ದಿನ ಭವಿಷ್ಯ: ವ್ಯಾಪಾರ-ವ್ಯವಹಾರ, ಪ್ರಯಾಣ ನಡೆಸುವಾಗ ನಯವಂಚಕರ ಬಗ್ಗೆ ಎಚ್ಚರವಹಿಸಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಜನವರಿ 2026, 23:30 IST
Last Updated 21 ಜನವರಿ 2026, 23:30 IST
ಮೇಷ
ಉದ್ಯೋಗದಲ್ಲಿ ಸ್ಥಳ ಬದಲಾವಣೆ ಅಥವಾ ಅಧಿಕ ಜವಾಬ್ದಾರಿ ಹೊರಬೇಕಾಗುವ ಸಾಧ್ಯತೆಗಳಿವೆ. ಯುವ ಕಲಾವಿದರಿಗೆ ಅವಕಾಶಗಳು ಲಭಿಸಿವೆ. ಬರವಣಿಗೆಯಲ್ಲಿ ಉತ್ಸಾಹ ಹೆಚ್ಚುವುದು.
ವೃಷಭ
ವಿದೇಶಿ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದಗಳನ್ನು ಮಾಡಿಕೊಳ್ಳುವಂಥ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಮಂಜಸವಲ್ಲ. ಆಜ್ಞೆಯನ್ನು ಪಾಲಿಸುವ ಜನರು ಸಿಗುತ್ತಾರೆ.
ಮಿಥುನ
ಆದಾಯ ಅಧಿಕವಾಗಿಯೇ ಇದ್ದರೂ ಖರ್ಚಿಗೆ ಬೇಕಾದಂಥ ಸಂದರ್ಭದಲ್ಲಿ ಕೈಗೆ ಎಟುಕದೇ ಇರುವಂಥ ಪರಿಸ್ಥಿತಿ ಉಂಟಾಗುತ್ತದೆ. ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಪಡೆಯುವ ಕಾಲ ನಿಮ್ಮದಾಗಲಿದೆ.
ಕರ್ಕಾಟಕ
ಉತ್ತಮ ಯೋಚನಾ ಸಾಮರ್ಥ್ಯವನ್ನು ಹೊಂದಿದ್ದರೂ ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳದಿರಿ. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟಿದ್ದ ಭರವಸೆ ಹುಸಿಯಾಗದಂತೆ ಕಾರ್ಯ ನಿರ್ವಹಿಸಿ.
ಸಿಂಹ
ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡದಿರುವಂಥ ತೀರ್ಮಾನವನ್ನು ತೆಗೆದುಕೊಳ್ಳಬೇಡಿ. ಮಕ್ಕಳ ವಿಚಾರದಲ್ಲಿ ತುಂಬಾ ಭಾವನಾತ್ಮಕವಾದ ನಿರ್ಧಾರವನ್ನು ತೆಗೆದುಕೊಳ್ಳುವಿರಿ.
ಕನ್ಯಾ
ಹಿರಿಯರಿಂದ ಅಪೂರ್ಣವಾದಂಥ ಕೆಲಸವನ್ನು ಪೂರ್ಣಗೊಳಿಸುವಂಥ ಅಪೂರ್ವ ಅವಕಾಶ ಒದಗಿ ಬರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಮತ್ತು ಪ್ರಯಾಣ ನಡೆಸುವಾಗ ನಯವಂಚಕರ ಬಗ್ಗೆ ಎಚ್ಚರವಹಿಸಿ.
ತುಲಾ
ಸ್ವಲ್ಪ ಎಚ್ಚರ ತಪ್ಪಿದಲ್ಲಿ ಶತ್ರುಗಳಿಂದ ತುಂಬಾ ಸುಲಭವಾಗಿ ಮೋಸ ಹೋಗುವಂಥ ಸಾಧ್ಯತೆಗಳಿವೆ. ಹಲವು ದಿನದ ಮನಸ್ತಾಪದ ಬಳಿಕ ಮನೆಯಲ್ಲಿ ಮಕ್ಕಳ ಸಡಗರ ಕಂಡು ಮನಸ್ಸಿಗೆ ಸಂತೋಷವಾಗುವುದು.
ವೃಶ್ಚಿಕ
ಉದ್ಯೋಗದಲ್ಲಿ ವೈಯಕ್ತಿಕ ಅನಿಸಿಕೆ ಕಂಪನಿಗಳಿಗೆ ಸಹಾಯಕಾರಿ. ವೃತ್ತಿ ತರಬೇತಿ ಹೊಂದಿದ ಕುಶಲ ಕರ್ಮಿಗಳಿಗೆ ಆದಾಯ ಹೆಚ್ಚಲಿದೆ. ಮಕ್ಕಳಿಗಾಗಿ ಆಟಿಕೆ ವಸ್ತುಗಳ ಖರೀದಿ ಮಾಡುವಂತಾಗುವುದು.
ಧನು
ದವಸ ಧಾನ್ಯಗಳ ಸಗಟು ವ್ಯಾಪಾರಿಗಳು ಹಾಗು ದಲ್ಲಾಳಿಗಳು ಹೆಚ್ಚಿನ ಅನುಕೂಲವನ್ನು ಪಡೆಯುವರು. ಕೊಡು ಕೊಳ್ಳುವಿಕೆಯ ವ್ಯವಹಾರದಿಂದ ಅಧಿಕ ಲಾಭ ಬರಲಿದೆ. ವ್ಯವಹಾರ ನಿಮಿತ್ತ ದೂರದ ಪ್ರಯಾಣ ಸಂಭವಿಸಲಿದೆ.
ಮಕರ
ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ. ಹೋಟೆಲ್ ಉದ್ಯಮದವರಿಗೆ ಅತ್ಯಧಿಕ ಲಾಭ ಪ್ರಾಪ್ತಿ . ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಫಲವನ್ನು ಅನುಭವಿಸುವಿರಿ.
ಕುಂಭ
ಅನಾರೋಗ್ಯ ಅಥವಾ ಇನ್ನಿತರ ಕಾರಣಗಳಿಂದ ಏರುಪೇರಾಗಿದ್ದ ಮಕ್ಕಳ ವೇಳಾಪಟ್ಟಿಯು ನಿಧಾನವಾಗಿ ಸರಿಯಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮ ಅಗತ್ಯವೆನಿಸಲಿದೆ.
ಮೀನ
ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳಬಹುದು ಜಾಗ್ರತೆವಹಿಸಿ. ಹಿರಿಯರನ್ನು ತೀರ್ಥಯಾತ್ರೆಗೆ ಕಳುಹಿಸುವ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಿ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳಿ.