ದಿನ ಭವಿಷ್ಯ: ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಜೂನ್ 2025, 23:50 IST
Last Updated 23 ಜೂನ್ 2025, 23:50 IST
ಮೇಷ
ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರ್ಕಾರದಿಂದ ಒತ್ತಡ ಉಂಟಾಗಲಿದೆ. ಖಾದಿ ಉದ್ಯಮದವರು ಬಂಡವಾಳದ ಮೇಲೆ ಗಮನವಿರಿಸಿ.
ವೃಷಭ
ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯ ಪ್ರಾಪ್ತಿ. ಮಕ್ಕಳಿಂದ ಸುಖ, ನೆಮ್ಮದಿ ದೊರೆಯಲಿದೆ. ವಿದೇಶದಲ್ಲಿ ವಾಸ ಮಾಡುವ ಸಂಬಂಧಿಗಳಿಂದ ಒಳ್ಳೆಯ ಸುದ್ದಿ ಕೇಳುವಿರಿ.
ಮಿಥುನ
ವಿದ್ಯಾರ್ಥಿಗಳು ಉತ್ಸಾಹದಿಂದ ಮುಂದಿನ ಹೆಜ್ಜೆಗಳನ್ನಿರಿಸುವಿರಿ. ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ಮಾರಾಟ ಮತ್ತು ಲಾಭವಾಗುವುದು. ಸೋದರನ ಆಗಮನದಿಂದ ಮನೆಯಲ್ಲಿ ಸಂಭ್ರಮವಿರುವುದು.
ಕರ್ಕಾಟಕ
ಕೆಲಸ ಬದಲಿಸುವ ಯೋಚನೆ ಮಾಡುವವರಿಗೆ ಸಕಾಲ.ಗಳಿಕೆಯ ವಿಚಾರವಾಗಿ ಒದಗಿಬರುವ ಅವಕಾಶದ ಬಗ್ಗೆ ಚಿಂತಿಸುವಿರಿ. ಗುತ್ತಿಗೆ ಕೆಲಸದ ಬಾಕಿ ಹಣವು ಸಂದಾಯವಾಗುವುದು.
ಸಿಂಹ
ಅಗ್ನಿಯಲ್ಲಿ ಅಥವಾ ಶಸ್ತ್ರಗಳಿಂದ ಆಪತ್ತು ಎದುರಾಗುವ ಸಂಭವವಿರುವುದರಿಂದ ಅವುಗಳ ಉಪಯೋಗದಲ್ಲಿ ಜಾಗ್ರತರಾಗಿರಿ. ಭೂ ವ್ಯವಹಾರದಲ್ಲಿ ಹಿಂದಿನಿಂದ ನಡೆದ ಕೌಟುಂಬಿಕ ಕಲಹಕ್ಕೆ ಪೂರ್ಣವಿರಾಮ ಸಿಗಲಿದೆ.
ಕನ್ಯಾ
ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭವೊಂದು ಬರಲಿದೆ. ಉದ್ಯಮಿ ಹಾಗೂ ಅಧಿಕಾರಿಗಳಿಗೆ ಎಲ್ಲವೂ ಅವರ ನಿಯಂತ್ರಣದಲ್ಲಿ ಇರುವುದು.
ತುಲಾ
ಪಾಲುದಾರಿಕೆ ವ್ಯವಹಾರದಲ್ಲಿ ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ –ಸಂಬಂಧ ಮುಂದುವರಿಯಲಿದೆ. ಮನೆಯ ಪರಿಸ್ಥಿತಿಯು ಸುಧಾರಿಸುವುದು. ಹಣಕಾಸಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ವೃಶ್ಚಿಕ
ಮಕ್ಕಳ ಆಲಸ್ಯತನ ಪೋಷಕರಲ್ಲಿ ದೊಡ್ಡ ಸಮಸ್ಯೆಯಾಗುವುದು. ವ್ಯಾವಹಾರಿಕ ವಿಷಯದಲ್ಲಿ ಚರ್ಚೆ ಮಾಡುವುದು ಲಾಭ ಉಂಟುಮಾಡುತ್ತದೆ. ಇನ್ನೊಬ್ಬರಿಗೆ ಸಾಲ ಕೊಡುವಾಗ ಸರಿಯಾಗಿ ಯೋಚಿಸಿ, ನಿರ್ಧರಿಸಿ.
ಧನು
ಇತರರಿಗಿಂತ ಭಿನ್ನವಾದ ಹಾಗೂ ಧನಾತ್ಮಕವಾದ ನಿರ್ಧಾರವನ್ನು ತಗೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಸಾಧನೆಗೆ ಪೂರಕವಾದ ದಿನವಾಗಿದೆ. ಧೈರ್ಯ –ಸಾಮರ್ಥ್ಯದಿಂದ ಸಹೋದ್ಯೋಗಿಗಳ ಮನ ಗೆಲ್ಲುವಿರಿ.
ಮಕರ
ಹಿಂದುರುಗಿ ಬರಬೇಕಾಗಿರುವ ಹಣ ಸಂಜೆಯ ವೇಳೆಗೆ ಕೈ ಸೇರುವುದು. ಕೆಲಸಗಳ ಬಗ್ಗೆ ಅನುಭವಸ್ಥರೊಂದಿಗೆ ಮಾತುಕತೆ ನಡೆಸು ವುದರಿಂದ ತಿಳಿವಳಿಕೆ ವೃದ್ಧಿ. ಮಗನಿಗಾಗಿ ವೈದ್ಯಕೀಯ ಖರ್ಚು ಹೆಚ್ಚುವುದು.
ಕುಂಭ
ವ್ಯವಹಾರದ ವಿಚಾರದಲ್ಲಿ ಇನ್ನೂ ಅನುಭವ ಬೇಕಾಗುವುದು. ವೃತ್ತಿಯನ್ನು ಸವಾಲೆಂಬಂತೆ ಸ್ವೀಕರಿಸುವ ಸನ್ನಿವೇಶಗಳು ಎದುರಾಗುತ್ತದೆ. ದಕ್ಷಿಣಾಮೂರ್ತಿಯ ಆರಾಧನೆ ಯಶಸ್ಸಿನ ದಾರಿ ತೋರಿಸಲಿದೆ.
ಮೀನ
ಮಿತ್ರನೊಬ್ಬನ ಭೇಟಿ ಮನಸ್ಸಿಗೆ ಮುದ ತರುವುದು. ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮಸ್ಥೈರ್ಯ ತಂದು ಕೊಡುವುದು. ನಯವಾದ ಮಾತುಗಳಿಂದ ಮಕ್ಕಳನ್ನು ತಿದ್ದುವ ಪ್ರಯತ್ನ ಮಾಡಿ.