ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ನೀಲಿ ಬಣ್ಣ ಶುಭ ತರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 22 ಏಪ್ರಿಲ್ 2025, 22:30 IST
Last Updated 22 ಏಪ್ರಿಲ್ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನೀತಿ ನಿಯಮಗಳಿಗೆ ಬದ್ಧರಾದರೆ, ಉದ್ಯೋಗದಲ್ಲಿ ಹೆದರುವ ಅವಶ್ಯಕತೆ ಬರದು. ಮಕ್ಕಳ ವಿಷಯದಲ್ಲಿ ಅಸಡ್ಡೆ ತೋರಿಸಬಾರದು ಎಂಬುವುದು ಅರಿವಾಗಲಿದೆ. ದುರ್ಗಾದೇವಿಯಿಂದ ಶುಭ ಪ್ರಾಪ್ತಿ.
  • ವೃಷಭ
  • ದಾರಿಹೋಕನಿಗಾಗಿ ಅಥವಾ ಬಾಲ್ಯಸ್ನೇಹಿತನಿಗಾಗಿ ಸಮಯ ಮತ್ತು ಹಣವನ್ನು ಖರ್ಚು ಮಾಡುವ ಪರಿಸ್ಥಿತಿ ಒದಗಿ ಬರುವುದು. ಸಜ್ಜನರ ಸಹವಾಸ ಮಾಡುವುದರಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ.
  • ಮಿಥುನ
  • ಹಿಂದಿನಿಂದ ಬಾಕಿ ಇದ್ದ ಕಚೇರಿ ಕೆಲಸಗಳನ್ನು ಪೂರ್ತಿಗೊಳಿಸುವ ಪ್ರಯತ್ನ ಮಾಡಿ. ರಾಜಕಾರಣಿಗಳಿಗೆ ಮತ್ತು ಸರ್ಕಾರಿ ನೌಕರರಿಗೆ ಸುಯೋಗ. ತೀರ್ಥಕ್ಷೇತ್ರ ದರ್ಶನ ಮಾಡುವ ಬಗ್ಗೆ ತೀರ್ಮಾನಿಸಿ.
  • ಕರ್ಕಾಟಕ
  • ಗೆಳೆಯನ ಮನೆಯ ಸಮಾರಂಭಗಳಲ್ಲಿ ಭಾಗವಹಿಸುವ ಯೋಗವಿದೆ. ಹೆಚ್ಚಿನ ಜವಬ್ದಾರಿಯ ಕೆಲಸವನ್ನು ನಿಭಾಯಿಸುವುದರಿಂದ ತಲೆ ನೋವು. ಗೃಹ ಉಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ.
  • ಸಿಂಹ
  • ಮಕ್ಕಳ ಎಲ್ಲಾ ಮಾತುಗಳಿಗೆ ಸಮ್ಮತಿ ಸೂಚಿಸುವುದು ಸೂಕ್ತವಲ್ಲ. ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ನಡೆಯುವುದು ತಪ್ಪು ಎಂಬ ತಿಳುವಳಿಕೆ ಬರುವುದು. ವರುಣ ದೇವನು ನಿಮ್ಮ ಇಚ್ಚೆಯನ್ನು ಪೂರೈಸುವನು.
  • ಕನ್ಯಾ
  • ಯಾತ್ರಿಕರಿಗೆ ದೇವತಾನುಗ್ರಹದಿಂದಾಗಿ ಸಮಯೋಚಿತ ಸಹಾಯಾಹಸ್ತ ದೊರೆಯಲಿದೆ. ಬಟ್ಟೆ ವ್ಯಾಪಾರಸ್ಥರಿಗೆ ಒಳ್ಳೆಯ ದಿನವಾಗಿ ತೋರುವುದಿಲ್ಲ. ನಿಧಾನವಾಗಿ ಆರ್ಥಿಕ ಸುಧಾರಣೆಯನ್ನು ಕಾಣುವಿರಿ.
  • ತುಲಾ
  • ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆಯು ವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಮುಂದೂಡುವುದು ಉತ್ತಮ.
  • ವೃಶ್ಚಿಕ
  • ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವುದು. ಸಾಮಾಜಿಕ ಜೀವನ‌ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಮಧ್ಯಮವರ್ಗದವರು ಹೆಚ್ಚಿನ ಕೌಟುಂಬಿಕ ಸಂತಸವನ್ನು ಅನುಭವಿಸುವಿರಿ.
  • ಧನು
  • ವೃತ್ತಿ ಬದುಕಿನಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹೆಚ್ಚಿನ ವಿರೋಧ ಬರಲಿದೆ. ಆದ್ದರಿಂದ ವಿಶ್ವಾಸದಲ್ಲಿ ಯಾವುದೇ ರೀತಿಯ ಸಲಹೆ ಸೂಚನೆಯನ್ನು ನೀಡಬೇಡಿ. ಆಹಾರ ಪದಾರ್ಥದಲ್ಲಿ ಇಷ್ಟಪಟ್ಟಿದ್ದು ಕೈ ಸೇರುವುದು.
  • ಮಕರ
  • ಈ ದಿನದ ನಿಮ್ಮ ಕಾರ್ಯಗಳು ಸಮಯಕ್ಕೆ ಸರಿಯಾಗಿ ನಡೆಯುವುದು ಅಸಾಧ್ಯ, ಆದ್ದರಿಂದ ಕೆಲಸ-ಕಾರ್ಯಗಳನ್ನು ಮುಂಚಿತವಾಗಿ ಆರಂಭಿಸಿ. ಗೃಹ ಚಟುವಟಿಕೆಯಲ್ಲಿ ಸಹೋದರರಿಂದ ಸಹಾಯವನ್ನು ಪಡೆಯುವಿರಿ.
  • ಕುಂಭ
  • ವಿದ್ಯಾರ್ಥಿಗಳು ವಿಶೇಷ ಅಧ್ಯಯನ ಕ್ಷೇತ್ರಗಳಲ್ಲಿ ಮುಂದುವರೆಯಲು ಸರಳವಾಗಿ ಬಹಳಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ಸ್ವ ಪ್ರಯತ್ನದಿಂದ ಆಸ್ತಿ ಸಂಪಾದನೆ ಮಾಡುವಿರಿ. ನೀಲಿ ಬಣ್ಣ ಶುಭವನ್ನು ತರುವುದು.
  • ಮೀನ
  • ಧಾರ್ಮಿಕತೆಗೆ ಸಮಯವನ್ನು ಮೀಸಲಿಡಿ. ಮನೆಯ ರಕ್ಷಣಾ ವ್ಯವಸ್ಥೆ ಯಲ್ಲಿ ನಿಮ್ಮಿಂದ ಯಾವುದೇ ರೀತಿಯ ತಪ್ಪುಗಳು ಸಂಭವಿಸದಂತೆ ಜಾಗ್ರತೆ ವಹಿಸಿ. ಸಿಹಿತಿನಿಸುಗಳ ತಯಾರಕರಿಗೆ ಬೇಡಿಕೆ ಹೆಚ್ಚಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.