ದಿನ ಭವಿಷ್ಯ: ಈ ರಾಶಿಯವರಿಗೆ ಸಜ್ಜನರ ಸಹವಾಸದಿಂದ ಜ್ಞಾನ ವೃದ್ಧಿಯಾಗುತ್ತದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
ಮೇಷ
ವೃತ್ತಿ ಜೀವನಕ್ಕೆ ಸಂಬಂಧಿತ ವಿಚಾರದಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲು ಆಪ್ತರ ಸಲಹೆ ಪಡೆಯುವುದು, ಏಕಾಂತದಲ್ಲಿ ಯೋಚಿಸುವುದು ಉತ್ತಮ. ಉನ್ನತ ವ್ಯಾಸಂಗಕ್ಕೆ ನೇರವಾಗಿ ಆಯ್ಕೆಯಾಗುವ ಸಂಭವವಿದೆ.
ವೃಷಭ
ಉದರ ಸಂಬಂಧಿ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಸ್ನಿಗ್ಧ ಆಹಾರ ಅಥವಾ ದ್ರವ ರೂಪಿ ಆಹಾರವನ್ನು ಹೆಚ್ಚು ಸೇವಿಸಿ. ತಾವು ಬಯಸಿದ ಕ್ಷೇತ್ರದಲ್ಲಿ ಹೊಸ ತಿರುವನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.
ಮಿಥುನ
ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸೂಕ್ತ ಸ್ಥಳದ ಹುಡುಕಾಟದಲ್ಲಿರುವ ನಿಮಗೆ ಅನುಕೂಲಕರವಾದ ಸ್ಥಳ ದೊರಕುವುದು. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತರಾಗುವಿರಿ.
ಕರ್ಕಾಟಕ
ಕಬ್ಬಿಣ ಅಥವಾ ಯಂತ್ರೋಪಕರಣ ತಯಾರಿ, ರಿಪೇರಿಯವರಿಗೆ ಅಗ್ನಿ ಅಥವಾ ಶಸ್ತ್ರ ಸಂಬಂಧಿ ಆಪತ್ತು ಎದುರಾಗಬಹುದು. ದಿನಸಿ ವರ್ತಕರಿಗೆ ಲಾಭ ಆಗಲಿದೆ. ಸರ್ಕಾರಿ ಕಚೇರಿಯಲ್ಲಿನ ಕೆಲಸ ಪ್ರಗತಿ ಹೊಂದುವುದು.
ಸಿಂಹ
ನೀವೇ ಬೆಳೆಸಿದ ವ್ಯಕ್ತಿಗಳಿಂದ ಮೋಸ ಹೋಗುವ ಸಂಭವವಿದೆ. ಅತಿಯಾದ ನಂಬಿಕೆ ನಿಮಗೆ ಮುಳುವಾಗಬಹುದು. ಸಾಲದ ಹಣ ಮರುಪಾವತಿ ಮಾಡುವುದರಿಂದ ಆತ್ಮಾಭಿಮಾನವನ್ನು ಕಾಪಾಡಿಕೊಳ್ಳಬಹುದು.
ಕನ್ಯಾ
ನೀವು ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ನಿಮಗೆ ತಿಳಿಯುವುದು. ಮನೆ ನಿರ್ಮಾಣದ ಕೆಲಸ ಪೂರ್ತಿಗೊಳ್ಳುವ ಹಂತ ತಲುಪಿ ಸಂತೋಷವಾಗುತ್ತದೆ.
ತುಲಾ
ನಿಮ್ಮ ಆರ್ಥಿಕ ಜೀವನದ ಹೊಸ ಅಧ್ಯಾಯ ಆರಂಭವಾಗುವ ಎಲ್ಲಾ ಸಾಧ್ಯತೆಗಳಿವೆ. ಅಕ್ರಮವಾದ ವ್ಯವಹಾರಗಳನ್ನು ಕೈಬಿಡುವುದು ಕ್ಷೇಮಕರ. ಗೃಹೋಪಯೋಗಿ ವಸ್ತುಗಳ ಮಾರಾಟದಿಂದ ಲಾಭ ಬರಲಿದೆ.
ವೃಶ್ಚಿಕ
ಸಜ್ಜನರ ಸಹವಾಸದಿಂದ ಪ್ರಾಪಂಚಿಕವಾದ ಜ್ಞಾನ ವೃದ್ಧಿಯಾಗುತ್ತದೆ. ಸ್ನೇಹಪರ, ದಾನ-ಧರ್ಮದ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನ ಮಾನಗಳು ಲಭಿಸುವುದು. ವಾಹನ ಚಲಾಯಿಸುವಾಗ ಎಚ್ಚರವಿರಲಿ.
ಧನು
ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ನಂತರದಲ್ಲಿ ಷೇರುಗಳನ್ನು ಕೊಳ್ಳುವ ಯೋಜನೆಗೆ ಮುಂದಾಗಿ. ಭಾವನಾತ್ಮಕ ಪ್ರವೃತ್ತಿಯು ನಿಮ್ಮನ್ನು ಹೆಚ್ಚು ಕೆಲಸ ಮಾಡಿಸುವಂತೆ ಮಾಡಬಹುದು.
ಮಕರ
ಚಿತ್ರಕಲೆ ಅಥವಾ ಪಠ್ಯೇತರ ವಿಷಯದಲ್ಲಿ ನಿಮ್ಮ ಉತ್ಸಾಹ ಇಮ್ಮಡಿಗೊಳ್ಳಲಿದೆ. ತೀರ್ಥಯಾತ್ರೆಗಳನ್ನು ಮಾಡಬೇಕೆಂದುಕೊಂಡವರು ಆ ಬಗ್ಗೆ ಯೋಚಿಸಲು ಇದು ಪ್ರಶಸ್ತ ಸಮಯ.
ಕುಂಭ
ಮಗಳು ಹಾಗೂ ಕುಟುಂಬ ವರ್ಗದವರಿಗೆ ಸಹಾಯ ಅಗತ್ಯವಿರು ವುದರಿಂದ ಅದನ್ನು ನಡೆಸಿಕೊಡಿ. ಕೆಲವರಿಗೆ ನಿಮ್ಮ ಮೇಲಿದ್ದ ಸಂಶಯದ ಮನೋಭಾವ ನಿವಾರಣೆಯಾಗುವುದು.
ಮೀನ
ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರು ನಿಮ್ಮ ವ್ಯಾಪ್ತಿಯನ್ನು ವಿದೇಶಕ್ಕೆ ಪಸರಿಸುವ ಯೋಚನೆ ಮಾಡಬಹುದು. ಹಣ್ಣು, ಹೂವು, ತರಕಾರಿ ಮಾರಾಟಗಾರರಿಗೆ ಲಾಭ ನಷ್ಟಗಳ ಮಿಶ್ರ ಫಲ ಅನುಭವಕ್ಕೆ ಬರಲಿದೆ.