ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಏಕಾಗ್ರತೆ ಮುಖ್ಯ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಏಪ್ರಿಲ್ 2025, 23:30 IST
Last Updated 11 ಏಪ್ರಿಲ್ 2025, 23:30 IST
ದಿನ ಭವಿಷ್ಯ
ಮೇಷ
ರಾಜಕೀಯ ವ್ಯವಹಾರಗಳ ಪ್ರಬಲಾಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ. ಮುಸ್ಸಂಜೆಯ ಹೊತ್ತಿನಲ್ಲಿ ಮನೆಯಿಂದ ಹೊರ ಹೊರಡುವುದು ಸೂಕ್ತಕರವಲ್ಲ. ವಾಹನ ಖರೀದಿ ಬೇಡ.
ವೃಷಭ
ಮನೆಯ ಜನರ ಬದಲಾದ ವ್ಯಕ್ತಿತ್ವವನ್ನು ಮೊದಲಿನ ರೀತಿಗೆ ತರಲು ಪ್ರಯತ್ನಿಸುವಿರಿ. ಹಣವನ್ನು ಬೇಡದ ಜಾಗಗಳಲ್ಲಿ ಹೂಡಿಕೆ ಮಾಡುವ ಯೋಚನೆಗಳಿಗೆ ತಡೆ ಹಾಕಿ.
ಮಿಥುನ
ಎಲ್ಲಾ ಸಮಯದಲ್ಲಿಯೂ ಮೃದುಧೋರಣೆ ಒಳ್ಳೆಯದಲ್ಲ. ಧಾರಾವಾಹಿ ಅಥವಾ ಸಿನಿಮೀಯ ಘಟನೆಗಳು ಅವುಗಳಿಗೆ ಮಾತ್ರ ಸೀಮಿತ ಎಂಬುದು ಮನವರಿಕೆಯಾಗಲಿದೆ. ಆರೋಗ್ಯದ ಮೇಲೆ ಗಮನ ಹರಿಸುವಿರಿ.
ಕರ್ಕಾಟಕ
ಕೆಲವೊಂದು ಕಡೆ ಕಡಿಮೆ ಮಾತನಾಡುವುದರಿಂದಾಗಿ ಅವಿದ್ಯೆಯ ಪ್ರದರ್ಶನವಾಗುವುದು ತಪ್ಪುತ್ತದೆ. ಬಹಳ ಸಲೀಸು ಎಂದು ಅಂದುಕೊಂಡಿರುತ್ತೀರೊ ಅವರೇ ಕಠಿಣವಾಗಿ ತೋರುವರು.
ಸಿಂಹ
ಮಗಳ ಮೇಲೆ ಕಾಳಜಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಯಾವುದೇ ರೀತಿಯಲ್ಲೂ ತಪ್ಪುಗಳು ನಡೆಯದಂತೆ ನೋಡಿಕೊಳ್ಳಿ. ದೇವರಲ್ಲಿ ಮುಂದಿನ ದಿನಗಳು ಸರಾಗವಾಗಿ ಇರುವಂತೆ ಬೇಡಿಕೊಳ್ಳಿ.
ಕನ್ಯಾ
ಆರೋಗ್ಯದ ಮೇಲೆ ವಹಿಸುತ್ತಿರುವ ಕಾಳಜಿಯು ಕಡಿಮೆಯಾಗುತ್ತದೆ. ಈ ಋತುವಿನಲ್ಲಿ ಸೂಕ್ತವಾಗುವ ಆಹಾರ ಪದಾರ್ಥಗಳನ್ನು ಮಾತ್ರ ಸ್ವೀಕರಿಸಿ. ಸಾಮಾಜಿಕ ಜೀವನದಲ್ಲಿ ಮುಂದುವರಿಯುವಿರಿ.
ತುಲಾ
ನಾಯಕತ್ವ ಗುಣವನ್ನು ಹೊರತರಲು ಸ್ನೇಹಿತರು ಪ್ರಯತ್ನಿಸುತ್ತಾರೆ. ಯುವ ಕ್ರೀಡಾಪಟುಗಳಿಗೆ ಅವಕಾಶಗಳು ಸಿಗುತ್ತವೆ. ಫಾಸ್ಟ್ ಪುಡ್‌ಗಳ ಮೇಲಿನ ವ್ಯಾಮೋಹ ಬದಲಿಸಿಕೊಳ್ಳಿ.
ವೃಶ್ಚಿಕ
ಮನೆಯನ್ನು ಕಟ್ಟುವ ಮೊದಲು ಜಾಗಕ್ಕೆ ಸಂಬಂಧಪಟ್ಟಂತೆ ತಿಳಿದವರಿಂದ ವಿಚಾರಿಸಿ. ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹೆಂಡತಿ–ಮಕ್ಕಳ ಸಲಹೆ ಕೇಳಿ.
ಧನು
ಪೂಜೆ ಪುನಸ್ಕಾರಗಳ ಜತೆಯಲ್ಲಿ ಸ್ವಂತ ಪ್ರಯತ್ನ ಚೆನ್ನಾಗಿ ಇದ್ದಲ್ಲಿ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗುವಿರಿ. ಕೆಲಸ ಕಾರ್ಯದಲ್ಲಿ ಏಕಾಗ್ರತೆ ಮುಖ್ಯ. ಮನರಂಜನೆಗೆ ಅಧಿಕ ಸಮಯ ನೀಡುವಿರಿ.
ಮಕರ
ಉಗುರು ಹಾಗೂ ಹಸ್ತಗಳ ಸ್ವಚ್ಛತೆ ಕೊರತೆಯಿಂದ ಕಾಯಿಲೆಯನ್ನುಹೊಂದುವ ಸಾಧ್ಯತೆ. ಕೌಟುಂಬಿಕ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳದೆ ಇರುವುದು ಒಳ್ಳೆಯದು.
ಕುಂಭ
ಗೃಹಿಣಿಯರು ಮನಸ್ಸಿಲ್ಲದಿದ್ದರೂ ಕುಟುಂಬ ಸದಸ್ಯರ ಕೆಲವೊಂದು ಮಾತುಗಳಿಗೆ ಒಪ್ಪಿಕೊಳ್ಳಬೇಕಾಗುತ್ತದೆ. ಪ್ರಯಾಣದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಸಹಪ್ರಯಾಣಿಕರಿಂದ ತೊಂದರೆ ಉಂಟಾಗಬಹುದು.
ಮೀನ
ಅಜ್ಜಿ ಅಥವಾ ಅಜ್ಜನ ಕಡೆಯಿಂದ ಉಡುಗೊರೆಯು ಸಿಗುವ ಸಾಧ್ಯತೆ ಇದೆ. ವಾಹನ ಓಡಿಸುವಾಗ ಹೆಚ್ಚಿನ ಜಾಗ್ರತೆ ಮುಖ್ಯ . ವಾರಾಂತ್ಯವು ಪೂರ್ವ ನಿರ್ಧರಿತ ರೀತಿಯಲ್ಲಿ ನಡೆಯಲಿದೆ.