ತಡ ಇರುವುದು. ನಂಬಿಕೆ ವಿಶ್ವಾಸ ಅಧಿಕವಾಗುವುದು.
  • ತುಲಾ
  • ಕಾರ್ಯಕ್ಷೇತ್ರದಲ್ಲಿನ ನಷ್ಟ ಪ್ರಮಾಣ ಅಧಿಕವಾಗಿದ್ದರೂ, ಹೊಸ ಜವಾಬ್ದಾರಿಗಳು ಅರಸಿ ಬರಲಿವೆ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ. ಸಂಜೆಯ ಸಮಯದಲ್ಲಿ ಆಲಸ್ಯವಾಗಬಹುದು. ‌
  • ವೃಶ್ಚಿಕ
  • ಗುರಿಯನ್ನು ತಲುಪುವಲ್ಲಿ ಪರಿಶ್ರಮದ ಕೊರತೆ ಮತ್ತು ಅದೃಷ್ಟ ಹೀನತೆ ಸಮಬಲ ಸಾಧಿಸುವುದು. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಸಂತಸದ ಕ್ಷಣಗಳನ್ನು ತಂದುಕೊಳ್ಳುವ ಪ್ರಯತ್ನ ಮಾಡಿ.
  • ಧನು
  • ಜೀವನದಲ್ಲಿ ಬೇಸರಗೊಂಡಿರುವ ನೀವು ಮಾನಸಿಕವಾಗಿ ಸದೃಢರಾಗುವಿರಿ. ಭೋಗ ವಸ್ತುವಿನ ಖರೀದಿಯ ಅವಕಾಶವು ನಿಮ್ಮದಾಗಲಿದೆ. ಆರೋಗ್ಯದಲ್ಲಿ ವ್ಯತ್ಯಯಗಳು ಕಾಣಲಿವೆ.
  • ಮಕರ
  • ಗಣ್ಯ ವ್ಯಕ್ತಿಗಳ ವೈಯಕ್ತಿಕ ಭೇಟಿಯಲ್ಲಿ ಉಂಟಾದ ಕೆಲವು ಘಟನೆಗಳಿಂದ ಸಹಚರರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ವೈಯಕ್ತಿಕ ವ್ಯವಹಾರದಲ್ಲಿಯೂ ಗೌಪ್ಯತೆಯನ್ನು ಕಾಪಾಡುವುದು ಮುಖ್ಯ.
  • ಕುಂಭ
  • ಈ ದಿನ ಎಲೆಕ್ಟ್ರಿಕಲ್‌ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗುವುದು. ದಿನದಿಂದ ದಿನಕ್ಕೆ ತಂದೆ-ತಾಯಿ ಅವರ ಆರೋಗ್ಯ ಸ್ಥಿತಿಯು ಉತ್ತಮ. ಗೃಹ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ.
  • ಮೀನ
  • ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸೌಲಭ್ಯ ದೊರೆಯುವ ಅವಕಾಶಗಳಿದೆ. ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡಬೇಕಾದೀತು. ನೆನಪಿನಶಕ್ತಿ ವೃದ್ಧಿಯಾಗುವಂತೆ ಶಾರದೆಯಲ್ಲಿ ಪ್ರಾರ್ಥಿಸಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.