ದಿನ ಭವಿಷ್ಯ: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಬಳಲುವಂತೆ ಆಗುವುದು
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಜನವರಿ 2026, 23:30 IST
Last Updated 19 ಜನವರಿ 2026, 23:30 IST
ದಿನ ಭವಿಷ್ಯ
ಮೇಷ
ಮುಖಂಡತ್ವದ ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರಿಂದ ನಿರೀಕ್ಷೆಗೂ ಮೀರಿದ ಸಹಾಯ ದೊರೆಯಲಿದೆ. ಸರ್ಕಾರಿ ಗುತ್ತಿಗೆ ಕೆಲಸದ ವಿಫುಲ ಅವಕಾಶಗಳು ಒದಗಿ ಬರಲಿವೆ.
ವೃಷಭ
ವಿದೇಶದಲ್ಲಿ ಇರುವವರು ಸ್ವದೇಶದ ಬಂಧುಗಳನ್ನು ಭೇಟಿಯಾಗಲು ಬರಲಿದ್ದಾರೆ. ಪದೇ ಪದೇ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಬಳಲುವಂತೆ ಆಗುವುದು. ಪರಿಸರವೂ ಇದಕ್ಕೆ ಪೂರಕವಾಗಿರುವುದು.
ಮಿಥುನ
ಬಿಡುವು ಸಿಕ್ಕ ವೇಳೆಯಲ್ಲಿ ಮಾಡಬೇಕಾದ ಕೆಲಸಗಳನ್ನು ಇಟ್ಟುಕೊಂಡಿದ್ದರೂ ಅವುಗಳನ್ನು ಮಾಡದೆ ಕಾಲಹರಣ ಮಾಡುವ ಸಾಧ್ಯತೆ ಇದೆ. ಉದ್ಯಮಗಳಲ್ಲಿ ಸ್ವಂತ ಶ್ರಮ ಅಗತ್ಯ.
ಕರ್ಕಾಟಕ
ಮನೆಯಲ್ಲಿ ಸಹೋದರರಿದ್ದರೂ ನೀವೇ ಕೆಲವು ಕೆಲಸವನ್ನು ಮಾಡಬೇಕಾದ ಪರಿಸ್ಥಿತಿಯಿಂದ ಕುಪಿತರಾಗುವಿರಿ. ಎತ್ತರದಲ್ಲಿ ನಿಂತು ಕೆಲಸ ಮಾಡುವವರು, ಸಾಹಸಿ ಪ್ರವೃತ್ತಿಯವರು ಜಾಗ್ರತರಾಗಿರಿ.
ಸಿಂಹ
ವೃತ್ತಿರಂಗದಲ್ಲಿ ಅನವಶ್ಯಕವಾಗಿ ಕೋಪಕ್ಕೆ ಗುರಿಯಾಗುವುದನ್ನು ಸ್ನೇಹಿತರು ತಪ್ಪಿಸುವರು. ಶುಭ ಸಮಾರಂಭದ ಸಡಗರದಲ್ಲಿ ವಸ್ತ್ರಾಭರಣ ಖರೀದಿಗೆ ಹೆಚ್ಚಿನ ಹಣ ವಿನಿಯೋಗ ಮಾಡುವಿರಿ.
ಕನ್ಯಾ
ದೇವಸ್ಥಾನದಲ್ಲಿನ ವಿಶೇಷ ಕಾರ್ಯಕ್ರಮಗಳಿಗೆ ಸಹಾಯ ಅಪೇಕ್ಷಿಸುವವರ ವಿಚಾರದಲ್ಲಿ ಮುಂಜಾಗ್ರತೆ ಇರಲಿ. ಪತಿ ಪತ್ನಿಯರ ಮುಸುಕಿನ ಗುದ್ದಾಟ ಮೂರನೆ ವ್ಯಕ್ತಿಯ ಸಹಾಯದಿಂದ ನಿವಾರಣೆಯಾಗುತ್ತದೆ.
ತುಲಾ
ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಯ ಜೊತೆಯಲ್ಲಿ ತುಲನೆ ಮಾಡುವುದನ್ನು ನಿಲ್ಲಿಸಿ. ರಕ್ಷಣಾ ವೃತ್ತಿಗೆ ಸಂಬಂಧಿಸಿದವರು ಎಚ್ಚರದಿಂದ ಕಾರ್ಯನಿರ್ವಹಿಸಿ. ಪುಸ್ತಕ ವ್ಯಾಪಾರಿಗಳಿಗೆ ಉತ್ತಮ ಲಾಭವಾಗುವುದು.
ವೃಶ್ಚಿಕ
ಬಹುದಿನಗಳ ನಿರೀಕ್ಷೆಯ ವಿಚಾರಗಳು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದಲ್ಲಿ ಲಾಭ ಕಾಣುವಿರಿ. ಕಾರ್ಯವನ್ನು ಜನರ ಎದುರು ಸಮರ್ಥಿಸಿಕೊಳ್ಳಲು ಸಾಕಷ್ಟು ಕಾರಣ ಸಿಗಲಿವೆ. ಸಿನಿಮಾ ವ್ಯವಹಾರಗಳಿಂದ ಭರ್ಜರಿ ಲಾಭ.
ಧನು
ಬದುಕಿನಲ್ಲಿ ಸಕಾರಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿ. ತಾತ್ಕಾಲಿಕ ಉದ್ಯೋಗ ದೊರೆತು ಅಲ್ಪ ಪ್ರಮಾಣದ ಸಮಾಧಾನವಾಗುವುದು. ಮನೆಯಲ್ಲಿ ಮಂಗಳ ಕಾರ್ಯದ ತಯಾರಿ ನಡೆಯುವುದು.
ಮಕರ
ಜವಾಬ್ದಾರಿಯನ್ನು ಕಳೆದುಕೊಳ್ಳಲು ತೆಗೆದುಕೊಂಡ ನಿರ್ಧಾರಗಳು ನಿಮ್ಮ ಗೌರವವನ್ನು ಕಡಿಮೆಗೊಳಿಸಬಹುದು. ವ್ಯವಸಾಯಕ್ಕೆ ಸಂಬಂಧಿಸಿದ ಕೆಲಸವನ್ನು ಸಂತೋಷದಿಂದ ಹಾಗೂ ಶ್ರದ್ಧೆಯಿಂದ ಮಾಡುವಿರಿ.
ಕುಂಭ
ಉತ್ತಮ ಒಡನಾಟ ಹೊಂದಿರುವ ವ್ಯಕ್ತಿಗಳೊಂದಿಗೆ ವ್ಯಾವಹಾರಿಕವಾಗಿ ಲಾಭತರುವ ಆಲೋಚನೆಯನ್ನು ಹಂಚಿಕೊಳ್ಳುವುದರಿಂದ ವಿವಿಧ ರೀತಿಯಲ್ಲಿ ನಷ್ಟ ಆಗುವುದು. ಆಸ್ತಿ ವಿಷಯಗಳು ಬಗೆಹರಿಯಲಿವೆ.
ಮೀನ
ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿದ್ದ ನಿಮಗೆ, ಅತಿ ಹೆಚ್ಚಿನ ವರಮಾನದ ಮಾರ್ಗವನ್ನು ಆಪ್ತ ಸ್ನೇಹಿತರೊಬ್ಬರು ತೋರುವರು. ಪರಿವಾರದವರೊಡನೆ ಸಂಚಾರ ಮಾಡುವಂತಹ ಸಾಧ್ಯತೆ ಇದೆ.