ದಿನ ಭವಿಷ್ಯ: ಈ ರಾಶಿಯವರು ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
ದಿನ ಭವಿಷ್ಯ
ಮೇಷ
ಮಾನಸಿಕ ಉದ್ವೇಗ ಕಂಡುಬಂದೀತು. ಪ್ರತಿ ಕಾರ್ಯಕ್ಕೂ ಹಲವು ಬಾರಿ ಪ್ರಯತ್ನ ಪಡಬೇಕಾದೀತು. ದೈಹಿಕ ಮತ್ತು ಧಾರ್ಮಿಕ ಪ್ರಯತ್ನದಿಂದ ದುಷ್ಫಲವನ್ನು ಸುಧಾರಿಸಿಕೊಳ್ಳಬಹುದು. ಧಾರ್ಮಿಕ ಶ್ರದ್ಧೆ ಬೆಳೆಸಿಕೊಳ್ಳಿರಿ.
ವೃಷಭ
ಮಕ್ಕಳ ವಿಷಯದಲ್ಲಿ ಸಂಯಮದೊಂದಿಗೆ ವರ್ತಿಸುವುದು ಉತ್ತಮ. ಕುಟುಂಬದ ಜತೆಯಲ್ಲಿ ಸಂತೋಷವಾಗಿ ಕಳೆಯುವ ಹಾಗೆ ಆಗುವುದು. ರಾಜಕೀಯ ವಲಯದಲ್ಲಿನ ಬದಲಾವಣೆಯ ಲಾಭ ಪಡೆಯುವಿರಿ.
ಮಿಥುನ
ಆಫೀಸಿನ ಕೆಲಸಗಳಲ್ಲಿ ಕೆಲವೊಂದು ವಿಷಯಗಳನ್ನು ಪರಾಮರ್ಶಿಸಲೇಬೇಕಾದ ಸಮಯ ಬರಲಿದೆ. ಮನೆಯವರ ಬೇಡಿಕೆಗಳನ್ನು ಸ್ವಲ್ಪಮಟ್ಟಿಗೆ ಪೂರೈಸುವಿರಿ. ಜಮೀನಿನ ಕೆಲಸಗಳತ್ತ ಮುತುವರ್ಜಿ ವಹಿಸಿ.
ಕರ್ಕಾಟಕ
ಅಪೇಕ್ಷೆಯ ಜತೆಯಲ್ಲಿ ಮತ್ತು ಸಹೋದರನ ಸಹಾಯದ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ಜರುಗಲಿವೆ. ಅಧಿಕ ಬಂಡವಾಳವನ್ನು ಹಾಕುವುದರಿಂದ ಕೈ ಸುಡುವಂತಾಗುವುದು.
ಸಿಂಹ
ಮಸಾಲೆ ಪದಾರ್ಥ ಅಥವಾ ಖಾದ್ಯಗಳ ಮಾರಾಟಗಾರರಿಗೆ ಅಧಿಕ ಮಟ್ಟದಲ್ಲಿ ಬೇಡಿಕೆಗಳು ಉಂಟಾಗಲಿವೆ. ನಿರೀಕ್ಷಿತ ಕಡೆಗಳಿಂದ ಧನ ಒದಗಿ ಬರುವುದು. ತಂದೆ-ತಾಯಿ ಆರೋಗ್ಯ ಸ್ಥಿತಿ ಉತ್ತಮ.
ಕನ್ಯಾ
ಮಹತ್ವದ ವಿಷಯಗಳನ್ನು ಗಂಭೀರವಾಗಿ ಚಿಂತಿಸಿ ನಿರ್ಧರಿಸುವುದು ಉತ್ತಮ. ವೈದ್ಯರು ಅದರಲ್ಲೂ ನರರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿತನದಿಂದ ಪಾಪ ಸಂಗ್ರಹವಾಗುವುದು.
ತುಲಾ
ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದದ್ದಾಗಿರುತ್ತದೆ. ವ್ಯವಹಾರಗಳ ಬಗ್ಗೆ ಗಮನ ಹರಿಸಿ. ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ.
ವೃಶ್ಚಿಕ
ಸಂದರ್ಶನಕಾರರಿಗೆ ಪ್ರಭಾವಿ ವ್ಯಕ್ತಿಗಳನ್ನು ಸಂದರ್ಶಿಸಲು ಒಂದು ಅವಕಾಶ ಸಿಗುವುದು. ಆರಿಸಿಕೊಂಡ ಮಾರ್ಗದಲ್ಲಿ ಸರಿ– ತಪ್ಪುಗಳ ಬಗ್ಗೆ ಯೋಚಿಸಿ ಏಕಾಗ್ರತೆಯಿಂದ ಮುನ್ನಡೆಯಿರಿ.
ಧನು
ಕೌಟುಂಬಿಕ ಅಭಿವೃದ್ಧಿಯಂಥ ವಿಷಯಗಳಿಂದ ಬಹಳ ಖುಷಿ ಸಿಗುವುದು. ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆಯನ್ನು ಪಡೆಯುವಿರಿ. ಆತ್ಮಾಭಿಮಾನವನ್ನು ಸಂರಕ್ಷಿಸಿಕೊಳ್ಳಿ. ಸ್ಫೂರ್ತಿಯಿಂದ ಕಾರ್ಯ ನಿರ್ವಹಿಸಿ.
ಮಕರ
ಧನಾಗಮನಕ್ಕೆ ಹಲವು ದಾರಿಗಳು ಕಂಡರೂ, ಸರಿಯಾದ ದಾರಿ ಆರಿಸಿಕೊಳ್ಳಿ. ಧಾರ್ಮಿಕ ವ್ಯಕ್ತಿಗಳಿಂದ ಅನುಕೂಲವಾಗುತ್ತದೆ. ವಿಷ್ಣು ಸಹಸ್ರನಾಮ ಪಠಣದಿಂದ ಶುಭವಾಗುವುದು.
ಕುಂಭ
ಯಂತ್ರೋಪಕರಣಗಳ ಮಾರಾಟದಿಂದ ಲಾಭ ಇರಲಿದೆ. ಮನೆ ಕಟ್ಟಲು ಅಥವಾ ಮನೆಯನ್ನು ನವೀಕರಿಸಲು ಸುಸಮಯ. ಬೇಕಾದ ಹಣದ ವ್ಯವಸ್ಥೆ ನಿರಾಯಾಸವಾಗಿ ಆಗಲಿದೆ. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣುವುದು.
ಮೀನ
ನಿತ್ಯದ ವೃತ್ತಿಗಳಲ್ಲಿ ಬದಲಾವಣೆ ಇರುವುದಿಲ್ಲ. ಪ್ರತಿ ವರ್ಷ ಕರ್ತವ್ಯದಂತೆ ಮಾಡಿಕೊಂಡುಬಂದ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸಿ. ಬೇಸರ ಕಳೆಯಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ.